ಮುಂಬೈ (ಮಹಾರಾಷ್ಟ್ರ): ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದ್ವಿಶತಕ ಆಟ ಆಸ್ಟ್ರೇಲಿಯಾವನ್ನು ಸೋಲಿನ ಹೊಸಿಲಿನಿಂದ ಗೆಲುವಿಗೆ ಕೊಂಡೊಯ್ಯಿತು. 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಕಾಂಗರೂ ಪಡೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ 202 ರನ್ಗಳ ಪಾಲುದಾರಿಕೆ ಜಯಕ್ಕೆ ಮೂಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ನರು 50 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 292 ರನ್ಗಳ ಗುರಿ ನೀಡಿದ್ದರು. ಇದನ್ನು ಆಸ್ಟ್ರೇಲಿಯಾ 3 ಓವರ್ ಮತ್ತು 3 ವಿಕೆಟ್ ಉಳಿಸಿಕೊಂಡು ಗೆದ್ದಿದೆ.
-
Glenn Maxwell overcame adversities to smash a record double ton in an epic Australia win ⚡
— ICC Cricket World Cup (@cricketworldcup) November 7, 2023 " class="align-text-top noRightClick twitterSection" data="
He's the @aramco #POTM 🏏#CWC23 | #AUSvAFG pic.twitter.com/EcfMPqqqAr
">Glenn Maxwell overcame adversities to smash a record double ton in an epic Australia win ⚡
— ICC Cricket World Cup (@cricketworldcup) November 7, 2023
He's the @aramco #POTM 🏏#CWC23 | #AUSvAFG pic.twitter.com/EcfMPqqqArGlenn Maxwell overcame adversities to smash a record double ton in an epic Australia win ⚡
— ICC Cricket World Cup (@cricketworldcup) November 7, 2023
He's the @aramco #POTM 🏏#CWC23 | #AUSvAFG pic.twitter.com/EcfMPqqqAr
ಪಂದ್ಯದ ಸೋಲಿನಲ್ಲಿ ಕ್ಯಾಚ್ಗಳು ಎಷ್ಟು ಪ್ರಮುಖವಾಗುತ್ತದೆ ಎಂಬುದಕ್ಕೆ ಮುಂಬೈನ ವಾಂಖೆಡೆಯಲ್ಲಿ ನಡೆದ ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ ಪಂದ್ಯ ನಿದರ್ಶನವಾಗಿರಲಿದೆ. ಮ್ಯಾಕ್ಸ್‌ವೆಲ್ ಅವರ 4 ಕ್ಯಾಚ್ಗಳನ್ನು ಕೈಚೆಲ್ಲಿ ಜೀವದಾನ ಕೊಟ್ಟಿದ್ದು ಅಫ್ಘಾನ್ಗೆ ಊಹೆಗೂ ಮೀರಿದ ಸೋಲಿಗೆ ಕಾರಣವಾಯಿತು. ಆಸ್ಟ್ರೇಲಿಯಾ 8ನೇ ವಿಕೆಟ್ಗೆ 202 ರನ್ಗಳ ಜೊತೆಯಾಟ ಮಾಡಿ ಇತಿಹಾಸ ಪುಟದಲ್ಲಿ ಅಚ್ಚರಿಯ ಗೆಲುವೊಂದಕ್ಕೆ ಕಾರಣವಾಯಿತು. ಪಂದ್ಯದಲ್ಲಿ ಸೋಲು ಕಂಡ ಅಫ್ಘಾನ್ಗೆ ಸೆಮೀಸ್ ಪ್ರವೇಶ ಮಾಡುವ ಇದ್ದೊಂದು ಅವಕಾಶ ಕಮರಿದೆ.
-
A Glenn Maxwell masterclass guided Australia to the #CWC23 semi-finals 👊#AUSvAFG 📝: https://t.co/SYNXNcMUf1 pic.twitter.com/dRI0X6YbkW
— ICC Cricket World Cup (@cricketworldcup) November 7, 2023 " class="align-text-top noRightClick twitterSection" data="
">A Glenn Maxwell masterclass guided Australia to the #CWC23 semi-finals 👊#AUSvAFG 📝: https://t.co/SYNXNcMUf1 pic.twitter.com/dRI0X6YbkW
— ICC Cricket World Cup (@cricketworldcup) November 7, 2023A Glenn Maxwell masterclass guided Australia to the #CWC23 semi-finals 👊#AUSvAFG 📝: https://t.co/SYNXNcMUf1 pic.twitter.com/dRI0X6YbkW
— ICC Cricket World Cup (@cricketworldcup) November 7, 2023
ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿ ಆಟ: ಒಬ್ಬ ಬ್ಯಾಟರ್ ಎದುರಾಳಿ ಕೊಟ್ಟ ಗುರಿಯ 90 ಶೇಕಡಾದಷ್ಟು ಮೊತ್ತವನ್ನು ಏಕಾಂಗಿಯಾಗಿ ಕಲೆಹಾಕಿ ಗೆಲ್ಲಿಸಿದ ಕ್ರಿಕೆಟ್ ಪಂದ್ಯದ ಉದಾಹರಣೆ ಇದೇ ಇರಬೇಕು. 292 ರನ್ನ ಗುರಿಯಲ್ಲಿ ಮ್ಯಾಕ್ಸ್‌ವೆಲ್ 201 ರನ್ ಗಳಿಸಿದರು. ಉಳಿದ 91 ರನ್ ಮಾತ್ರ ಇತರೆ ಬ್ಯಾಟರ್ಗಳು ಗಳಿಸಿದ ಮೊತ್ತ. ಇಂತಿಹ ಒಬ್ಬಂಟಿ ಆಟದ ಪ್ರದರ್ಶನ ಕ್ರಿಕೆಟ್ನಲ್ಲಿ ಅತ್ಯಂತ ಅಪರೂಪದ್ದಾಗಿದೆ.
-
Australia couldn't have made a more epic entry into the #CWC23 semi-finals 🤩#AUSvAFG pic.twitter.com/2V4QAk8PkV
— ICC Cricket World Cup (@cricketworldcup) November 7, 2023 " class="align-text-top noRightClick twitterSection" data="
">Australia couldn't have made a more epic entry into the #CWC23 semi-finals 🤩#AUSvAFG pic.twitter.com/2V4QAk8PkV
— ICC Cricket World Cup (@cricketworldcup) November 7, 2023Australia couldn't have made a more epic entry into the #CWC23 semi-finals 🤩#AUSvAFG pic.twitter.com/2V4QAk8PkV
— ICC Cricket World Cup (@cricketworldcup) November 7, 2023
ಮ್ಯಾಕ್ಸ್‌ವೆಲ್ ಬ್ಯಾಟ್ನಿಂದ ಇಂದು ದಾಖಲೆಗಳ ಸರಮಾಲೆಯೇ ಸೃಷ್ಠಿಯಾಯಿತು. ಕಡಿಮೆ ಬಾಲ್ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಆಟಗಾರ (ಇಶಾನ್ ಕಿಶನ್ 126ಬಾಲ್). ಆರಂಭಿಕ ಬ್ಯಾಟರ್ ಆಗಿರದೇ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್. ಏಕದಿನ ಕ್ರಿಕೆಟ್ನಲ್ಲಿ 8ನೇ ವಿಕೆಟ್ಗೆ ದೊಡ್ಡ ಜೊತೆಯಾಟ. ವಿಶ್ವಕಪ್ನ ಮೂರನೇ ಅತಿ ಹೆಚ್ಚಿನ ಏಕಾಂಗಿ ಮೊತ್ತ (ಮಾರ್ಟಿನ್ ಗುಪ್ಟಿಲ್-237, ಕ್ರಿಸ್ ಗೇಲ್- 215). ಚೇಸಿಂಗ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲಿಗ ಎಂಬ ರೆಕಾರ್ಡ್ಗಳು ಮ್ಯಾಕ್ಸಿಯ ಹೆಸರಿನಲ್ಲಿ ದಾಖಲಾದವು.
-
An exceptional double ton from an injured Glenn Maxwell helps Australia to a famous victory 🔥@mastercardindia Milestones 🏏#AUSvAFG pic.twitter.com/sBUfzcHAdY
— ICC Cricket World Cup (@cricketworldcup) November 7, 2023 " class="align-text-top noRightClick twitterSection" data="
">An exceptional double ton from an injured Glenn Maxwell helps Australia to a famous victory 🔥@mastercardindia Milestones 🏏#AUSvAFG pic.twitter.com/sBUfzcHAdY
— ICC Cricket World Cup (@cricketworldcup) November 7, 2023An exceptional double ton from an injured Glenn Maxwell helps Australia to a famous victory 🔥@mastercardindia Milestones 🏏#AUSvAFG pic.twitter.com/sBUfzcHAdY
— ICC Cricket World Cup (@cricketworldcup) November 7, 2023
ಪಂದ್ಯದಲ್ಲಿ: ಆಸ್ಟ್ರೇಲಿಯಾದ ಮಟ್ಟಕ್ಕೆ ಅಫ್ಘನ್ ನೀಡಿದ್ದ 292 ರನ್ಗಳ ಗುರಿ ದೊಡ್ಡದಾಗಿರಲಿಲ್ಲ. ಆದರೆ ಅಫ್ಘಾನ್ ಹೊಸ ಬಾಲ್ನ ಸ್ವಿಂಗ್ ಬಳಸಿಕೊಂಡು ಕಾಂಗರೂ ಪಡೆಯ ಬ್ಯಾಟಿಂಗ್ ಲೈನ್ ಅಪ್ನ್ನು ಸಂಪೂರ್ಣ ಕುಸಿಯುವಂತೆ ಮಾಡಿದರು. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (0), ಡೇವಿಡ್ ವಾರ್ನರ್ (18), ಮಿಚೆಲ್ ಮಾರ್ಷ್ (24), ಮಾರ್ನಸ್ ಲ್ಯಾಬುಸ್ಚಾಗ್ನೆ (14), ಜೋಶ್ ಇಂಗ್ಲಿಸ್ (0), ಮಾರ್ಕಸ್ ಸ್ಟೊಯಿನಿಸ್ (6) ಮತ್ತು ಮಿಚೆಲ್ ಸ್ಟಾರ್ಕ್ (3) ವಿಕೆಟ್ 18.3 ಓವರ್ ವೇಳೆಗೆ ಉರುಳಿತ್ತು. ಮಾರ್ಷ್ ಅವರ 24 ರನ್ ಬಿಟ್ಟರೆ ದೊಡ್ಡ ಮೊತ್ತ ಯಾವುದೂ ಇರಲಿಲ್ಲ.
- " class="align-text-top noRightClick twitterSection" data="">
19ನೇ ಓವರ್ಗೆ 91 ರನ್ಗೆ 7 ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಆಸ್ಟ್ರೇಲಿಯಾಕ್ಕೆ ಆಸರೆ ಆದದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮಿನ್ಸ್. ಅಫ್ಘನ್ ಬೌಲರ್ಗಳನ್ನು ಆರಂಭದಲ್ಲಿ ತಾಳ್ಮೆಯಿಂದ ಎದುರಿಸಿದ ಮ್ಯಾಕ್ಸ್‌ವೆಲ್ ಇಬ್ಬನಿಯ ಬರುವಿಕೆಗೆ ಕಾದರು. ಬಾಲ್ ಹಳೆಯದಾದಂತೆ ಅಫ್ಘನ್ಗೆ ಪಿಚ್ ಸಹಕಾರಿ ಆಗದಂತೆ ಕಂಡಿತು. ಅಲ್ಲಿಂದ ಮ್ಯಾಕ್ಸ್‌ವೆಲ್ ಮ್ಯಾಕ್ಸ್ ಶಾಟ್ಗಳಿಗೆ ಪ್ರಯತ್ನಿಸಿದರು. ಅವರ ಜೊತೆಗೆ ನಾಯಕ ಕೇವಲ ವಿಕೆಟ್ ಉಳಿಸುವ ಕೆಲಸ ಮಾಡಿದರು.
ಇನ್ನಿಂಗ್ಸ್ನಲ್ಲಿ ಮ್ಯಾಕ್ಸ್‌ವೆಲ್ 128 ಬಾಲ್ ಆಡಿ 21 ಬೌಂಡರಿ, 10 ಸಿಕ್ಸ್ನಿಂದ 157.03 ರ ಸ್ಟ್ರೈಕ್ರೇಟ್ನಿಂದ 201 ರನ್ ಕಲೆಹಾಕಿದರು. ಅವರ ಜೊತೆಗೆ ಪಾಲುದಾರಿಕೆ ಮಾಡಿದ ಕಮಿನ್ಸ್ 68 ಬಾಲ್ ಆಡಿ 1 ಬೌಂಡರಿಯಿಂದ ಕೇವಲ 12 ರನ್ ಗಳಿಸಿದರು. ಅಫ್ಘಾನ್ ವಿರುದ್ಧ ಆಸ್ಟ್ರೇಲಿಯಾ ಗೆಲುವಿನಲ್ಲಿ ಮ್ಯಾಕ್ಸ್‌ವೆಲ್ ಸಿಂಹಪಾಲು ವಹಿಸಿಕೊಂಡರು. ಇದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಕ್ಯಾಚ್ ಬಿಟ್ಟು ಪಂದ್ಯ ಕೈಚೆಲ್ಲಿದ ಅಫ್ಘಾನ್: ಮ್ಯಾಕ್ಸ್‌ವೆಲ್ ಅವರ ನಾಲ್ಕು ಕ್ಯಾಚ್ಗಳನ್ನು ಅಫ್ಘನ್ ಕ್ಷೇತ್ರರಕ್ಷಕರು ಕೈಚೆಲ್ಲಿದರು. ಇದು ಪಂದ್ಯಕ್ಕೆ ಮುಳುವಾಯಿತು. ಇಲ್ಲವಾದಲ್ಲಿ ಅಫ್ಘನ್ ಕಾಂಗರೂ ಪಡೆತಯನ್ನು 100 ರನ್ ಒಳಗಾಗಿ ಆಲ್ಔಟ್ ಮಾಡುವ ಸಾಧ್ಯತೆ ಇತ್ತು.
ಇದನ್ನೂ ಓದಿ:ವಿಶ್ವಕಪ್‌ನಲ್ಲಿ ಅಫ್ಘಾನ್ ಪರ ಮೊದಲ ಶತಕ ಬಾರಿಸಿದ ಜದ್ರಾನ್: ಕ್ರಿಕೆಟ್ ದೇವರು ಸಚಿನ್ಗೆ ಅರ್ಪಣೆ