ಲಖನೌ (ಉತ್ತರ ಪ್ರದೇಶ): ವಿಶ್ವಕಪ್ ಲೀಗ್ನ ಐದು ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್ ಬ್ಯಾಟ್ ಮಾಡಿ ಗೆದ್ದಿದ್ದ ಭಾರತ ಇಂದು ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ಇನ್ನಿಂಗ್ಸ್ನ ನೆರವಿನಿಂದ ಟೀಮ್ ಇಂಡಿಯಾ ನಿಗದಿ ಓವರ್ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಹಾಲಿ ಚಾಂಪಿಯನ್ ಇಂಗ್ಲೆಂಡ್ ಗೆಲುವಿಗೆ 230 ರನ್ ಭೇದಿಸಬೇಕಿದೆ.
ಈ ವಿಶ್ವಕಪ್ನಲ್ಲಿ ಸತತ ಐದು ಸೋಲು ಕಂಡಿರುವ ಹಾಲಿ ಚಾಂಪಿಯನ್ ಲಯಕ್ಕೆ ಮರಳಲು ಸತತ ಪ್ರಯತ್ನ ಮಾಡುತ್ತಿದ್ದು, ಕಳೆದೆಲ್ಲಾ ಪಂದ್ಯಗಳಿಗಿಂತ ಇಂದು ಆಂಗ್ಲರ ತಂಡ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಲಖನೌ ಪಿಚ್ನ ಸ್ವಿಂಗ್ ಬಳಸಿಕೊಂಡ ಇಂಗ್ಲೆಂಡ್ ವೇಗಿಗಳು ನಾಯಕನ ಬೌಲಿಂಗ್ ನಿರ್ಣಯವನ್ನು ಸಮರ್ಥಿಸಿಕೊಂಡರು.
-
Innings Break!
— BCCI (@BCCI) October 29, 2023 " class="align-text-top noRightClick twitterSection" data="
Captain Rohit Sharma top-scores with 87 as #TeamIndia set a 🎯 of 2⃣3⃣0⃣
Second innings coming up shortly ⏳
Scorecard ▶️ https://t.co/etXYwuCQKP#CWC23 | #MenInBlue | #INDvENG pic.twitter.com/cbycovA0Mk
">Innings Break!
— BCCI (@BCCI) October 29, 2023
Captain Rohit Sharma top-scores with 87 as #TeamIndia set a 🎯 of 2⃣3⃣0⃣
Second innings coming up shortly ⏳
Scorecard ▶️ https://t.co/etXYwuCQKP#CWC23 | #MenInBlue | #INDvENG pic.twitter.com/cbycovA0MkInnings Break!
— BCCI (@BCCI) October 29, 2023
Captain Rohit Sharma top-scores with 87 as #TeamIndia set a 🎯 of 2⃣3⃣0⃣
Second innings coming up shortly ⏳
Scorecard ▶️ https://t.co/etXYwuCQKP#CWC23 | #MenInBlue | #INDvENG pic.twitter.com/cbycovA0Mk
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಸತತ ಮೂರು ಶಾಕ್ ಎದುರಿಸಬೇಕಾಯಿತು. ಪವರ್ ಪ್ಲೇಯಲ್ಲಿ ಉತ್ತಮ ರನ್ ಗಳಿಸಿದ ಟೀಮ್ ಇಂಡಿಯಾ ಸತತ ವಿಕೆಟ್ ನಷ್ಟಕ್ಕೆ ಗುರಿಯಾಯಿತು. ರೋಹಿತ್ ಶರ್ಮಾ ಏಕಾಂಗಿಯಾಗಿ ಬ್ಯಾಟ್ ಬೀಸುತ್ತಿದ್ದರೆ ಇತ್ತ ವಿಕೆಟ್ಗಳು ಉರುಳುತ್ತಿದ್ದವು. ಆರಂಭಿಕ ಶುಭಮನ್ ಗಿಲ್ 9 ರನ್ಗೇ ಔಟ್ ಆದರೆ, ಸತತ ಉತ್ತಮ ಇನ್ನಿಂಗ್ಸ್ ಆಡುತ್ತಾ ಫಾರ್ಮ್ನಲ್ಲಿದ್ದ ವಿರಾಟ್ ಕೊಹ್ಲಿ 9 ಬಾಲ್ ಆಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಶ್ರೇಯಸ್ ಅಯ್ಯರ್ ಆಸರೆ ಆಗಲೇ ಇಲ್ಲ. ಇದರಿಂದ ಭಾರತ 12ನೇ ಓವರ್ ಅಂತ್ಯಕ್ಕೆ 40 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ರಾಹುಲ್ - ರೋಹಿತ್ ಜತೆಯಾಟ: ಐಪಿಎಲ್ ತವರು ಮೈದಾನದಲ್ಲಿ ರಾಹುಲ್ ನಾಯಕ ರೋಹಿತ್ ಜತೆ ಸೇರಿಕೊಂಡು ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ 91 ರನ್ನ ಪಾಲುದಾರಿಕೆಯನ್ನು ಮಾಡಿತು. ರಾಹುಲ್ ವಿಕೆಟ್ ಕಾಯ್ದರೆ, ನಾಯಕ ರೋಹಿತ್ ಸಿಕ್ಕ ಅವಕಾಶಗಳಲ್ಲಿ ದೊಡ್ಡ ಹೊಡೆತಗಳ ಮೂಲಕ ರನ್ ಪಡೆದರು. 91 ರನ್ನ ಜತೆಯಾಟ ಆಗಿದ್ದಾಗ ವಿಕೆಟ್ ಕೀಪರ್ ಕೆ ಎಲ್ ರಾಹುಲ್ (39) ವಿಲ್ಲಿ ಬೌಲಿಂಗ್ ದಾಳಿಗೆ ಬಲಿಯಾದರು.
ಅತ್ತ ವಿಕೆಟ್ಗಳ ಪತನವಾಗುತ್ತಿದ್ದರೂ 100ನೇ ಅಂತಾರಾಷ್ಟ್ರೀಯ ಪಂದ್ಯದ ನಾಯಕತ್ವ ವಹಿಸಿರುವ ರೋಹಿತ್ ತಮ್ಮ ಜವಾಬ್ದಾರಿಯನ್ನು ಮೆರೆದರು. ಅಲ್ಲದೇ 48 ರನ್ ಗಳಿಸಿದ್ದಾಗ 18,000 ಅಂತಾರಾಷ್ಟ್ರೀಯ ರನ್ ಪೂರೈಸಿದ ದಾಖಲೆಯನ್ನೂ ಮಾಡಿದರು. 13 ರನ್ನಿಂದ ಇನ್ನಿಂಗ್ಸ್ನಲ್ಲಿ ಶತಕ ವಂಚಿತರಾದರು. ಪಂದ್ಯದಲ್ಲಿ ಹಿಟ್ ಮ್ಯಾನ್ 101 ಬಾಲ್ಗಳನ್ನು ಆಡಿ 10 ಬೌಂಡರಿ ಮತ್ತು 3 ಸಿಕ್ಸ್ನಿಂದ 87 ರನ್ ಕಲೆಹಾಕಿದರು.
ಸೂರ್ಯ ಆಸರೆಯ ಇನ್ನಿಂಗ್ಸ್: ಹಾರ್ದಿಕ್ ಅನುಪಸ್ಥಿತಿಯಲ್ಲಿ 6ನೇ ಬ್ಯಾಟರ್ ಆಗಿ ಬಂದ ಸೂರ್ಯಕುಮಾರ್ ಯಾದವ್ ಕೆಳ ಹಂತದಲ್ಲಿ ತಂಡಕ್ಕೆ ಆಸರೆ ಆದರು. ಅಲ್ಲದೇ ತಂಡ 200 ಗಡಿ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕನ ಜತೆ ಪುಟ್ಟ ಜತೆಯಾಟ ಮಾಡಿದ ಅವರು ಕೊನೆಯಲ್ಲಿ ಬಾಲಂಗೋಚಿಗಳ ಒಟ್ಟಿಗೆ ಇನ್ನಿಂಗ್ಸ್ ಬೆಳೆಸಿದರು. 1 ರನ್ನಿಂದ ವಿಶ್ವಕಪ್ನ ಚೊಚ್ಚಲ ಅರ್ಧಶತಕ ತಪ್ಪಿಸಿಕೊಂಡರು. 47 ಬಾಲ್ ಎದುರಿಸಿದ ಸೂರ್ಯ 4 ಬೌಂಡರಿ ಮತ್ತು 1 ಸಿಕ್ಸ್ನಿಂದ 49 ರನ್ ಗಳಿಸಿ ಔಟ್ ಆದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಕಲ್ದೀಪ್ ಯಾದವ್ ವಿಕೆಟ್ ಕಾಯ್ದು ಆಲ್ಔಟ್ನಿಂದ ತಪ್ಪಿಸಿದರು.
ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ಮತ್ತು ಕ್ರಿಸ್ ವೋಕ್ಸ್, ಆದಿಲ್ ರಶೀದ್ 2 ವಿಕೆಟ್ ಪಡೆದರೆ, ಮಾರ್ಕ್ ವುಡ್ ಒಂದು ವಿಕೆಟ್ ಕಬಳಿಸಿದರು.