ನವದೆಹಲಿ: ಕೆಲವು ಆಸ್ಟ್ರೇಲಿಯನ್ ಕ್ರಿಕೆಟಿಗರು ಭಾರತದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ಹೋಗುತ್ತಿದ್ದಾರೆ. ಮುಂಬೈ ತಂಡದಲ್ಲಿ ಆಸೀಸ್ ಆಲ್ರೌಂಡರ್ ನಥನ್ ಕೌಲ್ಟರ್ ನೈಲ್ ಐಪಿಎಲ್ ಬಬಲ್ ತುಂಬಾ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಆಟಗಾರರಾದ ಆಂಡ್ರ್ಯೂ ಟೈ, ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣ ನೀಡಿ ಐಪಿಎಲ್ ತೊರೆದು ತವರಿಗೆ ಮರಳಿದ್ದರು. ಆದರೆ ಕೌಲ್ಟರ್ ನೈಲ್ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದೊಂದಿಗೆ 5 ಕೋಟಿ ರೂ ಒಪ್ಪಂದ ಹೊಂದಿರುವ ಕೌಲ್ಟರ್‌ನೈಲ್ ತಮ್ಮ ದೇಶದ ಮೂರು ಆಟಗಾರರು ಐಪಿಎಲ್ ಬಿಟ್ಟು ಹೋಗಿರುವುದು ಆಶ್ಚರ್ಯ ತಂದಿದೆ. ಆದರೆ, ಅವರ ಮನಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವಿದೆ. ನನ್ನ ಪ್ರಕಾರ ಐಪಿಎಲ್ ಬಯೋಬಬಲ್ ಸುರಕ್ಷಿತವಾಗಿದೆ ಎಂದು ಕೌಲ್ಟರ್ ನೈಲ್ ಹೇಳಿದ್ದಾರೆ.
" ಎಜೆ(ಟೈ) ಮನೆಗೆ ಹೋಗಿದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದೆ, ನಂತರ ಜಂಪಾ ಮತ್ತು ರಿಚೊ ಕೂಡ ಇದೇ ನಿರ್ಧಾರ ತೆಗೆದುಕೊಂಡರು. ಸ್ವಲ್ಪ ಸಮಯದ ಹಿಂದೆ ಜಂಪಾ ಜೊತೆ ಮಾತನಾಡಿದೆ, ಅವರು ಮನೆಗೆ ತೆರಳುವುದಕ್ಕೆ ಬಲವಾದ ವಾದ ಮಾಡಿದರು".
"ಆದರೆ ನನಗೆ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾಗೆ ಮರಳುವ ಬಗ್ಗೆ ಯಾವುದೇ ಯೋಚನೆಯಿಲ್ಲ. ಇಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಐಪಿಎಲ್ಗಾಗಿ ನಿರ್ಮಿಸಿರುವ ಬಯೋಬಬಲ್ ತುಂಬಾ ಸುರಕ್ಷಿತವಾಗಿದೆ. ನನ್ನ ಪ್ರಕಾರ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದಕ್ಕಿಂತಲೂ ಐಪಿಎಲ್ ಬಬಲ್ ಸುರಕ್ಷಿತ" ಎಂದು ಕೌಲ್ಟರ್ ನೈಲ್ ಹೇಳಿದ್ದಾರೆ
ನಾವು ದಿನಕ್ಕೆ ಮೂರು ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದೇವೆ. ಮುಂಜಾನೆ ಅದಾದ ನಂತರ ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಮೂರು ಬಾರಿ ನಿತ್ಯವೂ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಬಯೋಬಬಲ್ ಮೇಲೆ ಸಾಕಷ್ಟು ನಂಬಿಕೆಯನ್ನು ಹೊಂದಿದ್ದೇನೆ. ಎಲ್ಲ ಪ್ರೋಟೋಕಾಲ್‌ಗಳು ಮತ್ತು ಕ್ರಮಗಳು ಜಾರಿಯಲ್ಲಿವೆ. ಇದಕ್ಕಿಂತಲೂ ಹೆಚ್ಚಿನದನ್ನು ಮಾಡಲು ಸಾಧ್ಯವಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಕೌಲ್ಟರ್‌ನೈಲ್ ತಿಳಿಸಿದ್ದಾರೆ.
ಇದನ್ನು ಓದಿ:ಭಾರತೀಯರಿಗಾಗಿ ಮಿಡಿದ ಮನ.. 'ಪಿಎಂ ಕೇರ್ಸ್ ಫಂಡ್'ಗೆ 50 ಸಾವಿರ ಡಾಲರ್ ದೇಣಿಗೆ ನೀಡಿದ ಕಮ್ಮಿನ್ಸ್