ETV Bharat / sports

ಪಾಕಿಸ್ತಾನ ಮಣಿಸಿ ಹ್ಯಾಟ್ರಿಕ್​ ಜಯ ದಾಖಲಿಸಿದ ಭಾರತ.. ಪಾಕ್​ ವಿರುದ್ಧ ವಿಶ್ವಕಪ್​ನ 8ನೇ ಗೆಲುವು

author img

By ETV Bharat Karnataka Team

Published : Oct 14, 2023, 6:57 PM IST

Updated : Oct 14, 2023, 8:48 PM IST

ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಜಯ ದಾಖಲಿಸಿದೆ.

ICC Cricket World Cup 2023
ICC Cricket World Cup 2023

ಅಹಮದಾಬಾದ್ (ಗುಜರಾತ್): ನಾಯಕ ರೋಹಿತ್​ ಶರ್ಮಾ ಮತ್ತು ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕದ ಇನ್ನಿಂಗ್ಸ್​ನಿಂದ ಪಾಕಿಸ್ತಾನದ ವಿರುದ್ಧ ಭಾರತ 19.3 ಓವರ್​ಗಳನ್ನು ಉಳಿಸಿಕೊಂಡು 7 ವಿಕೆಟ್​ಗಳ ಗೆಲುವನ್ನು ದಾಖಲಿಸಿದೆ. ವಿಶ್ವಕಪ್​ನ ಪಾಕಿಸ್ತಾನದ ವಿರುದ್ಧದ ಎಂಟನೇ ಮುಖಾಮಖಿಯಲ್ಲೂ ಟೀಮ್​ ಇಂಡಿಯಾ ಜಯಭೇರಿ ಬಾರಿಸಿ ಅಜೇಯವಾಗಿ ಮುಂದುವರೆದಿದೆ.

2023ರ ವಿಶ್ವಕಪ್​ನ ಲೀಗ್​ ಹಂತದಲ್ಲಿ ಭಾರತಕ್ಕೆ ಮೂರನೇ ಗೆಲುವು ಇದಾಗಿದೆ. ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ನವ ರಾತ್ರಿ ಹಬ್ಬಕ್ಕೆ ಕಳೆಕಟ್ಟಿದಂತಾಗಿದೆ. ವಿಜಯದಶಮಿಗೆ 10 ದಿನ ಮುಂಚಿತವಾಗಿಯೇ ಟೀಮ್​ ಇಂಡಿಯಾಕ್ಕೆ ಭರ್ಜರಿ ಜಯ ಸಿಕ್ಕಿದೆ. ಇದರಿಂದ ಭಾರತ ತಂಡ ವಿಶ್ವಕಪ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಪಾಕಿಸ್ತಾನವನ್ನು 191 ರನ್​ಗೆ ಕಟ್ಟಿಹಾಕಿತು. ಪಾಕಿಸ್ತಾನ ಪರ ನಾಯಕ ಬಾಬರ್​ ಅಜಮ್​ ಮತ್ತು ರಿಜ್ವಾನ್​ ಮಾತ್ರ ಉತ್ತಮ ಪ್ರದರ್ಶನ ನೀಡಿದರು. 192 ರನ್​ನ ಗುರಿ ಬೆನ್ನತ್ತಿದ ಭಾರತ ತ್ವರಿತ ಆರಂಭವನ್ನು ಪಡೆಯಿತಾದರೂ, ವೇಗವಾಗಿ ವಿಕೆಟ್​ನ್ನು ಕಳೆದುಕೊಂಡಿತು. ಡೆಂಗ್ಯೂವಿನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಶುಭಮನ್​ ಗಿಲ್​ ಅಬ್ಬರಿಸುವ ಮನೋಸ್ಥಿತಿಯಲ್ಲಿ ಮೈದಾನಕ್ಕಿಳಿದಿದ್ದರು. ಅದರಂತೆ ಆರಂಭದಲ್ಲೇ 4 ಬೌಂಡರಿಯಿಂದ 16 ರನ್​ ಗಳಿಸಿ ವೇಗವಾಗಿ ಇನ್ನಿಂಗ್ಸ್​ ಕಟ್ಟುತ್ತಿರುವಾಗ ಮಿಸ್​ ಟೈಮಿಂಗ್​ ಶಾಟ್​ನಿಂದ ವಿಕೆಟ್​ ಕೊಟ್ಟರು.

ಚೇಸಿಂಗ್​ ಕಿಂಗ್​ ಹಾಗೂ ಪಾಕಿಸ್ತಾನದ ವಿರುದ್ಧ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದ ವಿರಾಟ್​ ಕೊಹ್ಲಿಯೂ ಚುಟುಕು ಇನ್ನಿಂಗ್ಸ್​ಗೆ ಪೆವಿಲಿಯನ್​ಗೆ ಮರಳಿದರು. ಮೈದಾನಕ್ಕೆ ಇಳಿಯುತ್ತಿದ್ದಂತೆ ಪಾಕಿಸ್ತಾನ ಬೌಲರ್​ಗಳ ಮೇಲೆ ಸವಾರಿ ಮಾಡಿದ ಅವರು 3 ಬೌಂಡರಿ ಗಳಿಸಿ 16 ರನ್​ ಗಳಿಸಿದ್ದರು. ಆದರೆ ಹಸನ್​ ಅಲಿ ಬೌಲಿಂಗ್​ನಲ್ಲಿ ಸಿಕ್ಸ್​​ಗೆ ಪ್ರಯತ್ನಿಸಿದ ವಿರಾಟ್​ ಕ್ಯಾಚ್​ ಕೊಟ್ಟರು.

14 ರನ್​ನಿಂದ ಶತಕ ಕಳೆದುಕೊಂಡ ರೋಹಿತ್​: ಎರಡು ವಿಕೆಟ್​ ಬಿದ್ದರೂ ನಾಯಕ ರೋಹಿತ್​ ಶರ್ಮಾ ಅಬ್ಬರದ ಇನ್ನಿಂಗ್ಸ್​ ಆಡಿದರು. ಅಫ್ಘಾನಿಸ್ತಾನದ ವಿರುದ್ಧ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಹಿಟ್​ ಮ್ಯಾನ್​ ರೋಹಿತ್​ ಅದೇ ಫಾರ್ಮ್​ನ್ನು ಮುಂದುವರೆಸಿದರು. ಪಾಕ್​ನ ಬೌಲರ್​ಗಳ ಹಾಕಿದ ಚೆಂಡನ್ನು ಮೈದಾನದ ದಿಕ್ಕು ದಿಕ್ಕುಗಳಿಗೆ ಬೌಂಡರಿ ಮತ್ತು ಸಿಕ್ಸ್​ಗೆ ಅಟ್ಟಿದರು. ನಾಯಕನಾಗಿ ತಂಡದ ರನ್​ರೇಟ್​ನ ಮೇಲೆ ಗಮನ ಹರಿಸಿ ಅವರು ಬ್ಯಾಟಿಂಗ್​ ಮಾಡಿದ್ದರು. ಪಂದ್ಯವನ್ನು ಉತ್ತಮ ರನ್​ರೇಟ್​ನೊಂದಿಗೆ ಗೆಲುವು ದಾಖಲಿಸುವುದರಿಂದ ಭಾರತಕ್ಕೆ ಲೀಗ್​ನಲ್ಲಿ ಮುಂದಿನ ದಿನಗಳಲ್ಲಿ ಸಹಕಾರ ಆಗಲಿದೆ.

63 ಬಾಲ್​ ಎದುರಿಸಿ 6 ಸಿಕ್ಸ್​ ಮತ್ತು 6 ಬೌಂಡರಿಯಿಂದ 86 ರನ್ ಗಳಸಿ ಆಡುತ್ತಿದ್ದ ಹಿಟ್​ಮ್ಯಾನ್​ ಶಾಹೀನ್​ ಶಾ ಆಫ್ರಿದಿ ಬಾಲ್​ನಲ್ಲಿ ವಿಕೆಟ್​ ಕೊಟ್ಟರು. ವಿಶ್ವಕಪ್​ನಲ್ಲಿ 8ನೇ ಶತಕ ದಾಖಲಿಸಲು ಅವರಿಗೆ ಇನ್ನೂ ಕೇವಲ 14 ರನ್​ ಕಡಿಮೆ ಇತ್ತು. ಕಳೆದ ಪಂದ್ಯದಲ್ಲಿ 7ನೇ ಶತಕ ದಾಖಲಿಸಿ ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ರೋಹಿತ್​ ಮುರಿದಿದ್ದರು.

ಗೆಲುವಿನ ದಡ ಸೇರಿಸಿದ ಅಯ್ಯರ್​ - ರಾಹುಲ್​ ​: 3 ವಿಕೆಟ್​ ಕಳೆದುಕೊಂಡ ನಂತರ ಶ್ರೇಯಸ್​ ಅಯ್ಯರ್​ ಮತ್ತು ಕೆಎಲ್​ ರಾಹುಲ್​ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಪಾಕಿಸ್ತಾನ ಸ್ಪಿನ್ನರ್​ಗಳ ಮುಂದೆ ನಿಧಾನಗತಿಯಲ್ಲಿ ರನ್​ ಕಲೆಹಾಕಿದರು. ರೋಹಿತ್​ ಶರ್ಮಾ ಕ್ರೀಸ್​ನಲ್ಲಿದ್ದಾಗ ಭಾರತ 25 ಓವರ್​ ಒಳಗಾಗಿ ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿತ್ತು. ಆದರೆ ಈ ಇಬ್ಬರು ಬ್ಯಾಟರ್​ಗಳು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ರನ್​ನ ವೇಗ ಕಡಿಮೆ ಆಯಿತು. 30.3ನೇ ಓವರ್​ಗೆ ಭಾರತ ಗೆಲುವಿನ ದಡ ಮುಟ್ಟಿತು. ಶ್ರೇಯಸ್​ ಅಯ್ಯರ್​ 62 ಬಾಲ್​ನಲ್ಲಿ 2 ಸಿಕ್ಸ್​ ಮತ್ತು 3 ಬೌಂಡರಿಯಿಂದ 53 ರನ್​ ಕಲೆಹಾಕಿ ಅಜೇಯರಾಗಿ ಉಳಿದರು. ಕೆ ಎಲ್​ ರಾಹುಲ್​ 19* ರನ್​ ಗಳಿಸಿದರು.

ಪಾಕಿಸ್ತಾನ ಪರ ಶಾಹೀನ್​ ಶಾ ಆಫ್ರಿದಿ 2 ಮತ್ತು ಹಸನ್​ ಅಲಿ 1 ವಿಕೆಟ್​ ಪಡೆದರು. 7 ಓವರ್​ನಲ್ಲಿ 1 ಮೇಡೆನ್​ ಓವರ್​ ಮಾಡಿ 2.7 ಎಕಾನಮಿಯಲ್ಲಿ 2 ವಿಕೆಟ್​ ಕಿತ್ತ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: Cricket World Cup 2023: ಭಾರತದ ಬೌಲಿಂಗ್​ ದಾಳಿಗೆ ನಲುಗಿದ ಪಾಕ್​.. 191ಕ್ಕೆ ಸರ್ವಪತನ

Last Updated : Oct 14, 2023, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.