ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ನಡುವೆ ಡಬ್ಲ್ಯೂಪಿಎಲ್ನ 6ನೇ ಮುಖಾಮುಖಿ ಆಗುತ್ತಿದೆ. ಟಾಸ್ ಗೆದ್ದ ಗುಜರಾತ್ ನಾಯಕಿ ಸ್ನೇಹ ರಾಣ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬೆಂಗಳೂರು ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಪೂನಂ ಖೇಮ್ನಾರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಗುಜರಾತ್ ಜೈಂಟ್ಸ್ ಆಡುವ ತಂಡ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ: ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್, ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್
ರಾಣಾ ನಾಯಕತ್ವ ಮುಂದುವರಿಕೆ: ಗುಜರಾತ್ ಜೈಂಟ್ಸ್ ನಾಯಕ್ವವನ್ನು ಆಸ್ಟ್ರೇಲಿಯಾದ ಬೆತ್ ಮೂನಿ ಅವರಿಗೆ ಕೊಡಲಾಗಿತ್ತು. ಮೊದಲ ಪಂದ್ಯಕ್ಕೂ ಮುನ್ನ ಗಾಯಗೊಂಡ ನಾಯಕಿ ಬೆತ್ ಮೂನಿ ಬದಲಾಗಿ ರಾಣಾಗೆ ನಾಯಕತ್ವ ನೀಡಲಾಗಿತ್ತು. ಇನ್ನು, ಮೂನಿ ಚೇತರಿಸಿಕೊಳ್ಳದ ಕಾರಣ ರಾಣಾ ನಾಯಕಿಯಾಗಿ ಮುಂದುವರೆದಿದ್ದಾರೆ.
-
UP NEXT ⏳@GujaratGiants 🆚 @RCBTweets
— Women's Premier League (WPL) (@wplt20) March 8, 2023 " class="align-text-top noRightClick twitterSection" data="
🏟️ Brabourne Stadium, CCI
Who are you backing to win tonight ❓#TATAWPL | #GGvRCB pic.twitter.com/JyaecoK4qy
">UP NEXT ⏳@GujaratGiants 🆚 @RCBTweets
— Women's Premier League (WPL) (@wplt20) March 8, 2023
🏟️ Brabourne Stadium, CCI
Who are you backing to win tonight ❓#TATAWPL | #GGvRCB pic.twitter.com/JyaecoK4qyUP NEXT ⏳@GujaratGiants 🆚 @RCBTweets
— Women's Premier League (WPL) (@wplt20) March 8, 2023
🏟️ Brabourne Stadium, CCI
Who are you backing to win tonight ❓#TATAWPL | #GGvRCB pic.twitter.com/JyaecoK4qy
ಎರಡು ಸೋಲು ಕಂಡಿರುವ ಉಭಯ ತಂಡಗಳು: ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಒಂದು ಗೆಲುವನ್ನು ಕಂಡಿಲ್ಲ. ಇಂದಿನ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಚೊಚ್ಚಲ ಗೆಲುವಾಗಲಿದೆ. ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಗಲಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನ ಸೂತ್ರ ಹುಡುಕುತ್ತಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಎದುರು ಗುಜರಾತ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸೋಲನುಭವಿಸಿತ್ತು. ಮುಂಬೈ 143 ರನ್ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಗುಜರಾತ್ ವೈಫಲ್ಯ ಕಂಡಿತು. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಎದುರು ಮೂರು ವಿಕೆಟ್ಗಳ ಸೋಲು ಕಂಡಿತ್ತು. ಗುಜರಾತ್ 169 ರನ್ ಗುರಿ ನೀಡಿತ್ತಾದರೂ ಅದನ್ನು ಕಾಪಾಡಿಕೊಳ್ಳುವಲ್ಲಿ ಸೋತಿತು.
ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಬೃಹತ್ ರನ್ ಬೆನ್ನು ಹತ್ತುವಲ್ಲಿ ಎಡವಿತು. ಟಾಸ್ ಸೋತು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ 2 ವಿಕೆಟ್ ನಷ್ಟದಲ್ಲಿ 223 ರನ್ ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ ಆರ್ಸಿಬಿ 163 ರನ್ ಗಳಿಸಿತು. 60 ರನ್ನಿಂದ ಸೋಲನುಭವಿಸಿತು. ಮುಂಬೈ ಎದುರಿನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಮಂಧಾನ ಬೃಹತ್ ರನ್ ಕಲೆಹಾಕುವಲ್ಲಿ ವಿಫಲರಾಗಿ 9 ವಿಕೆಟ್ನ ಸೋಲು ಕಂಡಿದ್ದರು.
ಪಿಚ್ ಲಾಭ ಪಡೆದುಕೊಳ್ಳುತ್ತಾ ಆರ್ಸಿಬಿ: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಪಂದ್ಯ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಟಾಸ್ಗೆದ್ದು ಬೌಲಿಂಗ್ ಮತ್ತು ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಸೋಲನುಭವಿಸಿದೆ. ಇದರಿಂದ ಪಿಚ್ನ ಗುಣಾವಗುಣ ಅರಿತ ತಂಡ ಇಂದು ಗೆಲುವಿನ ತಂತ್ರ ಹೇಗೆ ರೂಪಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಉಚಿತ ಪ್ರವೇಶ: ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷದ ಪ್ರಯುಕ್ತ ಇಂದು ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ಅವಕಾಶವನ್ನು ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಮಾಡಿಕೊಡಲಾಗಿದೆ. ಈ ಬಗ್ಗೆ ಮುಂಬೈ ಎದುರು ಆರ್ಸಿಬಿ ಪಂದ್ಯ ಆಡುವಾಗ ಪ್ರಕಟ ಮಾಡಲಾಗಿತ್ತು. ಅಲ್ಲದೇ, ಡಬ್ಲ್ಯೂಪಿಎಲ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.
ಇದನ್ನೂ ಓದಿ: ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಅಶ್ವಿನ್ - ಜೇಮ್ಸ್ ಆಂಡರ್ಸನ್ ಅಗ್ರಸ್ಥಾನಕ್ಕಾಗಿ ಪೈಪೋಟಿ