ETV Bharat / sports

ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ: ಶ್ರೇಯಸ್ ಅಯ್ಯರ್​ ಪ್ರಶಂಸಿಸಿದ ರೋಹಿತ್ - Rohit loud Shreyas iyer

ತಮ್ಮ ಮೊದಲ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಅಜೇಯ 75 ರನ್​ಗಳಿಸಿದ್ದಾರೆ. ಈ ಪ್ರದರ್ಶನವನ್ನು ಮೆಚ್ಚಿರುವ ರೋಹಿತ್ ಶರ್ಮಾ "ಟೆಸ್ಟ್​ ಕೆರಿಯರ್​ನ ಉತ್ತಮ ಆರಂಭ ಶ್ರೇಯಸ್​ ಅಯ್ಯರ್" ಎಂದು ಟ್ವೀಟ್​ ಮಾಡಿದ್ದಾರೆ.

Rohit lauds Shreyas Iyer
ರೋಹಿತ್ ಶರ್ಮಾ ಶ್ರೇಯಸ್​ ಅಯ್ಯರ್​
author img

By

Published : Nov 25, 2021, 7:06 PM IST

ಹೈದರಾಬಾದ್​(ಡೆಸ್ಕ್): ನ್ಯೂಜಿಲ್ಯಾಂಡ್​ ಎದುರು ತಮ್ಮ ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಅರ್ಧಶತಕ ಸಿಡಿಸಿರುವ ಶ್ರೇಯಸ್​ ಅಯ್ಯರ್​ ಅವರನ್ನು ಭಾರತ ಟಿ20 ತಂಡದ ನಾಯಕ ರೋಹಿತ್ ಶರ್ಮಾ ಪ್ರಶಂಸಿದ್ದು, ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ಆರಂಭ ಮಾಡಿದ್ದೀಯ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಗಾಯದಿಂದ ಚೇತರಿಸಿಕೊಂಡ ನಂತರ ಸಿಕ್ಕ ಒಂದೊಂದೇ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಶ್ರೇಯಸ್​ ಗುರುವಾರ ದಿಗ್ಗಜರ ಅನುಪಸ್ಥಿತಿಯಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಆಡುವ ಅವಕಾಶ ಪಡೆದಿದ್ದರು.

ಟೀಮ್ ಇಂಡಿಯಾ 106 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗೆ ಆಗಮಿಸಿದ ಮುಂಬೈಕರ್​ 4ನೇ ವಿಕೆಟ್​ಗೆ ನಾಯಕ ರಹಾನೆ(35) ಜೊತೆಗೆ 39 ರನ್​ ಸೇರಿಸಿದರು. ರಹಾನೆ ಔಟಾದ ನಂತರ ಅನುಭವಿ ಜಡೇಜಾ ಜೊತೆಗೂಡಿದ ಯುವ ಪ್ರತಿಭೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ 5ನೇ ವಿಕೆಟ್​ ಜೊತೆಯಾಟದಲ್ಲಿ 113 ರನ್​ ಸೇರಿಸಿ ಭಾರತವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು.

ತಮ್ಮ ಮೊದಲ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಅಜೇಯ 75 ರನ್​ಗಳಿಸಿದ್ದಾರೆ. ಈ ಪ್ರದರ್ಶನವನ್ನು ಮೆಚ್ಚಿರುವ ರೋಹಿತ್ ಶರ್ಮಾ "ಟೆಸ್ಟ್​ ಕೆರಿಯರ್​ನ ಉತ್ತಮ ಆರಂಭ ಶ್ರೇಯಸ್​ ಅಯ್ಯರ್" ಎಂದು ಟ್ವೀಟ್​ ಮಾಡಿದ್ದಾರೆ.

ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕೋಚ್​ ರಿಕಿ ಪಾಂಟಿಂಗ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶ್ರೇಯಸ್​ ಅಯ್ಯರ್​ಗೆ ಶುಭ ಕೋರಿದ್ದರು." ಕಳೆದ ಕೆಲವು ವರ್ಷಗಳಿಂದ ನಿಮ್ಮ ಕಠಿಣ ಪರಿಶ್ರಮವನ್ನು ನೋಡಿದ್ದೇನೆ. ಟೆಸ್ಟ್​ ಕ್ಯಾಪ್ ಪಡೆಯಲು ನೀವು ಅರ್ಹರು. ತುಂಬಾ ಹೆಮ್ಮೆಯಾಗುತ್ತಿದೆ ಶ್ರೇಯಸ್​ ಅಯ್ಯರ್ ಎಂದು ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ:7 ತಿಂಗಳ ಏಳುಬೀಳಿನ ಪಯಣ: ಗಾಯದಿಂದ ಚೇತರಿಸಿಕೊಂಡು ಟೆಸ್ಟ್​ ಕ್ಯಾಪ್​ ಧರಿಸಿದ ಅಯ್ಯರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.