ದುಬೈ: ಟಿ-20 ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಹಾಲಿ ಚಾಂಪಿಯನ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಎಡಗೈ ಸೀಮರ್ ಒಬೆಡ್ ಮೆಕಾಯ್ ಗಾಯಗೊಂಡಿದ್ದು, ಅವರ ಬದಲಿಗೆ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಮೆಕಾಯ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಹೋಲ್ಡರ್ರನ್ನು ಸೇರಿಸಿಕೊಳ್ಳುವುದಕ್ಕೆ ವಿಂಡೀಸ್ ಮಾಡಿದ್ದ ಮನವಿಯನ್ನು ಐಸಿಸಿ ಮಾನ್ಯ ಮಾಡಿದೆ. ಹೋಲ್ಡರ್ ಈಗಾಗಲೆ ಐಪಿಎಲ್ಗಾಗಿ ಯುಎಇಯಲ್ಲೇ ಇದ್ದರು. ಜೊತೆಗೆ ಅವರು ವಿಂಡೀಸ್ ವಿಶ್ವಕಪ್ ತಂಡದ ಮೀಸಲು ಪಡೆಯಲ್ಲಿ ಅವಕಾಶ ಪಡೆದಿದ್ದರಿಂದ ಯಾವುದೇ ಕ್ವಾರಂಟೈನ್ ಇಲ್ಲದೆ ತಂಡಕ್ಕೆ ಸೇರಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಈಗಾಗಲೇ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿದೆ. ಅಕ್ಟೋಬರ್ 29ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಹೋಲ್ಡರ್ ಆಯ್ಕೆಗೆ ಲಭ್ಯರಿರಲಿದ್ದಾರೆ.
ವೆಸ್ಟ್ ಇಂಡೀಸ್: ಲೆಂಡ್ಲ್ ಸಿಮನ್ಸ್, ಎವಿನ್ ಲೂವಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮಾಯರ್, ನಿಕೋಲಸ್ ಪೂರನ್ (WK), ಕೀರಾನ್ ಪೊಲಾರ್ಡ್ (ನಾಯಕ), ಆ್ಯಂಡ್ರೆ ರಸೆಲ್, ಡ್ವೇನ್ ಬ್ರಾವೋ, ಅಕಿಲ್ ಹೊಸೈನ್, ಹೇಡನ್ ವಾಲ್ಷ್, ರವಿ ರಾಂಪಾಲ್, ಜೇಸನ್ ಹೋಲ್ಡ್, ರಾಸ್ಟನ್ ಚೇಸ್, ಆ್ಯಂಡ್ರೆ ಚೇಸ್
ಇದನ್ನು ಓದಿ:T20 World Cup: ಶ್ರೀಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಆಸೀಸ್ಗೆ ಆಘಾತ