ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡ್ತಿದ್ದು, ಅದಕ್ಕೆ ಕಾರಣವಾಗಿದ್ದು ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಮಾಡಿಕೊಂಡಿರುವ ಕೆಲವೊಂದು ಬದಲಾವಣೆಗಳು ಎಂದು ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಪೃಥ್ವಿ ಶಾ ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ನಂತರದ ಪಂದ್ಯಗಳಲ್ಲಿ ಅವರನ್ನ ಕೈಬಿಟ್ಟು ಬೇರೆ ಪ್ಲೇಯರ್ಸ್ಗೆ ಅವಕಾಶ ನೀಡಲಾಗಿತ್ತು. ಇದು ಅವರ ಚಿಂತೆಗೆ ಕಾರಣವಾಗಿತ್ತು. ಅಲ್ಲಿಂದ ವಾಪಸ್ ಬಂದ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚು ಹರಿಸಿದ ಪೃಥ್ವಿ ಶಾ 8 ಪಂದ್ಯಗಳಿಂದ 827ರನ್ಗಳಿಕೆ ಮಾಡಿ ಟಾಪ್ ಸ್ಕೋರ್ರ ಆಗಿ ಹೊರಹೊಮ್ಮಿದ್ದರು.
ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಉತ್ತಮ ಪ್ರದರ್ಶನ ನೀಡ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಎದುರು 38 ಎಸೆತಗಳಲ್ಲಿ 72 ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 17 ಎಸೆತಗಳಲ್ಲಿ 32 ರನ್ಗಳಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ತಮ್ಮ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಂಡಿರುವುದು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಆಪತ್ಬಾಂಧವನ ಹೆಸರಲ್ಲಿದೆ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ
ಆಸ್ಟ್ರೇಲಿಯಾ ಸರಣಿಯಿಂದ ಕೈಬಿಡುತ್ತಿದ್ದಂತೆ ನನಗೆ ಆತಂಕ ಶುರುವಾಯಿತು. ಹೀಗಾಗಿ ತಂತ್ರಗಳಲ್ಲಿ ಸುಧಾರಣೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ನಿನ್ನೆ ಪಂಜಾಬ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಪೃಥ್ವಿ ಶಾ, ಕ್ರಿಕೆಟ್ ಪಂದ್ಯಗಳಲ್ಲಿ ಸಣ್ಣ ತಪ್ಪುಗಳಿಗಾಗಿ ವಿಕೆಟ್ ಒಪ್ಪಿಸುತ್ತಿರುವುದು ತುಂಬಾ ಚಿಂತೆಗೊಳ ಮಾಡಿತು. ಇದೀಗ ಬೌಲರ್ಗಳನ್ನ ಎದುರಿಸುವಾಗ ಆ ತಪ್ಪು ಸರಿಮಾಡಿಕೊಂಡಿದ್ದು, ಕ್ರೀಸ್ನಲ್ಲಿ ಭದ್ರವಾಗಿ ನಿಂತು ಎಲ್ಲ ಎಸೆತ ಎದುರಿಸುತ್ತಿದ್ದೇನೆ ಎಂದಿದ್ದಾರೆ.
ಆಸ್ಟ್ರೇಲಿಯಾದಿಂದ ವಾಪಸ್ ಬಂದ ಬಳಿಕ ನಾನು ತರಬೇತುದಾರರಾದ ಪ್ರಶಾಂತ್ ಶೆಟ್ಟಿ ಸರ್ ಹಾಗೂ ಪ್ರವೀಣ್ ಆಮ್ರೆ ಜತೆ ಕೆಲ ಮಾಡಿದ್ದೇನೆ. ಅವರೊಂದಿಗೆ ಸಾಕಷ್ಟು ಕೆಲ ಮಾಡಿದ್ದರಿಂದ ವಿಜಯ್ ಹಜಾರೆಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಲು ಸಾಧ್ಯವಾಯಿತು ಎಂದರು. ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಹೆಚ್ಚಿನ ಅಭ್ಯಾಸ ನಡೆಸಿಲ್ಲ. ಆದರೆ, ತಂಡದ ಕೋಚ್ ರಿಕಿ ಪಾಟಿಂಗ್ ಜೊತೆ ಕೆಲ ಸಮಯ ಚರ್ಚೆ ನಡೆಸಿದ್ದೇನೆ ಎಂದರು.