ETV Bharat / sports

ವಿಶ್ವಕಪ್​ ಕ್ರಿಕೆಟ್​: ಕಾಂಗರೂ ಪಡೆಯ ಬಿಗಿ ಕ್ಷೇತ್ರ ರಕ್ಷಣೆ.. ಕಿವೀಸ್​ಗೆ 5 ರನ್​ನಿಂದ ಸೋಲು - ಕಾಂಗರೂ ಪಡೆಯ ಬಿಗಿ ಕ್ಷೇತ್ರ ರಕ್ಷಣೆ

ಧರ್ಮಶಾಲಾ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡ 5 ರನ್​ನಿಂದ ಸೋಲನುಭವಿಸಿದೆ.

ICC Cricket World Cup 2023 Australia vs New Zealand

author img

By ETV Bharat Karnataka Team

Published : Oct 28, 2023, 6:37 PM IST

Updated : Oct 28, 2023, 7:44 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ವಿಶ್ವಕಪ್​ನಲ್ಲಿ ಸತತ ಒಂದು ಬದಿಯ ಫಲಿತಾಂಶದ ಪಂದ್ಯಗಳು ಬರುತ್ತಿವೆ. ರೋಚಕತೆ ಇಲ್ಲ ಎಂಬ ಮಾತುಗಳು ಈವರೆಗೆ ಕೇಳಿಬರುತ್ತಿದ್ದವು. ಆದರೆ ಧರ್ಮಶಾಲಾ ಮೈದಾನದಲ್ಲಿ ಇಂದು ನಡೆದ ಪಂದ್ಯ ರೋಚಕ ಅಂತ್ಯವನ್ನು ಕಂಡಿತು. ಆಸ್ಟ್ರೇಲಿಯಾ ಕೊನೆಯಲ್ಲಿ ನಡೆಸಿದ ಬಿಗಿಯಾದ ಕ್ಷೇತ್ರ ರಕ್ಷಣೆಯ ನೆರವಿನಿಂದ 5 ರನ್​ನಿಂದ ರೋಚಕ ಜಯ ಸಾಧಿಸಿತು. ಆಸಿಸ್​ ನೀಡಿದ್ದ 388 ರನ್​ ಗುರಿಯನ್ನು ಬೆನ್ನತ್ತಿದ ಕಿವೀಸ್ ಪಡೆ 50 ಓವರ್​ಗೆ 9 ವಿಕೆಟ್​ ಕಳೆದುಕೊಂಡು 383 ರನ್​ ಗಳಿಸಲಷ್ಟೇ ಶಕ್ತವಾಯಿತು.

ನಿನ್ನೆ (ಶುಕ್ರವಾರ) ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ರೋಚಕ ಅಂತ್ಯ ಕಂಡ ನಂತರ ಇಂದು ಮತ್ತೊಂದು ಅಂತಹ ಬಿಗಿಯಾದ ಫಲಿತಾಂಶ ಹೊರಬಿತ್ತು. ಆರಂಭಿಕರಾದ ವಾರ್ನರ್​ ಮತ್ತು ಹೆಡ್​ ಅವರ 175 ರನ್​ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್​ಗೆ ಆಸ್ಟ್ರೇಲಿಯಾ 388 ರನ್​ಗಳ ಬೃಹತ್​ ಗುರಿಯನ್ನು ನೀಡಿತ್ತು. ಈ ಬೃಹತ್​ ಮೊತ್ತವನ್ನು ಹೆಚ್ಚು ಕಡಿಮೆ ನ್ಯೂಜಿಲೆಂಡ್​ ಯಶಸ್ವಿಯಾಗಿ ಸಾಧಿಸುವಂತೆ ಕಂಡು ಬಂತು. ರಚಿನ್​ ರವೀಂದ್ರ ಶತಕ ಮತ್ತು ಡೆರಿಯಲ್​ ಮಿಚೆಲ್​, ಜೇಮ್ಸ್ ನೀಶಮ್ ಅರ್ಧಶತಕದ ನೆರವಿನಿಂದ ತಂಡ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಕೊನೆಯ ಎರಡು ಓವರ್​ನಲ್ಲಿ ಆಸ್ಟ್ರೇಲಿಯಾ ತೋರಿದ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್​ನಿಂದ ಮೊತ್ತವನ್ನು ರಕ್ಷಿಸಿಕೊಂಡಿತು.

ಕೊನೆಯ ಎರಡು ರೋಚಕ ಓವರ್​: 6ನೇ ವಿಕೆಟ್​ಗೆ ಬಂದ ಜೇಮ್ಸ್ ನೀಶಮ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. 48ನೇ ಓವರ್​ನಲ್ಲಿ 11 ರನ್​ ತೆಗೆದುಕೊಂಡರು. ಇದರಿಂದ 12 ಬಾಲ್​ಗೆ 32 ರನ್​ನ ಅವಶ್ಯಕತೆ ಇತ್ತು. 49ನೇ ಓವರ್​ನಲ್ಲಿ ನೀಶಮ್​ 13 ರನ್​ ಪಡೆದರು. ಇದರಿಂದ ಕೊನೆಯ ಓವರ್​ನಲ್ಲಿ 19 ರನ್​ ಅವಶ್ಯಕತೆ ಇತ್ತು. ಕೊನೆಯ ಓವರ್​ನಲ್ಲಿ ಸ್ಟಾರ್ಕ್​​ ಮೊದಲ ಬಾಲ್​ನಲ್ಲಿ ಬೋಲ್ಟ್​​ 1 ರನ್​ ತೆಗೆದುಕೊಂಡು ನೀಶಮ್​ಗೆ ಕ್ರೀಸ್​ ಬಿಟ್ಟುಕೊಟ್ಟರು. ಎರಡನೇ ಬಾಲ್​ನಲ್ಲಿ ಸ್ಟಾರ್ಕ್​ ವೈಡ್​ ಮತ್ತು ಬೌಂಡರಿಯಿಂದಾಗಿ ಐದು ರನ್​ ಬಿಟ್ಟುಕೊಟ್ಟರು.

ಇದರಿಂದ 5 ಬಾಲ್​ಗೆ 13 ರನ್​ ಅವಶ್ಯಕತೆ ಇತ್ತು. 49.2, 49.3 ಮತ್ತು 49.4 ಬಾಲ್​ನಲ್ಲಿ ಬೌಂಡರಿ ಗೆರೆಯಲ್ಲಿ ಮಾಡಿದ ಬಿರಿಯಾದ ಕ್ಷೇತ್ರ ರಕ್ಷಣೆಯಿಂದ ಎರಡೆರಡು ರನ್​ ಪಡೆದರು. 5ನೇ ಬಾಲ್​ನಲ್ಲಿ ಎರಡು ರನ್​ ಕದಿಯುವ ಭರದಲ್ಲಿ ನೀಶಮ್​ ರನ್​ ಔಟ್​ ಆದರು. ಕೊನೆಯ ಬಾಲ್​ನಲ್ಲಿ ತಂಡದ ಗೆಲುವಿಗೆ ಆರು ರನ್​ ಬೇಕಿತ್ತು. ಬೌಲಿಂಗ್​ ವೇಳೆ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗೆ ಕುಳಿತಿದ್ದ ಲಾಕಿ ಫರ್ಗುಸನ್ ಮೈದಾನಕ್ಕಿಳಿದರಾದರೂ ವಿಜಯದ ರನ್​ ಗಳಿಸಲು ಸಾಧ್ಯವಾಗಲಿಲ್ಲ.

ರಚಿನ್ ಶತಕ ವ್ಯರ್ಥ: ಕೇನ್​​ ವಿಲಿಯಮ್ಸನ್​ ಜಾಗದಲ್ಲಿ ರಚಿನ್​ ರವೀಂದ್ರ ಜವಾಬ್ದಾರಿಯುತ ಆಟವನ್ನು ಆಡುತ್ತಾ ಬರುತ್ತಿದ್ದಾರೆ. ಬೃಹತ್​ ಮೊತ್ತವನ್ನು ಬೆನ್ನತ್ತುತ್ತಿದ್ದ ತಂಡಕ್ಕೆ ಒಂದೆಡೆ ವಿಕೆಟ್​ ಕಾಯ್ದುಕೊಂಡು ಶತಕ ಪೂರೈಸಿದರು. ತಂಡವನ್ನು ಬೃಹತ್​ ಮೊತ್ತದತ್ತ ಕೊಂಡೊಯ್ಯುವಲ್ಲಿ ಇವರ ಶತಕ ಅಮೂಲ್ಯ ಕೊಡುಗೆ ಆಯಿತು. ಇನ್ನಿಂಗ್ಸ್​ನಲ್ಲಿ 89 ಬಾಲ್​ನಲ್ಲಿ 9 ಬೌಂಡರಿ, 5 ಸಿಕ್ಸ್​ನಿಂದ 116 ರನ್​ ಗಳಿಸಿದರು.

ರವೀಂದ್ರಗೆ ಪಂದ್ಯದಲ್ಲಿ ಸಾಥ್​ ನೀಡಿದ್ದು ಡೇರಿಲ್ ಮಿಚೆಲ್ (54) ಮತ್ತು ಜೇಮ್ಸ್ ನೀಶಮ್ (58). ಈ ಇಬ್ಬರು ಗಳಿಸಿದ ಅರ್ಧಶತಕ ತಂಡಕ್ಕೆ ಬೃಹತ್​ ಸ್ಕೋರ್​ ಭೇದಿಸಲು ಪ್ರಯತ್ನಿಸಿದರಾದರೂ ಇವರ ಈ ಇನ್ನಿಂಗ್ಸ್​ ಸಹ ತಂಡದ ಗೆಲುವಿಗೆ ಸಹಕಾರಿ ಆಗಲಿಲ್ಲ. ಕೊನೆಯಲ್ಲಿ ತಂಡ 5 ರನ್​​ನಿಂದ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಪರ ಶತಕ ಗಳಿಸಿದ ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: Cricket World Cup: ಹಿಮದ ನಾಡಲ್ಲಿ ರನ್​ಗಳ ಹೊಳೆ.. ಕಿವೀಸ್​ಗೆ ಬೃಹತ್​ ಟಾರ್ಗೆಟ್​ ನೀಡಿದ ಆಸೀಸ್​

Last Updated : Oct 28, 2023, 7:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.