ETV Bharat / sports

ಭಾರತದ 1000ನೇ ಏಕದಿನ ಪಂದ್ಯಕ್ಕೆ ಸಕಲ ಸಿದ್ದತೆ : ಈ ಐತಿಹಾಸಿಕ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ?

ಫೆಬ್ರವರಿ 6ರಂದು ಮೊದಲ ಪಂದ್ಯ ನಡೆಯಲಿದೆ. ಇದು ಭಾರತ ತಂಡಕ್ಕೆ ಐತಿಹಾಸಿಕೆ ಪಂದ್ಯವಾಗಿದೆ. ಈ ಪಂದ್ಯ ಭಾರತ ತಂಡಕ್ಕೆ 1000ನೇ ಏಕದಿನ ಪಂದ್ಯವಾಗಿದೆ. ಈ ಐತಿಹಾಸಿಕ ಪಂದ್ಯಕ್ಕೆ ಭಾರತ ಕ್ರಿಕೆಟ್​ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. ಮೂರು ಏಕದಿನ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ..

ಭಾರತದ 1000ನೇ ಏಕದಿನ ಪಂದ್ಯಕ್ಕೆ ಸಕಲ ಸಿದ್ದತೆ

author img

By

Published : Feb 2, 2022, 12:10 PM IST

ಅಹಮದಾಬಾದ್ : ಭಾರತ ವಿರುದ್ಧದ ವೈಟ್ ಬಾಲ್ ಸರಣಿಗೆ ಮುನ್ನ ಕಿರಾನ್ ಪೊಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಅಹಮದಾಬಾದ್‌ಗೆ ಆಗಮಿಸಿದೆ. ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಲಿದೆ.

ಏಕದಿನ ಸರಣಿ ಫೆಬ್ರವರಿ 6ರಿಂದ 11ರವರೆಗೆ ನಡೆಯಲಿದೆ. ಫೆಬ್ರವರಿ 6ರಂದು ಮೊದಲ ಪಂದ್ಯ ನಡೆಯಲಿದೆ. ಇದು ಭಾರತ ತಂಡಕ್ಕೆ ಐತಿಹಾಸಿಕ ಪಂದ್ಯವಾಗಿದೆ. ಈ ಪಂದ್ಯ ಭಾರತ ತಂಡಕ್ಕೆ 1000ನೇ ಏಕದಿನ ಪಂದ್ಯವಾಗಿದೆ.

ಈ ಐತಿಹಾಸಿಕ ಪಂದ್ಯಕ್ಕೆ ಭಾರತ ಕ್ರಿಕೆಟ್​ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. ಮೂರು ಏಕದಿನ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ.

"ಬಾರ್ಬಡೋಸ್‌ನಿಂದ ಸುದೀರ್ಘ ಎರಡು ದಿನಗಳ ಪ್ರಯಾಣದ ನಂತರ, #MenInMaroon ಭಾರತಕ್ಕೆ ಆಗಮಿಸಿದ್ದಾರೆ" ಎಂದು ವಿಂಡೀಸ್ ಕ್ರಿಕೆಟ್‌ ಅಧಿಕೃತ ಹ್ಯಾಂಡಲ್​ನಲ್ಲಿ ಟ್ವೀಟ್ ಮಾಡಿಕೊಂಡಿದೆ.

ಇನ್ನು ಭಾರತ ಮತ್ತು ವೆಸ್ಟ್​ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಕೋವಿಡ್​-19 ಸಾಂಕ್ರಾಮಿಕ ಕಾರಣದಿಂದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಮಂಗಳವಾರ ಖಚಿತಪಡಿಸಿದೆ.

"ನಾವು 2022ರ ಏಕದಿನ ಸರಣಿಗೆ ಭಾರತಕ್ಕೆ ಪ್ರವಾಸ ಕೈಗೊಡಿರುವ ವೆಸ್ಟ್​ ಇಂಡೀಸ್​ ತಂಡಕ್ಕೆ ಅತಿಥ್ಯವಹಿಸಲು ಸಿದ್ಧರಾಗಿದ್ಧೇವೆ. ಫೆಬ್ರವರಿ 6ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯ ಭಾರತಕ್ಕೆ ತುಂಬಾ ವಿಶೇಷ ಮತ್ತು ಐತಿಹಾಸಿಕ ಪಂದ್ಯವಾಗಲಿದೆ. ಅದು ದೇಶದ 1000ನೇ ಏಕದಿನ ಪಂದ್ಯವಾಗಲಿದೆ.

ಏಕದಿನ ಕ್ರಿಕೆಟ್​​ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪುವ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಲಿದೆ" ಎಂದು ಜಿಸಿಎ ಟ್ವೀಟ್​ ಮಾಡಿದೆ. ಪ್ರಸ್ತುತ ಕೋವಿಡ್​​ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಬೋರ್ಡ್ ಮತ್ತೊಂದು ಟ್ವೀಟ್​ನಲ್ಲಿ ಹೇಳಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.