ETV Bharat / sports

ವಿಜಯ್​ ಹಜಾರೆ ಟ್ರೋಫಿ ಫೈನಲ್​: ತಮಿಳರ ವಿರುದ್ಧ ಗೆದ್ದು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿ ಹಿಮಾಚಲ

Vijay Hazare Trophy 2021: ವಿಜಯ್ ಹಜಾರೆ ಟ್ರೋಫಿ ಫೈನಲ್​ ಪಂದ್ಯದಲ್ಲಿ ನಾಳೆ ತಮಿಳುನಾಡು - ಹಿಮಾಚಲ ಪ್ರದೇಶ ಮುಖಾಮುಖಿಯಾಗಲಿದ್ದು, ಗೆಲುವು ಸಾಧಿಸುವ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ.

Vijay Hazare Trophy 2021
Vijay Hazare Trophy 2021
author img

By

Published : Dec 25, 2021, 4:47 PM IST

Updated : Dec 25, 2021, 8:01 PM IST

ಜೈಪುರ್​: ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಫೈನಲ್​​ನಲ್ಲಿ ತಮಿಳುನಾಡು - ಹಿಮಾಚಲ ಪ್ರದೇಶ ಮುಖಾಮುಖಿಯಾಗಲಿದ್ದು, ಆಲ್​ರೌಂಡ್​ ಆಟದಿಂದ ಗಮನ ಸೆಳೆದಿರುವ ಟೀಂ ಇಂಡಿಯಾದ ಮಾಜಿ ಆಟಗಾರ ರಿಷಿ ಧವನ್​ ನೇತೃತ್ವದ ಹಿಮಾಚಲ ಪ್ರದೇಶ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ.

ಸೆಮಿಫೈನಲ್​ ಪಂದ್ಯದಲ್ಲಿ ಸರ್ವಿಸಸ್​ ವಿರುದ್ಧ 77 ರನ್​ಗಳ ಅಂತರದಿಂದ ಹಿಮಾಚಲ ಪ್ರದೇಶ ಗೆಲುವು ದಾಖಲು ಮಾಡಿದ್ರೆ, ಸೌರಾಷ್ಟ್ರ ವಿರುದ್ಧ ತಮಿಳುನಾಡು ಕೊನೆ ಎಸೆತದಲ್ಲಿ ಜಯ ಸಾಧಿಸುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದೆ.

ಫೈನಲ್ ಪಂದ್ಯದಲ್ಲಿ ತಮಿಳುನಾಡು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದು, ಆದರೆ ಟೂರ್ನಿ ಉದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿರುವ ಹಿಮಾಚಲ ಪ್ರದೇಶ ಗೆಲುವಿನ ಲೆಕ್ಕಾಚಾರದೊಂದಿಗೆ ಮೈದಾನಕ್ಕಿಳಿಯಲಿದೆ.

ಈಗಾಗಲೇ ಕರ್ನಾಟಕ ವಿರುದ್ಧ ಕೊನೆ ಎಸೆತದಲ್ಲಿ ಗೆಲುವು ಸಾಧಿಸಿ ಸೈಯದ್​ ಮುಸ್ತಾಕ್​ ಅಲಿ ಟ್ರೋಫಿ ಗೆದ್ದಿರುವ ತಮಿಳುನಾಡು, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಗೆಲುವು ಸಾಧಿಸುವ ಮೂಲಕ ಈ 2021ಕ್ಕೆ ಗುಡ್​ಬೈ ಹೇಳಲು ಸಜ್ಜಾಗಿದೆ.

ಜೈಪುರ್​​ದ ಸವಾಯಿ ಮಾನಸಿಂಗ್​​​​ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಫೈನಲ್​ ಪಂದ್ಯ ಆರಂಭಗೊಳ್ಳಲಿದ್ದು, ಇದಕ್ಕಾಗಿ ಉಭಯ ತಂಡಗಳು ಅಂತಿಮ ಹಂತದ ಅಭ್ಯಾಸದಲ್ಲಿ ಭಾಗಿಯಾಗಿವೆ.

Last Updated : Dec 25, 2021, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.