ETV Bharat / sports

ಪಾಕಿಸ್ತಾನದ ಬಳಿಕ ಶ್ರೀಲಂಕಾ ತಂಡವನ್ನೂ ಮಣಿಸಿದ ಅಫ್ಘಾನಿಸ್ತಾನ: ಪಾಯಿಂಟ್‌ ಪಟ್ಟಿಯಲ್ಲಿ 5ನೇ ಸ್ಥಾನ! - ಪಾಯಿಂಟ್‌ ಪಟ್ಟಿಯಲ್ಲಿ 5ನೇ ಸ್ಥಾನ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ನೀಡಿದ್ದ 242 ರನ್​ ಸಾಧಾರಣ ಗುರಿಯನ್ನು 7 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ಗೆದ್ದುಕೊಂಡಿತು. ಈ ಮೂಲಕ ತಂಡ ವಿಶ್ವಕಪ್ ಪಾಯಿಂಟ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನಕ್ಕೆ ಸೋಲುಣಿಸಿತ್ತು.

ICC Cricket World Cup 2023
ICC Cricket World Cup 2023
author img

By ETV Bharat Karnataka Team

Published : Oct 30, 2023, 10:11 PM IST

Updated : Oct 30, 2023, 10:37 PM IST

ಪುಣೆ (ಮಹಾರಾಷ್ಟ್ರ): ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರ ಅರ್ಧಶತಕದ ಇನ್ನಿಂಗ್ಸ್​ ನೆರವಿನಿಂದ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 4.4 ಓವರ್​ ಮತ್ತು 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನಕ್ಕೆ ಇದು ಮೂರನೇ ಗೆಲುವಾಗಿದೆ. ಬಾಕಿ ಇರುವ ಮೂರು ಪಂದ್ಯಗಳನ್ನು ಗೆದ್ದಲ್ಲಿ ಸೆಮೀಸ್​​ ಪ್ರವೇಶ ಪಡೆಯುವ ಸಾಧ್ಯತೆ ಗೋಚರಿಸಿದೆ. ಅತ್ತ ಶ್ರೀಲಂಕಾ ಸೋಲು ಪಾಕಿಸ್ತಾನದ ಸೆಮೀಸ್​ ಕನಸು ಜೀವಂತವಾಗಿ ಇರಿಸಿದೆ.

2023ರ ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಸಾಮಾನ್ಯ ಎಂದು ಪರಿಗಣಿಸಿದ್ದ ದಿಗ್ಗಜರಿಗೆ ಮೂರು ಗೆಲುವಿನ ಮೂಲಕ ಉತ್ತರ ಕೊಟ್ಟಿದೆ. ಅಲ್ಲದೇ ವಿಶ್ವಕಪ್​ ಸೆಮೀಸ್​​​ ಹೋರಾಟಕ್ಕೆ ನಾವೂ ಇದ್ದೇವೆ ಎಂಬ ಸಂದೇಶವನ್ನು ತಂಡ ಬಲವಾಗಿ ರವಾನಿಸಿತು. ಸ್ಪಿನ್​ ಬೌಲಿಂಗ್​ನಲ್ಲಿ ಮಾತ್ರ ಅಫ್ಘನ್​ ತಂಡವನ್ನು ಬಲಿಷ್ಠ ಎಂದು ಹೇಳಲಾಗುತ್ತಿತ್ತು. ಪ್ರಸ್ತುತ ವಿಶ್ವಕಪ್​ನಲ್ಲಿ ಅಫ್ಘನ್ನರು ಬ್ಯಾಟಿಂಗ್​ ಸಾಮರ್ಥ್ಯವನ್ನೂ ತೋರಿದ್ದಾರೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 8 ವಿಕೆಟ್​ನಿಂದ ಗೆದ್ದರೆ, ಇಂದು 7 ವಿಕೆಟ್​ಗಳ ಜಯ ದಾಖಲಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗಿಳಿದ ಶ್ರೀಲಂಕಾ ಅಫ್ಘಾನ್​ ಬೌಲಿಂಗ್​ ದಾಳಿಯನ್ನು ಎದುರಿಸುವಲ್ಲಿ ವಿಫಲವಾಯಿತು. ತಂಡದಲ್ಲಿ ಅನುಭವಿ ಬ್ಯಾಟರ್​ಗಳು ದೊಡ್ಡ ಜೊತೆಯಾಟ ನೀಡುವಲ್ಲಿ ಎಡವಿದರು. ಇದರಿಂದ ತಂಡ 49.3 ಓವರ್​ಗೆ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 241ರನ್​ ಮಾತ್ರ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಅಫ್ಘಾನ್​ಗೆ ದಿಲ್ಶನ್ ಮಧುಶಂಕ ಆರಂಭಿಕ ಆಘಾತ ನೀಡಿದರು. ವಿಶ್ವಕಪ್​ನಲ್ಲಿ ಅಫ್ಘನ್​ ಪರ ಉತ್ತಮ ಬ್ಯಾಟಿಂಗ್​ ಮಾಡಿದ್ದ ರಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ವಿಕೆಟ್​ ಕೊಟ್ಟರು. ಅದರೆ ಎರಡನೇ ವಿಕೆಟ್​ಗೆ ಒಂದಾದ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ ಸಿಂಹಳೀಯ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಎರಡನೇ ವಿಕೆಟ್​ಗೆ 73 ರನ್​ಗಳ ಪಾಲುದಾರಿಕೆ ಹಂಚಿಕೊಂಡಿತು. ರನ್​ ಗಳಿಸುವ ಮುನ್ನ ವಿಕೆಟ್​ ನಷ್ಟವಾದರೂ ಈ ಜೊತೆಯಾಟ ತಂಡಕ್ಕೆ ಆಸರೆ ಆಯಿತು. 39 ರನ್‌ ಗಳಿಸಿ ಆಡುತ್ತಿದ್ದ ಇಬ್ರಾಹಿಂ ಜದ್ರಾನ್ ದಿಲ್ಶನ್ ಮಧುಶಂಕಗೆ ವಿಕೆಟ್​ ಕೊಟ್ಟರು.

  • " class="align-text-top noRightClick twitterSection" data="">

ನಂತರ ನಾಯಕ ಹಶ್ಮತುಲ್ಲಾ ಶಾಹಿದಿ ಜೊತೆಗೆ ರಹಮತ್ ಶಾ ಅರ್ಧಶತಕದ ಜತೆಯಾಟವಾಡಿದರು. ಲಂಕಾ ಈ ವೇಳೆಗೆ ತನ್ನ ಗೆಲುವಿನ ಕನಸು ಕೈಚೆಲ್ಲಿತ್ತು. ಲಂಕಾದ ಆರು ಜನ ಬೌಲರ್​ಗಳ ವಿರುದ್ಧ ತಾಳ್ಮೆಯಿಂದ ಬಾಲ್​ಗೆ ಒಂದರಂತೆ ರನ್​​ ಕದಿಯುವ ಲೆಕ್ಕಾಚಾರಕ್ಕೆ ಅಫ್ಘಾನ್​ ಇಳಿಯಿತು. ವಿಕೆಟ್ ರಕ್ಷಣೆ ಮಾಡಿಕೊಳ್ಳುತ್ತಾ ಸಿಕ್ಕ ಚೆಂಡಿನಲ್ಲಿ ಬೌಂಡರಿಗಳನ್ನು ಪಡೆದುಕೊಂಡರು. ಈ ವೇಳೆ ಕಸುನ್ ರಜಿತ ಬಾಲ್​ನಲ್ಲಿ 62 ರನ್​ ಗಳಿಸಿ ಆಡುತ್ತಿದ್ದ ರಹಮತ್ ಶಾ ವಿಕೆಟ್​ ಒಪ್ಪಿಸಿದರು.

ಶಾಹಿದಿ-ಒಮರ್ಜಾಯ್ ಶತಕದ ಜೊತೆಯಾಟ: ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ 4ನೇ ವಿಕೆಟ್​ಗೆ ಒಂದಾಗಿ ಶತಕದ ಜೊತೆಯಾಟ ಆಡಿದ್ದಲ್ಲದೇ ಇರ್ವರು ಅರ್ಧಶತಕ ಗಳಿಸಿ ಸಂಭ್ರಮಿಸಿದರು. ನಾಯಕ ಹಶ್ಮತುಲ್ಲಾ ಶಾಹಿದಿ 74 ಬಾಲ್​ ಎದುರಿಸಿ 2 ಬೌಂಡರಿ ಮತ್ತು 1 ಸಿಕ್ಸ್​ನ ನೆರವಿನಿಂದ 58 ರನ್​ ಗಳಿಸಿದರೆ, ಅಜ್ಮತುಲ್ಲಾ ಒಮರ್ಜಾಯ್ 63 ಬಾಲ್​ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸ್​ನ ನೆರವಿನಿಂದ 73 ರನ್​ ಗಳಿಸಿದರು. ಇಬ್ಬರು ಬ್ಯಾಟರ್​ಗಳು ಅಜೇಯವಾಗಿ 4.4 ಬಾಲ್​ ಉಳಿಸಿಕೊಂಡು ತಂಡ ಗೆಲ್ಲಿಸಿದರು.

ಫಜಲ್ಹಕ್ ಫಾರೂಕಿ ಪಂದ್ಯಶ್ರೇಷ್ಠ: ಮೊದಲ ಇನ್ನಿಂಗ್ಸ್​ನಲ್ಲಿ 10 ಓವರ್​ ಬೌಲ್​ ಮಾಡಿ (ಒಂದು ಮೆಡನ್) ಜತೆಗೆ 34 ರನ್ ಬಿಟ್ಟುಕೊಟ್ಟು 4 ವಿಕೆಟ್​ ಕಬಳಿ ಲಂಕಾವನ್ನು 241ಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಕ್ಕೆ ಫಜಲ್ಹಕ್ ಫಾರೂಕಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನಕ್ಕೆ ಸತತ ಸೋಲು: ಕೋಚ್​ ಗ್ರಾಂಟ್ ಬ್ರಾಡ್‌ಬರ್ನ್ ಕೊಟ್ಟ ಕಾರಣ ಇದು!

Last Updated : Oct 30, 2023, 10:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.