ಮುಂಬೈ: ಪ್ಲೇ-ಆಫ್ ಪ್ರವೇಶಿಸಲು ಯುಪಿ ವಾರಿಯರ್ಸ್ಗೆ ಇಂದು ಕೊನೆಯ ಅವಕಾಶ ಇದ್ದು, ಅದಕ್ಕಾಗಿ ಗುಜರಾತ್ ಜೈಂಟ್ಸ್ನ್ನು ಮಣಿಸಬೇಕಿದೆ. ಟಾಸ್ ಗೆದ್ದ ಗುಜರಾತ್ ಜೈಂಟ್ಸ್ನ ನಾಯಕಿ ಸ್ನೇಹ ರಾಣಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಗುಜರಾತ್ನಲ್ಲಿ ಒಂದು ಬದಲಾವಣೆಯಾಗಿದ್ದು, ಮೇಘನಾ ಬದಲಿಗೆ ಮೋನಿಕಾ ಪಟೇಲ್‌ಗೆ ಅವಕಾಶ ನೀಡಲಾಗಿದೆ.
ಯುಪಿ ವಾರಿಯರ್ಸ್ ಆಡುವ ತಂಡ: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ ನಾಯಕಿ), ಕಿರಣ್ ನವಗಿರ್, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಗುಜರಾತ್ ಜೈಂಟ್ಸ್ ಆಡುವ ತಂಡ: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಸ್ನೇಹ ರಾಣಾ(ನಾಯಕಿ), ಕಿಮ್ ಗಾರ್ತ್, ಮೋನಿಕಾ ಪಟೇಲ್, ತನುಜಾ ಕನ್ವರ್, ಅಶ್ವನಿ ಕುಮಾರಿ
-
🚨 Toss Update 🚨@GujaratGiants win the toss and elect to bat first against @UPWarriorz.
— Women's Premier League (WPL) (@wplt20) March 20, 2023 " class="align-text-top noRightClick twitterSection" data="
Follow the match ▶️ https://t.co/FcApQh0PlQ#TATAWPL | #GGvUPW pic.twitter.com/Z6XtT7xPsw
">🚨 Toss Update 🚨@GujaratGiants win the toss and elect to bat first against @UPWarriorz.
— Women's Premier League (WPL) (@wplt20) March 20, 2023
Follow the match ▶️ https://t.co/FcApQh0PlQ#TATAWPL | #GGvUPW pic.twitter.com/Z6XtT7xPsw🚨 Toss Update 🚨@GujaratGiants win the toss and elect to bat first against @UPWarriorz.
— Women's Premier League (WPL) (@wplt20) March 20, 2023
Follow the match ▶️ https://t.co/FcApQh0PlQ#TATAWPL | #GGvUPW pic.twitter.com/Z6XtT7xPsw
ಪ್ಲೇ-ಆಫ್ಗಾಗಿ ಎರಡೂ ತಂಡಕ್ಕೆ ಗೆಲುವು ಅನಿವಾರ್ಯ: ಗುಜರಾತ್ ಜೈಂಟ್ಸ್ ತಂಡ ಏಳು ಪಂದ್ಯದಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದು, 4 ಅಂಕದಿಂದ ಕೊನೆಯ ಸ್ಥಾನದಲ್ಲಿದೆ. ಇಂದು ಪಂದ್ಯ ಗೆದ್ದಲ್ಲಿ 6 ಅಂಕ ಗಳಿಸಲಿದೆ. ಇದರಿಂದ ಮೂರು ಅಥವಾ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಅವಕಾಶ ಇದೆ. ರನ್ ರೇಟ್ ಕ್ವಾಲಿಫೈಗೆ ಪ್ರಮುಖವಾಗಲಿದೆ.
ಯುಪಿ ವಾರಿಯರ್ಸ್ ತಂಡವೂ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ನೇರ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳುತ್ತದೆ. ಈಗಾಗಲೇ 6 ಪಂದ್ಯದಲ್ಲಿ ಮೂರನ್ನು ಗೆದ್ದು, 6 ಅಂಕದಿಂದ ಮೂರನೇ ಸ್ಥಾನದಲ್ಲಿದೆ. ಯುಪಿಗೆ ಇಂದಿನ ಪಂದ್ಯ ಸೇರಿ ಎರಡು ಪಂದ್ಯಗಳಿದ್ದು, ಒಂದು ಗೆಲುವು ಎಲಿಮಿನೇಟರ್ಗೆ ಕೊಂಡೊಯ್ಯಲಿದೆ.
ಇದನ್ನೂ ಓದಿ: ಇಂಡಿಯನ್ ವೆಲ್ಸ್ ಗೆದ್ದ ಕಾರ್ಲೋಸ್: ಜೋಕೊವಿಕ್ ಹಿಂದಿಕ್ಕಿ ನಂ. 1 ಪಟ್ಟಕ್ಕೇರಿದ 19ರ ಯುವಕ
ಟಾಸ್ ನಂತರ ಮಾತನಾಡಿದ ಗುಜರಾತ್ ಜೈಂಟ್ಸ್ ನಾಯಕಿ ಸ್ನೇಹ ರಾಣಾ, " ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಇಂದು ಬಿಸಿಲು ಇದ್ದು, ಸಮತಟ್ಟಾದ ಟ್ರ್ಯಾಕ್ ಇರುವುದರಿಂದ ಹೆಚ್ಚಿನ ಸ್ಕೋರ್ ಮಾಡಲು ಸಹಾಯ ಆಗಲಿದೆ. ಮೇಘನಾ ಅವರ ಸ್ಥಾನದಲ್ಲಿ ಮೋನಿಕಾ ಪಟೇಲ್ ಬಂದಿದ್ದಾರೆ. ಇಂದಿನ ಪಂದ್ಯ ಎಲಿಮಿನೇಟರ್ಗೆ ಹೋಗಲು ನಮಗೆ ಬಹಳಾ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟು ಮ್ಯಾಚ್ ಆಡುತ್ತೇವೆ" ಎಂದು ಹೇಳಿದ್ದಾರೆ.
ಯುಪಿ ವಾರಿಯರ್ಸ್ ನಾಯಕಿ ಅಲಿಸ್ಸಾ ಹೀಲಿ, "ಮೊದಲು ಬಾಲಿಂಗ್ ಮಾಡಲು ಬೇಸರ ಇಲ್ಲ, ಪರಿಸ್ಥಿತಿಗೆ ತಕ್ಕಂತೆ ಒಗ್ಗಿಕೊಂಡು ಬೌಲಿಂಗ್ ಮಾಡುತ್ತೇವೆ. ಈ ವಿಕೆಟ್‌ನಲ್ಲಿ ಮೂರನೇ ಪಂದ್ಯ ಆಡುತ್ತಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶ ಇದೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲಾ" ಎಂದಿದ್ದಾರೆ.
ಅಂಕ ಪಟ್ಟಿ: ಮುಂಬೈ ಇಂಡಿಯನ್ಸ್ ತಂಡ 6 ಪಂದ್ಯದಲ್ಲಿ 5ನ್ನು ಗೆದ್ದು 10 ಅಂಕದಿಂದ ಪ್ರಥಮ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯದಲ್ಲಿ 4ರಲ್ಲಿ ಗೆದ್ದು 8 ಅಂಕದಿಂದ 2ನೇ ಮತ್ತು 6ರಲ್ಲಿ 3 ಗೆದ್ದು ಯುಪಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ನಾಲ್ಕು ಹಾಗೂ ಗುಜರಾತ್ ಐದರಲ್ಲಿದೆ.
ಇದನ್ನೂ ಓದಿ: WPLನಲ್ಲಿಂದು..: ಕ್ವಾಲಿಫೈಗಾಗಿ ಯುಪಿ ಹೋರಾಟ; ನೇರ ಫೈನಲ್ ಪ್ರವೇಶಕ್ಕೆ ಮುಂಬೈ ಪ್ರಯತ್ನ