ಲಖನೌ (ಉತ್ತರ ಪ್ರದೇಶ): ಇಲ್ಲಿನ ಎಕಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆದರ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಡಚ್ಚರು 263 ಗುರಿಯನ್ನು ನೀಡಿದ್ದಾರೆ. ಸಿಂಹಳೀಯ ತಂಡದ ದಿಲ್ಶನ್ ಮಧುಶಂಕ ಮತ್ತು ಕಸುನ್ ರಜಿತ ಅವರ ಪರಿಣಾಮಕಾರಿ ಬೌಲಿಂಗ್ನಿಂದ 49.4 ಓವರ್ಗೆ 262 ರನ್ಗಳನ್ನು ಗಳಿಸಿ ನೆದರ್ಲೆಂಡ್ ಸರ್ವಪತನ ಕಂಡಿತು.
- " class="align-text-top noRightClick twitterSection" data="">
ಟಾಸ್ ಗೆದ್ದ ನಾಯಕ ಸ್ಕಾಟ್ ಎಡ್ವರ್ಡ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ, ತಂಡ ಸತತ ವಿಕೆಟ್ಗಳನ್ನು ಕಳೆದುಕೊಂಡಿತು. 22ನೇ ಓವರ್ ವೇಳೆಗೆ ತಂಡ 91 ರನ್ಗೆ 6 ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಂತರ ಕೆಳಕ್ರಮಾಂಕದಲ್ಲಿ ಬಂದ ಬ್ಯಾಟಿಂಗ್ ನೆರವಿನಿಂದ ತಂಡ ಶ್ರೀಲಂಕಾಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು.
ಅಗ್ರ, ಮಧ್ಯಮ ಕ್ರಮಾಂಕದ ಕುಸಿತ: ಕಸುನ್ ರಜಿತ ನೆದರ್ಲೆಂಡ್ ತಂಡಕ್ಕೆ ಮೊದಲ ಮೂರು ವಿಕೆಟ್ ಕಬಳಿಸಿ ಆರಂಭಿಕ ಆಘಾತವನ್ನು ನೀಡಿದರು. ಡಚ್ಚರ ವಿಕ್ರಮಜಿತ್ ಸಿಂಗ್ (4), ಮ್ಯಾಕ್ಸ್ ಓಡೌಡ್ (16), ಕಾಲಿನ್ ಅಕರ್ಮನ್ (29) ಪಿಚ್ಗೆ ಸೆಟ್ ಆಗುವ ಮುನ್ನವೇ ಪೆವಿಲಿಯನ್ಗೆ ತೆರಳಬೇಕಾಯಿತು. ನಂತರ ದಿಲ್ಶನ್ ಮಧುಶಂಕ ಬಾಸ್ ಡಿ ಲೀಡೆ (6) ಮತ್ತು ತೇಜ ನಿಡಮನೂರು (9) ಅವರ ವಿಕೆಟ್ ಪಡೆದರು. ಈ ವೇಳೆಗೆ ನೆದರ್ಲೆಂಡ್ 71ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಮಹೇಶ್ ತೀಕ್ಷ್ಣ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಪಡೆದರು.
-
Netherlands put up a total of 262 runs, and now it's Sri Lanka's turn to chase it down and secure those crucial first two points of the competition! #CWC23 #SLvNED #LankanLions pic.twitter.com/au3y7yHPui
— Sri Lanka Cricket 🇱🇰 (@OfficialSLC) October 21, 2023 " class="align-text-top noRightClick twitterSection" data="
">Netherlands put up a total of 262 runs, and now it's Sri Lanka's turn to chase it down and secure those crucial first two points of the competition! #CWC23 #SLvNED #LankanLions pic.twitter.com/au3y7yHPui
— Sri Lanka Cricket 🇱🇰 (@OfficialSLC) October 21, 2023Netherlands put up a total of 262 runs, and now it's Sri Lanka's turn to chase it down and secure those crucial first two points of the competition! #CWC23 #SLvNED #LankanLions pic.twitter.com/au3y7yHPui
— Sri Lanka Cricket 🇱🇰 (@OfficialSLC) October 21, 2023
ಸೈಬ್ರಾಂಡ್, ವ್ಯಾನ್ ಬೀಕ್ ಶತಕದ ಜೊತೆಯಾಟ: 6 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಏಳನೇ ವಿಕೆಟ್ಗೆ ಒಂದಾದ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಮತ್ತು ಲೋಗನ್ ವ್ಯಾನ್ ಬೀಕ್ ಜೋಡಿ ಉತ್ತಮ ಪಾಲುದಾರಿಕೆ ಮಾಡಿತು. 22ನೇ ರಿಂದ 46ನೇ ಓವರ್ ವರೆಗೆ ಆಡಿದ ಜೋಡಿ ತಂಡಕ್ಕೆ 130 ರನ್ ಸೇರಿಸಿತು. ಇದರಿಂದ 100 ರನ್ಗೆ ಆಲ್ಔಟ್ ಆಗುವ ಸ್ಥಿತಿಯಲ್ಲಿದ್ದ ತಂಡ 200ರ ಗಡಿ ದಾಟಿತು. ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಜೋಡಿ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
-
Dilshan Madushanka and Kasun Rajitha were on fire, each taking four wickets! 🔥🔥🔥🔥#CWC23 #SLvNED #LankanLions pic.twitter.com/bOWQiR9suk
— Sri Lanka Cricket 🇱🇰 (@OfficialSLC) October 21, 2023 " class="align-text-top noRightClick twitterSection" data="
">Dilshan Madushanka and Kasun Rajitha were on fire, each taking four wickets! 🔥🔥🔥🔥#CWC23 #SLvNED #LankanLions pic.twitter.com/bOWQiR9suk
— Sri Lanka Cricket 🇱🇰 (@OfficialSLC) October 21, 2023Dilshan Madushanka and Kasun Rajitha were on fire, each taking four wickets! 🔥🔥🔥🔥#CWC23 #SLvNED #LankanLions pic.twitter.com/bOWQiR9suk
— Sri Lanka Cricket 🇱🇰 (@OfficialSLC) October 21, 2023
ಇನ್ನಿಂಗ್ಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ 82 ಬಾಲ್ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸ್ನ ನೆರವಿನಿಂದ 70 ರನ್ ಕಲೆಹಾಕಿದರೆ, 75 ಬಾಲ್ ಫೇಸ್ ಮಾಡಿ 1 ಸಿಕ್ಸ್ ಮತ್ತು ಬೌಂಡರಿಯ ಸಹಾಯದಿಂದ 59 ರನ್ ಗಳಿಸಿ ವಿಕೆಟ್ ಕೊಟ್ಟರು. ಇನ್ನಿಂಗ್ಸ್ ಮುಕ್ತಾಯಕ್ಕೆ 2 ಬಾಲ್ ಬಾಕಿ ಇರುವಂತೆ (49.4) ಶ್ರೀಲಂಕಾ ಬೌಲರ್ಗಳು ನೆದರ್ಲೆಂಡ್ನ ಎಲ್ಲ ವಿಕೆಟ್ಗಳನ್ನು ಕಬಳಿಸಿದರು. ಲಂಕಾ ಪರ ಕಸುನ್ ರಜಿತ, ದಿಲ್ಶನ್ ಮಧುಶಂಕ ತಲಾ ನಾಲ್ಕು ವಿಕೆಟ್ ಪಡೆದರೆ, ಮಹೇಶ್ ತೀಕ್ಷ್ಣ ಒಂದು ವಿಕೆಟ್ ಉರುಳಿಸಿದರು.
ಇದನ್ನೂ ಓದಿ: ಬೌಂಡರಿ ಲೈನ್ನಲ್ಲಿದ್ದ ಮಿಚೆಲ್ ಮಾರ್ಷ್ಗಾಗಿ ಬರ್ತ್ ಡೇ ಸಾಂಗ್ ಮೂಲಕ ವಿಶ್ ಮಾಡಿದ ಅಭಿಮಾನಿಗಳು