ಮುಂಬೈ : ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. 20 ಮಂದಿ ಸದಸ್ಯರ ತಂಡದ ಜೊತೆ ಮೀಸಲು ಆಟಗಾರರಾಗಿ ಆವೇಶ್ ಖಾನ್ ಜೊತೆಗೆ ಎಡಗೈ ವೇಗಿ ಆರ್ಜನ್ ನಾಗ್ವಾಸ್ವಾಲಾ ಕೂಡ ಆಯ್ಕೆಯಾಗಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಭಾರತದ ರಾಷ್ಟ್ರೀಯ ಶಿಬಿರದಲ್ಲಿ ನಾಗ್ವಾಸ್ವಾಲ್ಲಾ ತಮ್ಮ ಚೊಚ್ಚಲ ಪಂದ್ಯವನ್ನು ಆನಂದಿಸಲು ಸಜ್ಜಾಗಿದ್ದಾರೆ. ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ.
ಗುಜರಾತ್ ರಣಜಿ ತಂಡದ ವೇಗಿಯಾಗಿರುವ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆಟ್ ಬೌಲರ್ ಆಗಿದ್ದರು. ಇದೀಗ ಟೀಂ ಇಂಡಿಯಾ ಭಾಗವಾಗುತ್ತಿರುವುದಕ್ಕೆ ಮಾಧ್ಯಮದ ಜತೆ ಸಂತಸವನ್ನು ಹಂಚಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ನಲ್ಲಿದ್ದ ವೇಳೆ ರೋಹಿತ್ ಶರ್ಮಾ ಮತ್ತು ನನ್ನ ರೋಲ್ ಮಾಡೆಲ್ ಆಗಿರುವ ಜಹೀರ್ ಖಾನ್ ಜೊತೆ ಮಾತುಕತೆ ನಡೆಸಿರುವುದು ತುಂಬಾ ಉತ್ಸಾಹವನ್ನುಂಟು ಮಾಡಿತ್ತು. ಆದರೆ, ಕೊಹ್ಲಿ ಅವರನ್ನು ಇದುವರೆಗೆ ಒಮ್ಮೆಯೂ ಭೇಟಿ ಮಾಡಿಲ್ಲ.
ಇಂಗ್ಲೆಂಡ್ ಪ್ರವಾಸಕ್ಕೆ ನನ್ನ ಆಯ್ಕೆ ಮಾಡಿರುವುದಕ್ಕೆ ನನಗೆ ಆಶ್ಚರ್ಯ ಮತ್ತು ಖುಷಿಯಿಂದ ಮುಳುಗಿಹೋಗಿದ್ದೆ. ಇಂಗ್ಲೆಂಡ್ ಅಂತಹ ಪರಿಸ್ಥಿತಿ ನನ್ನಂತಹ ಬೌಲರ್ಗೆ ಸೂಕ್ತವಾಗಿದೆ. ಅಲ್ಲಿಗೆ ತೆರಳಲು ತುಂಬಾ ಉತ್ಸುಕನಾಗಿದ್ದೇನೆ ಎಂದು ನಾಗ್ವಾಸ್ವಾಲಾ ಹೇಳಿದ್ದಾರೆ.
ಆರ್ಜನ್ ಇದೇ ಸಂದರ್ಭದಲ್ಲಿ ತಾವೂ ಕ್ರಿಕೆಟಿಗನಾಗಲೂ 2011ರ ವಿಶ್ವಕಪ್ ಗೆಲುವು ಕಾರಣ ಎಂದಿದ್ದಾರೆ. ಗುಜರಾತ್ನಲ್ಲಿ ಅಕ್ಟೋಬರ್ 17, 1997ರಲ್ಲಿ ಜನಿಸಿದ ಈ ಯುವ ಕ್ರಿಕೆಟಿಗ 2017-18ರ ರಣಜಿ ಆವೃತ್ತಿಯ ವೇಳೆ ಬರೋಡ ವಿರುದ್ಧ ಪದಾರ್ಪಣೆ ಮಾಡಿದ್ದರು.
ಅವರು 16 ಪ್ರಥಮ ದರ್ಜೆ ಕ್ರಿಕೆಟ್ನಿಂದ 62 ವಿಕೆಟ್, 20 ಲಿಸ್ಟ್ ಎ ಪಂದ್ಯಗಳಿಂದ 39 ವಿಕೆಟ್ ಮತ್ತು 15 ಟಿ20 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ: 24 ಗಂಟೆಗಳಲ್ಲಿ 3.6 ಕೋಟಿಗೆ ಏರಿದ ವಿರುಷ್ಕಾ ದಂಪತಿಯ ಕೋವಿಡ್ ಸಂಗ್ರಹ ನಿಧಿ!