ಐಪಿಎಲ್ 2023 ಮಿನಿ ಹರಾಜಿನಿಂದ ಹೊರಗುಳಿದ ನಂತರ, ಸ್ಟಾರ್ ಆಸ್ಟ್ರೇಲಿಯನ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಸ್ಮಿತ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಐಪಿಎಲ್ನ ಪಾಲುದಾರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರು ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎಂಬುದು ಇನ್ನೂ ಕುತೂಹಲಕಾರಿಯಾಗಿಯೇ ಇದೆ.
ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಸ್ಟೀವ್ ಸ್ಮಿತ್, "ನಮಸ್ತೆ ಇಂಡಿಯಾ! ನಾನು ನಿಮಗಾಗಿ ಕೆಲವು ರೋಚಕ ಸುದ್ದಿಗಳನ್ನು ಹೇಳಲಿದ್ದೇನೆ. ನಾನು ಐಪಿಎಲ್ 2023 ಭಾಗವಾಗುತ್ತಿದ್ದೇನೆ. ಹೌದು, ಅದು ಸರಿ, ನಾನು ಭಾರತದಲ್ಲಿ ಅಸಾಧಾರಣ ಮತ್ತು ಭಾವೋದ್ರಿಕ್ತ ತಂಡವನ್ನು ಸೇರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದ್ರೆ ಯಾವ ತಂಡಕ್ಕೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ.
ಐಪಿಎಲ್‌ನಲ್ಲಿರುವ ಹತ್ತು ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮಾತ್ರ ತಮ್ಮ ತಂಡದಲ್ಲಿ ಒಂದು ವಿದೇಶಿ ಸ್ಥಾನವನ್ನು ಉಳಿಸಿಕೊಂಡಿವೆ. ಎರಡೂ ತಂಡಗಳು ಬಲಿಷ್ಠ ಲೈನ್-ಅಪ್‌ಗಳನ್ನು ಹೊಂದಿವೆ ಮತ್ತು ಸ್ಮಿತ್ ಅವರ ಸೇರ್ಪಡೆಯು ಅವರ ಬ್ಯಾಟಿಂಗ್‌ಗೆ ಮತ್ತಷ್ಟು ಬಲವನ್ನು ನೀಡಲಿದೆ. ಸ್ಮಿತ್ ಅವರ ಸೇರ್ಪಡೆಯು ಎರಡು ತಂಡದಲ್ಲಿ ಆಡುವ 11ರಲ್ಲಿ ಒಬ್ಬ ವಿದೇಶಿ ಆಟಗಾರನನ್ನು ಕೈ ಬಿಡಬೇಕಾಗುತ್ತದೆ.
- — Steve Smith (@stevesmith49) March 27, 2023 " class="align-text-top noRightClick twitterSection" data="
— Steve Smith (@stevesmith49) March 27, 2023
">— Steve Smith (@stevesmith49) March 27, 2023
ಆಟಗಾರನಾಗಿ ಐಪಿಎಲ್‌ನಲ್ಲಿ ಭಾಗವಹಿಸುವುದರ ಹೊರತಾಗಿ, ಸ್ಮಿತ್ ಪಂದ್ಯಾವಳಿಯ ಕಾಮೆಂಟರಿ ಪ್ಯಾನೆಲ್‌ಗೆ ಸಹ ಸೇರಬಹುದು. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ನ ಅನುಭವ ಮತ್ತು ಆಟದಲ್ಲಿನ ಪರಿಣತಿಯು ಅವರನ್ನು ಕಾಮೆಂಟರಿ ಬಾಕ್ಸ್‌ಗೆ ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತದೆ. ಕಾಮೆಂಟರಿ ಬಾಕ್ಸ್‌ನಲ್ಲಿ ಸ್ಮಿತ್ ಉಪಸ್ಥಿತಿಯ ಬಗ್ಗೆ ಅಭಿಮಾನಿಗಲು ಟ್ವಿಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಸ್ಮಿತ್ ಅವರು ಮುಂದಿನ ಅಪ್ಡೇಟ್ ಎಂದು ಕೊಡಲಿದ್ದಾರೆ ಕಾದು ನೋಡಬೇಕಿದೆ.
ಸ್ಟೀವನ್ ಸ್ಮಿತ್ 2012 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 103 ಪಂದ್ಯಗಳನ್ನು ಆಡಿದ್ದಾರೆ. ಅವರು 34.51 ಸರಾಸರಿಯೊಂದಿಗೆ 2485 ರನ್ ಗಳಿಸಿದ್ದಾರೆ. ಅವರು 1 ಶತಕ ಮತ್ತು 11 ಅರ್ಧ ಶತಕಗಳನ್ನು ಸಹ ದಾಖಲಿಸಿದ್ದಾರೆ. ಅವರ ಐಪಿಎಲ್ನ ಗರಿಷ್ಠ ರನ್101 ಆಗಿದೆ.
ಐಪಿಎಲ್ ಹರಾಜಿನಲ್ಲಿ 2021ರಲ್ಲಿ, ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ಸ್ಟೀವನ್ ಸ್ಮಿತ್ 2.20 ಕೋಟಿ ರೂ ಕೊಟ್ಟು ಹರಾಜಿನಲ್ಲಿ ಪಡೆದುಕೊಂಡಿತ್ತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧದ ಅವರ ಕೊನೆಯ ಐಪಿಎಲ್ ಪಂದ್ಯ ಆಡಿದರು, ಅದರಲ್ಲಿ 9(8) ಗಳಿಸಿದ್ದರು. ಸ್ಮಿತ್ ಸೇರ್ಪಡೆಯಿಂದ ಪಂಜಾಬ್ನ ತಂಡದ ನಾಯಕತ್ವ ಜವಾಬ್ದಾರಿ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಪಂಜಾಬ್ ಕಿಂಗ್ಸ್ ಸೇರುವ ನಿರೀಕ್ಷೆ ಇದೆ.
ಈಗಿರುವ ಪಂಜಾಬ್ ಕಿಂಗ್ಸ್ ತಂಡ: ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಶಿಖರ್ ಧವನ್, ಹರ್‌ಪ್ರೀತ್ ಸಿಂಗ್, ಅಥರ್ವ ಟೈಡೆ, ಶಾರುಖ್ ಖಾನ್, ಶಿವಂ ಸಿಂಗ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್, ಸ್ಯಾಮ್ ಕುರಾನ್, ರಿಷಿ ಧವನ್, ರಾಜ್ ಬಾವಾ, ಮೋಹಿತ್ ರಾಥೆ ಬಲ್ತೇಜ್ ಸಿಂಗ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ವಿಧ್ವತ್ ಕಾವೇರಪ್ಪ, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್
ಇದನ್ನೂ ಓದಿ: IPL 2023: ಐಪಿಎಲ್‌ನಲ್ಲಿ ಯಾರೂ ಮುರಿಯಲಾಗದ "ವಿರಾಟ್" ದಾಖಲೆ ಇದು..