ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ಗೆ ಬಳಸಲಾಗಿದ್ದ ಮಧ್ಯಪ್ರದೇಶದ ಇಂದೋರ್ನ ಹೋಳ್ಕರ್ ಪಿಚ್ಗೆ "ಕಳಪೆ" ರೇಟಿಂಗ್ ನೀಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅದನ್ನು ಬದಲಿಸಿ "ಸರಾಸರಿಗಿಂತ ಕಡಿಮೆ" (below average) ಎಂದು ಪರಿಗಣಿಸಿದೆ. ಇದರಿಂದ ಟೆಸ್ಟ್ ಪಂದ್ಯಗಳ ಆಯೋಜನೆಯ ನಿರ್ಬಂಧ ಶಿಕ್ಷೆಯಿಂದ ತಪ್ಪಿಸಿಕೊಂಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಮೂರನೇ ಟೆಸ್ಟ್ ಮೂರನೇ ದಿನದ ಮೊದಲ ಅವಧಿಯಲ್ಲೇ ಮುಕ್ತಾಯವಾಗಿತ್ತು. ಅಂದರೆ 2 ದಿನ ಮತ್ತು ಕೆಲ ಗಂಟೆಗಳಲ್ಲಿ ಪಂದ್ಯ ಮುಗಿದಿತ್ತು. ಇದು ಟೆಸ್ಟ್ ಕ್ರಿಕೆಟ್ಗೆ ಸೂಕ್ತವಾದ ಮೈದಾನವಲ್ಲ ಎಂಬ ಆರೋಪ ಕೇಳಿಬಂದಿತ್ತು. ಸ್ಪಿನ್ನರ್‌ಗಳಿಗೆ ಪೂರ್ಣ ನೆರವು ನೀಡಿದ್ದ ಪಿಚ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)"ಕಳಪೆ" ರೇಟಿಂಗ್ ಮತ್ತು 3 ಋಣಾತ್ಮಕ ಅಂಕಗಳನ್ನು ನೀಡಿತ್ತು. ಐಸಿಸಿಯ ನಿರ್ಧಾರದ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿರುವ ಐಸಿಸಿ ಕಳಪೆ ಬದಲಾಗಿ ಸರಾಸರಿಗಿಂತ ಕಡಿಮೆ ಎಂಬ ರೇಟಿಂಗ್ ನೀಡಿದೆ.
ಓದಿ: ಸುನಿಲ್ ನರೈನ್ vs ಶಾರ್ದೂಲ್ ಠಾಕೂರ್: ಕೆಕೆಆರ್ ನಾಯಕತ್ವ ಯಾರಿಗೆ?
ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಅವರು, ಹೋಳ್ಕರ್ ಮೈದಾನ ಬ್ಯಾಟ್ ಮತ್ತು ಚೆಂಡಿನ ನಡುವೆ ಸಾಕಷ್ಟು ಸಮತೋಲನವನ್ನು ಒದಗಿಸಿಲ್ಲ. ಶುಷ್ಕ ಮೈದಾನವಾಗಿದ್ದು ಪೂರ್ಣ ಸ್ಪಿನ್ನರ್‌ಗಳಿಗೆ ನೆರವು ನೀಡಿತ್ತು. ಸಮತೋಲಿತ ಪಿಚ್ ಇದಾಗಿಲ್ಲ ಎಂದು ಹೇಳಿದ್ದರು.
ಪಂದ್ಯದ ಫಲಿತಾಂಶವೇನು?: ಇಂದೋರ್‌ನಲ್ಲಿ ನಡೆದ 3ನೇ ಟೆಸ್ಟ್‌ನ ಮೊದಲನೇ ದಿನದಾಟದಲ್ಲಿ 14 ವಿಕೆಟ್‌ಗಳು ಉರುಳಿದ್ದವು. ಒಟ್ಟಾರೆ ಪಂದ್ಯದಲ್ಲಿ 31 ವಿಕೆಟ್‌ಗಳಲ್ಲಿ 26 ವಿಕೆಟ್ ಸ್ಪಿನ್ನರ್‌ಗಳು ಪಡೆದಿದ್ದರು. ಟೆಸ್ಟ್ ಕೇವಲ 2 ದಿನ ಮತ್ತು ಒಂದು ಅವಧಿಯಷ್ಟು ಮಾತ್ರ ನಡೆದಿತ್ತು. ಆಸ್ಟ್ರೇಲಿಯಾ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲ ಎರಡು ಪಂದ್ಯಗಳಲ್ಲಿ ನಾಗ್ಪುರ ಮತ್ತು ನವದೆಹಲಿಯಲ್ಲಿ ಬಳಸಲಾದ ಪಿಚ್‌ಗಳು ಸಹ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದವು. ಐಸಿಸಿ ಈ ಪಿಚ್ಗಳಿಗೆ 'ಸರಾಸರಿ' ರೇಟಿಂಗ್ ನೀಡಿತ್ತು.
ಐಸಿಸಿ ರೇಟಿಂಗ್ ಬದಲಿಸಿದ್ದೇಕೆ?: ಐಸಿಸಿಯ ಕಳಪೆ ರೇಟಿಂಗ್ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಿತ್ತು. ಐಸಿಸಿ ಮೇಲ್ಮನವಿ ಸಮಿತಿ ಸದಸ್ಯರಾದ ವಾಸಿಂ ಖಾನ್ ಮತ್ತು ರೋಜರ್ ಹಾರ್ಪರ್ ಅವರಿದ್ದ ತಂಡ ಟೆಸ್ಟ್ ಪಂದ್ಯ ವಿಡಿಯೋ ತುಣುಕುಗಳನ್ನು ವೀಕ್ಷಣೆ ಮಾಡಿತು. ಪಂದ್ಯದ ರೆಫ್ರಿ ಮಾರ್ಗಸೂಚಿಗಳನ್ನು ಅನುಸರಿಸಿದ್ದರೂ, ಬೌನ್ಸ್ ಪಿಚ್ ಇದಲ್ಲವಾಗಿದ್ದರಿಂದ ಸಮಿತಿ ಸದಸ್ಯರು ಕಳಪೆ ರೇಟಿಂಗ್ ಅನ್ನು ಬದಲಿಸಲು ಒಪ್ಪಿಕೊಂಡರು.
ಅದರಂತೆ ಹೋಲ್ಕರ್ ಸ್ಟೇಡಿಯಂನ ಪಿಚ್ ಅನ್ನು 'ಸರಾಸರಿಗಿಂತ ಕಡಿಮೆ' ಎಂದು ರೇಟ್ ಮಾಡಿ, ಮೂರು ಋಣಾತ್ಮಕ ಅಂಕಗಳ ಬದಲಾಗಿ ಒಂದು ಡಿಮೆರಿಟ್ ಅಂಕ ನೀಡಲು ತೀರ್ಮಾನಿಸಿತು. 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 2-1 ರಿಂದ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಪ್ರವೇಶ ಪಡೆಯಿತು.
ಓದಿ: ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇನ್ನಿಲ್ಲವೇ ಅವಕಾಶ