ಮುಂಬೈ: 2014ರಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಆಧಾರ ಸ್ಥಂಭವಾಗಿದ್ದ ಡೇವಿಡ್ ವಾರ್ನರ್ರನ್ನು ತಂಡದಿಂದ ಕೈಬಿಟ್ಟದ್ದು, ಕ್ರಿಕೆಟ್ ಆಭಿಮಾನಿಗಳಿಗಷ್ಟೇ ಅಲ್ಲದೇ, ಸ್ವತಃ ವಾರ್ನರ್ರನ್ನು ದಿಗ್ಭ್ರಮೆಗೊಳಿಸಿತ್ತು. ಈ ಕಾರಣದಿಂದಲೇ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ವಾರ್ನರ್ ಹೈದರಾಬಾದ್ ಪರ ಆಡುವುದು ಇದೇ ಕೊನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾರ್ನರ್ ನೇತೃತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಆ ಆವೃತ್ತಿಯಲ್ಲಿ ಬಹುಪಾಲು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಅಲ್ಲದೇ ಸತತ 2016 ರಿಂದ 2020ರ ವರೆಗೆ (2018 ನ್ನು ಬಿಟ್ಟು)ತಂಡವನ್ನು ಪ್ಲೇ ಆಫ್ಗೇರಿಸುವಲ್ಲಿ ವಾರ್ನರ್ ಪಾತ್ರ ಮಹತ್ವವಾಗಿತ್ತು.
ಹೈದರಾಬಾದ್ ತಂಡ ನಾಯಕತ್ವವನ್ನು ಕೇನ್ ವಿಲಿಯಮ್ಸನ್ಗೆ ವಹಿಸಬೇಕೆಂಬ ನಿರ್ಧಾರ ಸರಿ, ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಾರ್ನರ್ರನ್ನು ಕೈಬಿಟ್ಟಿದ್ದು ಉತ್ತಮ ನಿರ್ಧಾರವಲ್ಲ. ಅವರಂತಹ ಬ್ಯಾಟ್ಸ್ಮನ್ರನ್ನು 11ರ ಬಳಗದಿಂದ ಕೈಬಿಡುವ ಮುನ್ನ ಅವರ ದಾಖಲೆಗಳನ್ನು ಒಮ್ಮೆ ನೋಡಬೇಕಿತ್ತು ಎಂದು ಎಸ್ಆರ್ಹೆಚ್ ಮ್ಯಾನೇಜ್ಮೆಂಟ್ ಅನ್ನು ಸ್ಟೇನ್ ಪ್ರಶ್ನಿಸಿದ್ದಾರೆ.
ವಾರ್ನರ್ರನ್ನು ತಂಡದಿಂದ ಬಿಟ್ಟಿರುವುದು ವಿಚಿತ್ರವಾದ ನಿರ್ಧಾರ ಫ್ರಾಂಚೈಸಿ ವಿಲಿಯಮ್ಸನ್ರನ್ನಿಟ್ಟುಕೊಂಡು ಮುಂದಿನ ಆವೃತ್ತಿಗೆ ನಾಯಕತ್ವವನ್ನು ಬದಲಾಯಿಸಬೇಕೆಂದು ನಿರ್ಧರಿಸಿದೆ ಇದರಿಂದಲೇ ತಿಳಿಯುತ್ತಿದೆ. ಆದರೆ, ಈಗಲೂ ವಾರ್ನರ್ ಅದ್ಭುತವಾದ ಬ್ಯಾಟ್ಸ್ಮನ್, ಅವರನ್ನು ನಾನು ಯಾವಾಗಲೂ ತಂಡದಲ್ಲಿರಲು ಬಯಸುತ್ತೇನೆ. ನನ್ನ ಪ್ರಕಾರ ಆರೇಂಜ್ ಆರ್ಮಿಯಲ್ಲಿ ವಾರ್ನರ್ ಇದೇ ಕೊನೆ ಲೀಗ್ ಆಡಲಿದ್ದಾರೆ" ಎಂದು ನನಗನ್ನಿಸುತ್ತಿದೆ ಎಂದು ಸ್ಟೇನ್ ಇಎಸ್ಪಿನ್ಗೆ ಹೇಳಿದ್ದಾರೆ.
ಡೇವಿಡ್ ವಾರ್ನರ್ ಸನ್ರೈಸರ್ಸ್ ಹೈದರಾಬಾದ್ ಪರ 93 ಪಂದ್ಯಗಳನ್ನಾಡಿದ್ದು, 50 ರ ಸರಾಸರಿಯಲ್ಲಿ 4,012 ರನ್ಗಳಿಸಿದ್ದಾರೆ. 142ನ ಸ್ಟ್ರೈಕ್ ರೇಟ್ ಕಾಪಾಡಿಕೊಂಡಿರುವ ಅವರು 40 ಅರ್ಧಶತಕ ಮತ್ತು 2 ಶತಕ ಸಿಡಿಸಿದ್ದಾರೆ. ವಿಶೇಷವೆಂದರೆ ಎಲ್ಲಾ 6 ಆವೃತ್ತಿಗಳನ್ನು 500ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ.
ಇದನ್ನು ಓದಿ:ವಾರ್ನರ್ಗೆ ಅನ್ಯಾಯ: ಮೊದಲು ನಾಯಕತ್ವ, ಈಗ ತಂಡದಿಂದಲೂ ಹೊರಗಿಟ್ಟ ಹೈದರಾಬಾದ್...