ETV Bharat / sports

ಪಂದ್ಯದ ಬಳಿಕ ಗೆಳತಿಗೆ ಪ್ರಪೋಸ್ ಮಾಡಿದ ಹಾಂಗ್​​ ಕಾಂಗ್ ಕ್ರಿಕೆಟಿಗ: ವಿಡಿಯೋ ನೋಡಿ - ಏಷ್ಯಾಕಪ್​​ನ ಹಾಂಗ್​ಕಾಂಗ್​​ ಭಾರತ

ಏಷ್ಯಾ ಕಪ್​​ನಲ್ಲಿ ನಿನ್ನೆ ಹಾಂಗ್ ​ಕಾಂಗ್​​-ಭಾರತ ನಡುವಿನ ಪಂದ್ಯದ ಬಳಿಕ ಕುತೂಹಲದ ಘಟನೆ ನಡೆಯಿತು.

Hong Kong batter Kinchit Shah
Hong Kong batter Kinchit Shah
author img

By

Published : Sep 1, 2022, 11:57 AM IST

ದುಬೈ: ಏಷ್ಯಾ ಕಪ್​ ಟೂರ್ನಮೆಂಟ್​​​ನಲ್ಲಿ ನಿನ್ನೆ ಭಾರತ-ಹಾಂಗ್ ​ಕಾಂಗ್​ ಮುಖಾಮುಖಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ ಬಳಗ 40 ರನ್​​​​ಗಳ ಗೆಲುವು ದಾಖಲಿಸಿದ್ದು, ಸೂಪರ್​​ 4 ಹಂತಕ್ಕೆ ಲಗ್ಗೆ ಹಾಕಿದೆ. ಇದರ ಮಧ್ಯೆ ಹಾಂಗ್ ​ಕಾಂಗ್​​ ಪ್ಲೇಯರ್ ತನ್ನ ಪ್ರಿಯತಮೆಗೆ ಸರ್​​​ಪ್ರೈಸ್​​​ ಪ್ರಪೋಸ್​ ಮಾಡಿದ್ದು ಗಮನ ಸೆಳೆಯಿತು.

ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಹೋರಾಡಿ ಸೋತಿರುವ ಹಾಂಗ್​ ಕಾಂಗ್​​​ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದ ನಂತರ ಕ್ರೀಡಾಂಗಣದ ಗ್ಯಾಲರಿಗೆ ಆಗಮಿಸಿದ ಬ್ಯಾಟರ್​ ಕಿಂಚತ್​​ ಶಾ, ಸ್ನೇಹಿತೆಗೆ ವಿಭಿನ್ನವಾಗಿ ಪ್ರಪೋಸ್ ಮಾಡಿದರು. ಗೆಳೆಯನ ನಿರ್ಧಾರಕ್ಕೆ ಅರೆಕ್ಷಣ ಅಚ್ಚರಿ ವ್ಯಕ್ತಪಡಿಸಿದ ಆಕೆ ನಂತರ ಸಂತೋಷದಿಂದ ಅಪ್ಪಿಕೊಂಡರು.

ಇದನ್ನೂ ಓದಿ: CSK - RCB ಪಂದ್ಯದ ವೇಳೆ ಅಪರೂಪದ ಘಟನೆ​.. ಆರ್​ಸಿಬಿ ಜೆರ್ಸಿ ತೊಟ್ಟು ಲವ್​ ಪ್ರಪೋಸ್ ಮಾಡಿದ ಯುವತಿ!

ಏಷಿಯನ್​​​ ಕ್ರಿಕೆಟ್​ ಕೌನ್ಸಿಲ್​ ತನ್ನ ಟ್ವಿಟರ್​ ಖಾತೆಯನಲ್ಲಿ ಈ ವಿಡಿಯೋ ಶೇರ್ ಮಾಡಿದೆ. ಭಾರತ ವಿರುದ್ಧದ ಪಂದ್ಯದ ಬೆನ್ನಲ್ಲೇ ಹಾಂಗ್ ​ಕಾಂಗ್​ ಪ್ಲೇಯರ್​​ ಕಿಂಚಿತ್​ ಶಾ ತಮ್ಮ ಗರ್ಲ್​​ಫ್ರೆಂಡ್​​​ಗೆ ಲವ್ ಪ್ರಪೋಸ್​ ಮಾಡಿದ್ದು, ಹೃದಯಸ್ಪರ್ಶಿ ಕ್ಷಣ ಇದಾಗಿದೆ. ಅಭಿನಂದನೆಗಳು. ನಿಮ್ಮ ಹೊಸ ಜೀವನ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದೆ.

ಏಷ್ಯಾ ಕಪ್​​​ನಲ್ಲಿ ಸೂಪರ್​​ 4 ಹಂತ ಪ್ರವೇಶಿಸಲು ಹಾಂಗ್​ ಕಾಂಗ್​ ತಂಡ ಇದೀಗ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ.

ಈ ಹಿಂದೆ, ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ತಂಡದ ವೇಗಿ​​ ದೀಪಕ್‌​ ಚಹರ್ ಕೂಡ ತಮ್ಮ ಪ್ರೇಯಸಿಗೆ ಲವ್ ಪ್ರಪೋಸ್ ಮಾಡಿದ್ದರು. ಇದಾದ ಬಳಿಕ ಆರ್​​ಸಿಬಿ ಜೆರ್ಸಿ ತೊಟ್ಟು ಪಂದ್ಯ ವೀಕ್ಷಿಸುತ್ತಿದ್ದ ಯುವಕನಿಗೆ ಯುವತಿಯೋರ್ವಳು ಪ್ರೇಮ ನಿವೇದನೆ ಮಾಡಿದ್ದ ಘಟನೆಯೂ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.