ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕ್ರಿಕೆಟ್ ವಿಶ್ವಕಪ್ ಟೂರ್ನಿಯ 31ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯ ಗೆದ್ದು ಪಾಕಿಸ್ತಾನ ತಂಡ ಸೆಮೀಸ್ ಆಸೆಯನ್ನು ಜೀವಂತ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ಉಭಯ ತಂಡಗಳು ಮುಖಾಮುಖಿಯಾಗಿವೆ. ಪಾಕಿಸ್ತಾನ ಇದುವರೆಗೆ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಒಟ್ಟು 6 ಪಂದ್ಯಗಳನ್ನಾಡಿ ನಾಲ್ಕರಲ್ಲಿ ಸೋತಿದೆ. ಎರಡು ಮಾತ್ರ ಗೆದ್ದು ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ ಆರು ಅಂಕಗಳೊಂದಿಗೆ ಅಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ಯೋಚನೆಯಲ್ಲಿ ಪಾಕ್ ತಂಡವಿದೆ. ಇಂದು ಬಾಂಗ್ಲಾ ಪಂದ್ಯದ ಬಳಿಕ ಮುಂದೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.
-
Bangladesh win the toss and elect to bat first in Kolkata 🏏
— ICC Cricket World Cup (@cricketworldcup) October 31, 2023 " class="align-text-top noRightClick twitterSection" data="
Who will come out on the top in this battle of Asian rivals?#CWC23 | #PAKvBAN 📝: https://t.co/vd8M5LqE6L pic.twitter.com/xt7Na6LG9H
">Bangladesh win the toss and elect to bat first in Kolkata 🏏
— ICC Cricket World Cup (@cricketworldcup) October 31, 2023
Who will come out on the top in this battle of Asian rivals?#CWC23 | #PAKvBAN 📝: https://t.co/vd8M5LqE6L pic.twitter.com/xt7Na6LG9HBangladesh win the toss and elect to bat first in Kolkata 🏏
— ICC Cricket World Cup (@cricketworldcup) October 31, 2023
Who will come out on the top in this battle of Asian rivals?#CWC23 | #PAKvBAN 📝: https://t.co/vd8M5LqE6L pic.twitter.com/xt7Na6LG9H
ಮತ್ತೊಂದೆಡೆ, ಬಾಂಗ್ಲಾದೇಶ ತಂಡದ ಪ್ರದರ್ಶನ ಕೂಡ ವಿಶ್ವಕಪ್ನಲ್ಲಿ ನೀರಸವಾಗಿದೆ. ಇಲ್ಲಿಯವರೆಗೆ ಆರು ಪಂದ್ಯಗಳನ್ನಾಡಿ ಐದರಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಸದ್ಯ 9ನೇ ಸ್ಥಾನದಲ್ಲಿರುವ ಬಾಂಗ್ಲಾ ಈಗಾಗಲೇ ಬಹುಕೇತ ಟೂರ್ನಿಯಿಂದ ಹೊರಬಿದ್ದಿದೆ. ಇಂದು ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ತಂಡದ ವಿರುದ್ಧ ಔಪಚಾರಿಕವಾಗಿ ಸೆಣಸಲಿದೆ.
ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಒಟ್ಟು 38 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಪಾಕ್ ತಂಡ ಮೇಲುಗೈ ಹೊಂದಿದ್ದು, 33 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ಐದು ಬಾರಿ ಮಾತ್ರ ಪಾಕಿಸ್ತಾನವನ್ನು ಮಣಿಸಿದೆ. ಇಂದಿನ ಪಂದ್ಯಕ್ಕೆ ಪಾಕಿಸ್ತಾನದಲ್ಲಿ ಮೂರು ಬದಲಾವಣೆಗಳು ಆಗಿವೆ. ಇಮಾಮ್ ಉಲ್ ಹಕ್, ಶಾದಾಬ್ ಮತ್ತು ಮೊಹಮ್ಮದ್ ನವಾಜ್ ಹೊರಗುಳಿದಿದ್ದು, ಫಖರ್ ಜಮಾನ್, ಅಘಾ ಸಲ್ಮಾನ್ ಹಾಗೂ ಉಸಾಮಾ ಮಿರ್ ಸ್ಥಾನ ಪಡೆದಿದ್ದಾರೆ.
ತಂಡಗಳ ಮಾಹಿತಿ: ಬಾಂಗ್ಲಾದೇಶ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹುಸೇನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮಹಮ್ಮದುಲ್ಲಾ, ತೌಹಿದ್ ಹೃದಯೋಯ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಶಾಹೀನ್ ಅಫ್ರಿದಿ, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್
ಇದನ್ನೂ ಓದಿ: ಏಕದಿನ ವಿಶ್ವಕಪ್: ಇಂದು ಬಾಂಗ್ಲಾದೇಶ vs ಪಾಕಿಸ್ತಾನ ನಡುವೆ ಪಂದ್ಯ, ಸೋತ ತಂಡಕ್ಕೆ ಸೆಮೀಸ್ ಬಾಗಿಲು ಬಂದ್