ETV Bharat / sports

2021ರ ಐಪಿಎಲ್ ಪುನರಾರಂಭವಾದರೂ ನಾನು ಆಡುವುದಿಲ್ಲ: ಬೆನ್​ ಸ್ಟೋಕ್ಸ್​

author img

By

Published : May 13, 2021, 3:56 PM IST

Updated : May 13, 2021, 6:41 PM IST

ಬಯೋ ಬಬಲ್​ನಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆ 2021ರ ಐಪಿಎಲ್​ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಬಿಸಿಸಿಐ ಇನ್ನೂ ಅದರ ಮುಂದುವರಿದ ಭಾಗ ನಡೆಯುವುದೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

ಲಂಡನ್: ಮುಂದೂಡಲ್ಪಟ್ಟಿರುವ ಐಪಿಎಲ್​ ಮತ್ತೆ ಪುನಾರಂಭವಾದಾಗ ಬಹುಶಃ ತಾನು ಸೇರಿದಂತೆ ಇಂಗ್ಲೆಂಡ್ ಆಟಗಾರರು ಆಡುವುದು ಅನುಮಾನ ಎಂದು ಇಂಗ್ಲೆಂಡ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್ ಹೇಳಿದ್ದಾರೆ.

ಬಯೋ ಬಬಲ್​ನಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆ 2021ರ ಐಪಿಎಲ್​ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಬಿಸಿಸಿಐ ಇನ್ನೂ ಅದರ ಮುಂದುವರಿದ ಭಾಗ ನಡೆಯುವುದೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಟೂರ್ನಮೆಂಟ್ ಮತ್ತೆ ಎಲ್ಲಿ ಪುನಃ ಆಯೋಜಿಸಲಾಗುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಆದರೆ ಇಸಿಬಿ ಮತ್ತೆ ಐಪಿಎಲ್​ನಲ್ಲಿ ಪಾಲ್ಗೊಳ್ಳುವುದಕ್ಕೆ ಇಂಗ್ಲೆಂಡ್ ಆಟಗಾರರು ಬಿಡುವು ಮಾಡಿಕೊಳ್ಳುವುದು ಅನುಮಾನ ಎಂದು ತಿಳಿಸಿದೆ ಎಂದು ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

ಆದರೆ ಈ ವರ್ಷದ ನಂತರ ಭವಿಷ್ಯದಲ್ಲಿ ಸಂಪೂರ್ಣ ಲೀಗ್​ನಲ್ಲಿ ಆಡುವುದಕ್ಕೆ ತಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಅವರು ಇನ್ನು 7 ಅಥವಾ 8 ವಾರಗಳಲ್ಲಿ ಮೈದಾನಕ್ಕೆ ಮರಳಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಆಡುವ ವೇಳೆ ಸ್ಟೋಕ್ಸ್​​ ಗಾಯಕ್ಕೊಳಗಾಗಿದ್ದರು.

ಇದನ್ನು ಓದಿ: ಭಾರತ ತಂಡ ಆಸ್ಟ್ರೇಲಿಯಾ ಹಿಂದಿಕ್ಕಲು ದ್ರಾವಿಡ್​ ಕಾರಣ: ಗ್ರೇಗ್ ಚಾಪೆಲ್

Last Updated : May 13, 2021, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.