ಮುಂಬೈ(ಮಹಾರಾಷ್ಟ್ರ): ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್-2022ಕ್ಕೆ ಎಲ್ಲಾ ತಂಡಗಳು ಸಿದ್ಧತೆಯಲ್ಲಿ ತೊಡಗಿವೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಟಿಮ್ ಡೇವಿಡ್ ರೋಹಿತ್ ಶರ್ಮಾ ಮತ್ತು ಪೊಲಾರ್ಡ್ ಅವರೊಂದಿಗೆ ನಾನು ಆಡುವುದಕ್ಕೆ ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನ ಎರಡನೇ ದಿನದಂದು ಟಿಮ್ ಡೇವಿಡ್ ಅವರನ್ನು 8.25 ಕೋಟಿ ರೂ.ಗೆ ತೆಗೆದುಕೊಂಡಿತ್ತು. ಈಗ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಗಾಪುರದ ಬ್ಯಾಟ್ಸ್ಮನ್ ಟಿಮ್ ಡೇವಿಡ್ ನಾನು ರೋಹಿತ್ ಮತ್ತು ಪೊಲಾರ್ಡ್ ಅವರೊಂದಿಗೆ ಆಡಲು ಉತ್ಸುಕನಾಗಿದ್ದೇನೆ ಹಾಗೂ ಬೂಮ್ರಾ ಅವರೊಂದಿಗೆ ಅಭ್ಯಾಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ನಾನು ನೆಟ್ಸ್ನಲ್ಲಿ ಅಭ್ಯಾಸ ಮಾಡಲು ಎದುರು ನೋಡುತ್ತಿರುವ ಬೌಲರ್ ಬೂಮ್ರಾ ಆಗಿದ್ದಾರೆ. ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರೊಂದಿಗೆ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ನಾನು ನಂಬಿದ್ದೇನೆ. ಅವರೊಂದಿಗೆ ಅಭ್ಯಾಸ ಮಾಡುವುದೂ ಕಠಿಣ ಕೆಲಸವಾಗಲಿದೆ ಎಂದು ಹೇಳಿದ್ದಾರೆ ಎಂದು ಮುಂಬೈ ಇಂಡಿಯನ್ಸ್‌ನ ಅಧಿಕೃತ ವೆಬ್‌ಸೈಟ್ ಟಿಮ್ ಡೇವಿಡ್ ಹೇಳಿಕೆಯನ್ನು ಉಲ್ಲೇಖಿಸಿದೆ.
ನಾನು ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಲು ಉತ್ಸುಕನಾಗಿದ್ದೇನೆ. ಅಂತಹ ಯಶಸ್ವಿ ತಂಡದಿಂದ ಆಯ್ಕೆಯಾಗಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಮುಂಬೈ ಇಂಡಿಯನ್ಸ್ ಆಟಗಾರರನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬ ಬಗ್ಗೆ ಒಳ್ಳೆಯ ವಿಚಾರಗಳನ್ನು ನಾನು ಕೇಳಿದ್ದೇನೆ. ಈ ತಂಡ ಉತ್ತಮ ಅಭಿಮಾನಿ ಬಳಗವನ್ನು ಹೊಂದಿದೆ. ಉತ್ತಮ ಪ್ರದರ್ಶನ ನೀಡಲು ಯಾವಾಗಲೂ ಒತ್ತಡವಿರುತ್ತದೆ. ತಂಡದ ಒಟ್ಟಾರೆ ಭಾವನೆ ಉತ್ಸಾಹದಿಂದ ಕೂಡಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಆಯ್ಕೆಯ ಬಗ್ಗೆ ಚಿಂತೆ ಬಿಡಿ, ನೀವು ರಣಜಿಯಲ್ಲಿ ರನ್ ಗಳಿಸಿ : ಯುವ ಪ್ರತಿಭೆಗಳಿಗೆ ರೋಹಿತ್ ಪಾಠ
ಕೀರನ್ ಪೊಲಾರ್ಡ್ ಅವರೊಂದಿಗೆ ಬ್ಯಾಟಿಂಗ್ ಮಾಡುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು 'ಅವರೊಂದಿಗೆ ಬ್ಯಾಟಿಂಗ್ ಮಾಡುವುದು ಒಂದು ರೋಮಾಂಚಕಾರಿ ಕಲ್ಪನೆ ಎಂದಿರುವ ಅವರು ರೋಹಿತ್ ಶರ್ಮಾ ವಿಶ್ವ ದರ್ಜೆಯ ಆಟಗಾರ. ಅವರು ಬ್ಯಾಟ್ ಮಾಡುವಾಗ ಹೆಚ್ಚು ಒತ್ತಡವಿಲ್ಲದಂತೆ ಇರುತ್ತಾರೆ. ಇದು ತುಂಬಾ ಪ್ರಶಂಸನೀಯವಾಗಿದೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಸಿ), ಜಸ್ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಬಾಸಿಲ್ ಥಂಪಿ, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಾಂಡೆ, ಎನ್ ತಿಲಕ್ ವರ್ಮಾ, ಸಂಜಯ್ ಯಾದವ್, ಜೋಫ್ರಾ ಆರ್ಚರ್, ಡೇನಿಯಲ್ ಸಾಮ್ಸ್, ಟೈಮಲ್ ಮಿಲ್ಸ್, ಟಿಮ್ ಡೇವಿಡ್, ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ರಮಣದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫ್ಯಾಬಿಯನ್ ಅಲೆನ್.