ಢಾಕಾ: ಶ್ರೀಲಂಕಾ ಕ್ರಿಕೆಟ್ ತಂಡ ಸದ್ಯ ಬಾಂಗ್ಲಾ ಪ್ರವಾಸದಲ್ಲಿದ್ದು, ಇಂದು ಮೊದಲ ಏಕದಿನ ಪಂದ್ಯ ಆಡಲುತ್ತಿದೆ. ಆದರೆ ಏಕದಿನ ಪಂದ್ಯ ನಡೆಯುವ ಕೆಲವೇ ಗಂಟೆಗಳ ಮೊದಲು ಲಂಕಾ ತಂಡದ ಮೂವರು ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಶ್ರೀಲಂಕಾ ಆತಿಥೇಯ ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡುತ್ತಿದ್ದು ಎರಡನೇ ಮತ್ತು ಮೂರನೇ ಪಂದ್ಯವನ್ನು ಮೇ 25 ಮತ್ತು 28 ಕ್ಕೆ ನಿಗದಿಪಡಿಸಲಾಗಿದೆ. ಇಂದು ಮೊದಲ ಪಂದ್ಯ ಆರಂಭವಾಗಿದ್ದು ಬಾಂಗ್ಲಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಶ್ರೀಲಂಕಾದ ಇಬ್ಬರು ಆಟಗಾರರು ಮತ್ತು ಓರ್ವ ತರಬೇತುದಾರರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದೆ. ಬಾಂಗ್ಲಾದೇಶ ಪ್ರವಾಸದ ನಂತರ, ಶ್ರೀಲಂಕಾ ತಂಡವು ಇಂಗ್ಲೆಂಡ್‌ಗೆ ತೆರಳಲಿದ್ದು, ಅಲ್ಲಿ ಟಿ 20 ಮತ್ತು ಹಲವು ಏಕದಿನ ಸರಣಿ ಆಡಲಿದ್ದಾರೆ.