ತರೌಬಾ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್‌ನಲ್ಲಿ ಸೌಲಭ್ಯಗಳ ಬಗ್ಗೆ ನಿರಾಸೆಯನ್ನು ವ್ಯಕ್ತಪಡಿಸಿರುವ ಹಾರ್ದಿಕ್ ಪಾಂಡ್ಯ ಅವರು ಕೆರಿಬಿಯನ್ ದ್ವೀಪಗಳಲ್ಲಿ ಭಾರತದ ಪ್ರವಾಸದ ಸಂದರ್ಭದಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಮಾತನಾಡಿದ್ದಾರೆ. ವಿಂಡೀಸ್ ಮಂಡಳಿಯು ಈ ಸಮಸ್ಯೆಗಳನ್ನು ಗುರುತಿಸಿ ತ್ವರಿತವಾಗಿ ಪರಿಹರಿಸಬೇಕೆಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಹಾರ್ದಿಕ್ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಭಾರತೀಯ ತಂಡವನ್ನು ಅದ್ಭುತವಾಗಿ ಗೆಲುವಿನತ್ತ ಮುನ್ನಡೆಸಿದರು. ಟೀಮ್ ಇಂಡಿಯಾದ ಬೌಲರ್ಗಳು ವೆಸ್ಟ್ ಇಂಡೀಸ್ 151 ರನ್ಗೆ ಕಟ್ಟಿಹಾಕುವ ಮೂಲಕ 200 ರನ್‌ಗಳ ಬೃಹತ್ ಅಂತರದ ಗೆಲುವನ್ನು ದಾಖಲಿಸಿತು. ಬೃಹತ್ ಅಂತರದ ಸೋಲು ಕಂಡ ವೆಸ್ಟ್ ಇಂಡೀಸ್ 2-1ರಿಂದ ಸರಣಿಯಲ್ಲಿ ಸೋಲು ಕಂಡಿತು. ನಾಯಕರಾಗಿ ಹಾರ್ದಿಕ್ ಸಹ ಉತ್ತಮ ಬ್ಯಾಟಿಂಗ್ ನಿರ್ವಹಿಸಿದರು. ನಿನ್ನೆಯ ಇನ್ನಿಂಗ್ಸ್ನಲ್ಲಿ ಪಾಂಡ್ಯ ಅಜೇಯರಾಗಿ 52 ಬಾಲ್ನಲ್ಲಿ 70 ರನ್ ಕಲೆಹಾಕಿ ಭಾರತ 351 ರನ್ ಗಳಿಸಲು ಪ್ರಮುಖ ಕಾರಣರಾದರು.
ಪಂದ್ಯದ ಗೆಲುವಿನ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ,"ನಾವು ಆಡಿದ ಉತ್ತಮವಾದ ಮೈದಾನಗಳಲ್ಲಿ ಇದೂ ಒಂದಾಗಿದೆ. ನಾವು ಮುಂದಿನ ಬಾರಿ ವೆಸ್ಟ್ ಇಂಡೀಸ್‌ಗೆ ಬಂದಾಗ ಇನ್ನಷ್ಟೂ ಉತ್ತಮವಾಗಬಹುದು. ಪ್ರಯಾಣದಿಂದ ಹಿಡಿದು ನಿರ್ವಹಣೆಯವರೆಗೆ ಬಹಳಷ್ಟು ವಿಷಯಗಳು ಉತ್ತಮವಾಗುವ ಅಗತ್ಯವಿದೆ. ಕಳೆದ ವರ್ಷದ ಪ್ರವಾಸದಲ್ಲೂ ಕೆಲವು ಬಿಕ್ಕಟ್ಟುಗಳು ಸಂಭವಿಸಿದ್ದವು. ವೆಸ್ಟ್ ಇಂಡೀಸ್ ಕ್ರಿಕೆಟ್ ಇದನ್ನು ಗಮನಿಸಲಿ ಮತ್ತು ತಂಡವು ಪ್ರಯಾಣಿಸುವಾಗ ನಾವು ಐಷಾರಾಮಿ ಎಂದು ಕೇಳುವುದಿಲ್ಲ, ಆದರೆ ನಮಗೆ ಕೆಲವು ಮೂಲಭೂತ ಅವಶ್ಯಕತೆಗಳನ್ನು ಕಾಳಜಿ ವಹಿಸಬೇಕು ಎಂದು ಖಚಿತಪಡಿಸಿಕೊಳ್ಳಲು ಇದು ಸಮಯ ಎಂದು ನಾನು ಭಾವಿಸುತ್ತೇನೆ. ಅದನ್ನು ಹೊರತುಪಡಿಸಿ, ಇಲ್ಲಿಗೆ ಬಂದು ಕೆಲ ಉತ್ತಮ ಕ್ರಿಕೆಟ್ನ್ನು ಆಡಲು ಬಯಸುತ್ತೇವೆ" ಎಂದು ಹೇಳಿದರು.
ಮೊದಲ ಏಕದಿನಕ್ಕೆ ಮುಂಚಿತವಾಗಿ, ಟ್ರಿನಿಡಾಡ್‌ನಿಂದ ಬಾರ್ಬಡೋಸ್‌ಗೆ ತಡರಾತ್ರಿಯ ವಿಮಾನ ವಿಳಂಬವಾದ ಬಗ್ಗೆ ಭಾರತೀಯ ಕ್ರಿಕೆಟಿಗರು ಬಿಸಿಸಿಐಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಮಾನ ತಡವಾದ ಕಾರಣ ಏಕದಿನ ಸರಣಿಯ ಪಂದ್ಯಕ್ಕೆ ಮುಂಚಿತವಾಗಿ ಆಟಗಾರರಿಗೆ ಸರಿಯಾದ ನಿದ್ರೆಗೆ ಸಮಯ ಸಿಗದೇ ಅಭ್ಯಾಸಕ್ಕೂ ತೊಂದರೆಯಾಗಿದೆ.
ಮಂಗಳವಾರ ನಡೆದ ಮೂರನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಪ್ರಾಬಲ್ಯವನ್ನು ಸಾಧಿಸಿತು. ಮೊದಲ ವಿಕೆಟ್ನಲ್ಲಿ ಕಿಶನ್ ಮತ್ತು ಗಿಲ್ 143 ರನ್ ಜೊತೆಯಾಟವನ್ನು ಆಡಿದರು.
64 ಬಾಲ್ನಲ್ಲಿ 3 ಸಿಕ್ಸ್ ಮತ್ತು 8 ಬೌಂಡರಿಯಿಂದ ಕಿಶನ್ 77 ರನ್ ಗಳಿಸಿ ವಿಕೆಟ್ ಕೊಟ್ಟರು. ಶುಭಮನ್ ಗಿಲ್ (85), ಸಂಜು ಸ್ಯಾಮ್ಸನ್ (51), ನಾಯಕ ಹಾರ್ದಿಕ್ ಪಾಂಡ್ಯ (70*) ಮತ್ತು ಸೂರ್ಯ ಕುಮಾರ್ ಯಾದವ್ (35) ಉತ್ತಮ ಪ್ರದರ್ಶನ ನೀಡಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಶಾರ್ದೂಲ್ ಠಾಕೂರ್ (4) ಮತ್ತು ಮುಖೇಶ್ ಕುಮಾರ್ (3) ಅವರ ಬೌಲಿಂಗ್ನಲ್ಲಿ ವಿಂಡೀಸ್ ಬ್ಯಾಟರ್ಗಳು ವೈಫಲ್ಯ ಕಂಡರು. ಇದರಿಂದ 151 ರನ್ ಕೆರಿಬಿಯನ್ ತಂಡದ ಆಲ್ಔಟ್ ಆಯಿತು.
ಇದನ್ನೂ ಓದಿ: KL Rahul: ಗ್ಲೌಸ್ ತೊಟ್ಟು ಕೀಪಿಂಗ್ ಅಭ್ಯಾಸ ಮಾಡುತ್ತಿದ್ದಾರೆ ರಾಹುಲ್.. ತಂಡಕ್ಕೆ ಕಮ್ಬ್ಯಾಕ್ ಯಾವಾಗ ಎಂದ ಅಭಿಮಾನಿಗಳು