ETV Bharat / sports

ನನ್ನನ್ನು ನಾನು ಹೆಚ್ಚು ನಂಬುತ್ತೇನೆ, ಅದೇ ನನ್ನ ಯಶಸ್ಸಿಗೆ ಕಾರಣ: ರವೀಂದ್ರ ಜಡೇಜಾ - India vs England lords test

ನನ್ನ ಕೌಶಲ್ಯಗಳಲ್ಲಿ ನಾನು ಹೆಚ್ಚೇನು ಬದಲಾವಣೆ ಮಾಡಿಕೊಂಡಿಲ್ಲ. ಸಾಮಾನ್ಯವಾಗಿ ನನ್ನನ್ನು ನಾನು ನಂಬುತ್ತೇನೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶ ಸಿಕ್ಕರೆ, ನನ್ನನ್ನು ನಾನು ನಂಬುವುದರ ಜೊತೆಗೆ ತಂಡಕ್ಕೆ ನನ್ನಿಂದ ಎಷ್ಟೆಲ್ಲ ಸಾಧ್ಯವೋ ಅಷ್ಟು ಹಿಂದಿರುಗಿಸಲು ಎದುರು ನೋಡುತ್ತೇನೆ..

Ravindra Jadeja
ರವೀಂದ್ರ ಜಡೇಜಾ
author img

By

Published : Aug 11, 2021, 3:16 PM IST

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಆದರೆ, ಮಳೆ ಆಟಕ್ಕೆ ಅಡಚಣೆ ಉಂಟು ಮಾಡಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.

ಇದೀಗ ಭಾರತ ತಂಡ ಲಾರ್ಡ್ಸ್​ನಲ್ಲೂ ಅದೇ ಪ್ರದರ್ಶನ ತೋರಿ ಇಂಗ್ಲೆಂಡ್​ ವಿರುದ್ಧ ಮೇಲುಗೈ ಸಾಧಿಸುವ ಆಲೋಚನೆಯಲ್ಲಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಭಾರತ ತಂಡದ ಈ ಸರಣಿ ಗೆಲ್ಲಲು ಅಗತ್ಯ ಸಮತೋಲವನ್ನು ಹೊಂದಿದೆ ಎಂದು ಪಂದ್ಯಕ್ಕೂ ಮುನ್ನ ಅಭಿಪ್ರಾಯಪಟ್ಟಿದ್ದಾರೆ.

ಜಡೇಜಾ ಕೇವಲ ತಂಡ ಸಮತೋಲನದ ಬಗ್ಗೆ ಮಾತ್ರವಲ್ಲದೇ ಪಂದ್ಯಕ್ಕೂ ಮುಂಚಿತವಾಗಿ ಪ್ರತಿ ಸನ್ನಿವೇಶವನ್ನು ಹೇಗೆ ಧನಾತ್ಮಕವಾಗಿ ಸ್ವೀಕರಿಸಬೇಕು ಎನ್ನುವುದನ್ನು ಎಎನ್​ಐ ಜೊತೆ ಮಾತನಾಡುವ ವೇಳೆ ಬಹಿರಂಗಪಡಿಸಿದ್ದಾರೆ. ಜೊತೆಗೆ ನಾಯಕ ವಿರಾಟ್ ಕೊಹ್ಲಿಯ ಮನಸ್ಥಿತಿ ತಂಡದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಆಲ್‌ರೌಂಡರ್ ವಿವರಿಸಿದ್ದಾರೆ.

ನಾವು ಕಳೆದ ಎರಡು ತಿಂಗಳುಗಳಿಂದ ಇಂಗ್ಲೆಂಡ್​ನಲ್ಲಿದ್ದೇವೆ. ಇದು ನಮಗೆ ಉತ್ತಮವಾಗಿ ತಯಾರಿ ನಡೆಸಿಕೊಳ್ಳಲು ನೆರವಾಗಿದೆ. ಅದರಲ್ಲೂ ಇಂಗ್ಲಿಷ್​ ವಾತಾವರಣಕ್ಕೆ ಹೊಂದಿಕೊಳ್ಳಲು ಸಹ ನೆರವಾಗಿದೆ. ಹೆಚ್ಚು ದಿನಗಳ ವಿಶ್ರಾಂತಿ ದೊರೆಕಿದ್ದು, ನಮಗೆ ಈ ಪ್ರಮುಖ ಟೆಸ್ಟ್​ ಸರಣಿಗೆ ಮಾನಸಿಕ ಮತ್ತು ಬೌದ್ಧಿಕವಾಗಿ ಸಿದ್ಧರಾಗಲು ನಮಗೆ ಸಾಕಷ್ಟು ಸಮಯ ದೊರೆಯಿತು ಎಂದು ಜಡೇಜಾ ಹೇಳಿದ್ದಾರೆ.

Ravindra Jadeja
ರವೀಂದ್ರ ಜಡೇಜಾ

ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದ ಜಡೇಜಾ ತಮ್ಮ ಬ್ಯಾಟಿಂಗ್ ಬಗ್ಗೆ ಮತ್ತು ಮೂರು ಮಾದರಿಯ ಕ್ರಿಕೆಟ್​ನ ಸ್ಪೆಷಲಿಸ್ಟ್​ ಆಗುವುದಕ್ಕೆ ಏನೇನು ಬದಲಾವಣೆ ಮಾಡಿಕೊಂಡರು ಎಂದು ಕೇಳಿದ್ದಕ್ಕೆ ತಾವೂ ತಮ್ಮ ಮೇಲೆ ಮಾತ್ರ ಭರವಸೆ ಮತ್ತು ನಂಬಿಕೆಯನ್ನಿಟ್ಟು ಆಡುತ್ತೇನಷ್ಟೇ ಎಂದು ತಿಳಿಸಿದ್ದಾರೆ.

"ನನ್ನ ಕೌಶಲ್ಯಗಳಲ್ಲಿ ನಾನು ಹೆಚ್ಚೇನು ಬದಲಾವಣೆ ಮಾಡಿಕೊಂಡಿಲ್ಲ. ಸಾಮಾನ್ಯವಾಗಿ ನನ್ನನ್ನು ನಾನು ನಂಬುತ್ತೇನೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶ ಸಿಕ್ಕರೆ, ನನ್ನನ್ನು ನಾನು ನಂಬುವುದರ ಜೊತೆಗೆ ತಂಡಕ್ಕೆ ನನ್ನಿಂದ ಎಷ್ಟೆಲ್ಲ ಸಾಧ್ಯವೋ ಅಷ್ಟು ಹಿಂದಿರುಗಿಸಲು ಎದುರು ನೋಡುತ್ತೇನೆ.

ಇದೇ ಹಿಂದಿನ ಮತ್ತು ಈಗಿನ ಪ್ರದರ್ಶನದ ನಡುವಿನ ವ್ಯತ್ಯಾಸ ಅಷ್ಟೇ.. ಪಂದ್ಯಕ್ಕೂ ಮುನ್ನ ನಾನು ನನ್ನ ಕೌಶಲ್ಯದ ಕಡೆ ಗಮನ ನೀಡುತ್ತೇನೆ. ಈ ಪಂದ್ಯದಲ್ಲಿ ನಾನು ಎಲ್ಲಿ ಗಮನ ನೀಡಬೇಕು, ಬ್ಯಾಟಿಂಗ್​ ಅಥವಾ ಬೌಲಿಂಗ್ ಅಥವಾ ಫೀಲ್ಡಿಂಗ್​ನಲ್ಲಿ ಸುಧಾರಿಸಿಕೊಳ್ಳಬೇಕಾ ಎಂದು ಪ್ರತಿ ಪಂದ್ಯಗಳಲ್ಲೂ ಆಲೋಚಿಸುತ್ತೇನೆ" ಎಂದು ಜಡ್ಡು ತಿಳಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಟೆಸ್ಟ್​ ಪಂದ್ಯ ಗುರುವಾರದಿಂದ ಲಾರ್ಡ್ಸ್​ ಮೈದಾನದಲ್ಲಿ ನಡೆಯಲಿದೆ.

ಇದನ್ನು ಓದಿ:ಬುಮ್ರಾ 3 ಸ್ವರೂಪದ ಕ್ರಿಕೆಟ್​ನಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ : ಬೈರ್​ಸ್ಟೋವ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.