ನವದೆಹಲಿ: 5 ಪಂದ್ಯಗಳ ಸರಣಿಯಲ್ಲಿ ಉಳಿದಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದರೆ ನಾವು ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಸುಮ್ಮನಿರಿಸಬೇಕು ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.
ಲಾರ್ಡ್ಸ್ನಲ್ಲಿ ಭಾರತದ ಎದುರು 151 ರನ್ಗಳ ಹೀನಾಯ ಸೋಲು ಕಂಡಿದ್ದ ಅತಿಥೇಯ ತಂಡ ಲೀಡ್ಸ್ನಲ್ಲಿ ಅದ್ಭುತವಾಗಿ ತಿರುಗುಬಿದ್ದಿತ್ತು. ಭಾರತವನ್ನು 78ಕ್ಕೆ ಆಲೌಟ್ ಮಾಡಿದ್ದ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 76 ರನ್ಗಳಿಂದ ಗೆದ್ದು ಬೀಗಿತ್ತು. 4ನೇ ಟೆಸ್ಟ್ಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಸರಣಿ ಗೆಲ್ಲಬೇಕಾದರೆ ಕೊಹ್ಲಿ ಶಾಂತವಾಗಿರುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ಎಲ್ಲ ಕ್ರೆಡಿಟ್ ನಮ್ಮ ಬೌಲರ್ಗಳಿಗೆ ಸಲ್ಲಬೇಕು. ವಿರಾಟ್ ಒಬ್ಬ ವಿಶ್ವದರ್ಜೆಯ ಆಟಗಾರ. ಅವರನ್ನು ತಡೆಯುವಲ್ಲಿ ಸಫಲರಾಗುತ್ತಿರುವ ನಮ್ಮ ಬೌಲಿಂಗ್ ಬಳಗಕ್ಕೆ ಎಲ್ಲಾ ಶ್ರೇಯ ಸಲ್ಲಬೇಕು. ನಾವು ಆತನನ್ನು ಸುಮ್ಮನಿರುವಂತೆ ನೋಡಿಕೊಂಡಿದ್ದೇವೆ. ಅದು ನಮ್ಮ ಬೌಲಿಂಗ್ ವಿಭಾಗದ ಅತ್ಯಂತ ಉತ್ತಮ ಪ್ರಯತ್ನವಾಗಿದೆ.
ನಾವು ಸರಣಿಯನ್ನು ಗೆಲ್ಲಬೇಕಾದರೆ ಈ ಪ್ರಯತ್ನ ಹೀಗೆ ಮುಂದುವರಿಯಬೇಕು. ನಾವು ಕೊಹ್ಲಿಯನ್ನು ಔಟ್ ಮಾಡಲು ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಆತ ಅತ್ಯುತ್ತಮ ಆಟಗಾರ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಹಾಗಾಗಿ ನಾವು ಅತ್ಯುತ್ತಮ ಆಟಗಾರರ ವಿಕೆಟ್ ಪಡೆಯುವ ಮಾರ್ಗಗಳನ್ನು ಸದಾ ನೋಡಬೇಕು ಎಂದು ರೂಟ್ ಹೇಳಿದ್ದಾರೆ.
"ಖಂಡಿತವಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ವಿಶ್ವ ದರ್ಜೆಯ ತಂಡ, ನಾನು ಅವರಿಂದ ಕಡಿಮೆ ಪ್ರತಿಕ್ರಿಯೇ ಏನೂ ನಿರೀಕ್ಷಿಸುತ್ತಿಲ್ಲ. ನಾವು ಆಟದ ಯಾವುದೇ ಹಂತದಲ್ಲಾದರೂ ಸವಾಲನ್ನು ಸ್ವೀಕರಿಸುವ ಮಟ್ಟಕ್ಕೆ ತಂಡವನ್ನು ಬಲಪಡಿಸಬೇಕು" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಖಂಡಿತ ಭಾರತ ಕಮ್ಬ್ಯಾಕ್ ಮಾಡಲಿದೆ, ನಾವು ಅವರನ್ನೆದುರಿಸಲು ಸಿದ್ಧಗೊಳ್ಳುತ್ತಿದ್ದೇವೆ: ಕಾಲಿಂಗ್ವುಡ್