ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಮ್ಯಾಕ್ಸ್ವೆಲ್ ಆಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿದ್ದು, ಬರೋಬ್ಬರಿ ಐದು ವರ್ಷಗಳ ಬಳಿಕ ಐಪಿಎಲ್ನಲ್ಲಿ ಫಿಫ್ಟಿ ಸಾಧನೆ ಮಾಡಿದ್ದಾರೆ.
-
FIFTY!
— IndianPremierLeague (@IPL) April 14, 2021 " class="align-text-top noRightClick twitterSection" data="
The much awaited half-century for @Gmaxi_32 👏👏. This one comes after the 2016 edition of #VIVOIPL.
Live - https://t.co/kDrqkM24yz #SRHvRCB #VIVOIPL pic.twitter.com/BByV7taJmi
">FIFTY!
— IndianPremierLeague (@IPL) April 14, 2021
The much awaited half-century for @Gmaxi_32 👏👏. This one comes after the 2016 edition of #VIVOIPL.
Live - https://t.co/kDrqkM24yz #SRHvRCB #VIVOIPL pic.twitter.com/BByV7taJmiFIFTY!
— IndianPremierLeague (@IPL) April 14, 2021
The much awaited half-century for @Gmaxi_32 👏👏. This one comes after the 2016 edition of #VIVOIPL.
Live - https://t.co/kDrqkM24yz #SRHvRCB #VIVOIPL pic.twitter.com/BByV7taJmi
ಚೆನ್ನೈನ ಎಂ. ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸವೆಲ್ 41 ಎಸೆತಗಳಲ್ಲಿ 59 ರನ್ಗಳಿಕೆ ಮಾಡಿದ್ದು, ಇದರಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿಕೊಂಡಿವೆ. ಐಪಿಎಲ್ ಇತಿಹಾಸದಲ್ಲಿ ಮ್ಯಾಕ್ಸ್ವೆಲ್ ಸಿಡಿಸಿರುವ 7ನೇ ಅರ್ಧಶತಕ ಇದಾಗಿದ್ದು, 2016ರ ಬಳಿಕ ಇದೇ ಮೊದಲ ಸಲ ಈ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಒಂದೇ ಓವರ್ನಲ್ಲಿ ಎರಡು ಸಿಕ್ಸರ್ ಹಾಗೂ ಮತ್ತೊಂದು ಬೌಂಡರಿ ಸಿಡಿಸಿದ ಮ್ಯಾಕ್ಸ್ವೆಲ್ ತಮ್ಮ ರನ್ ಬರ ನಿಗಿಸಿಕೊಂಡಿದ್ದಾರೆ.
2016ರ ಮೇ ತಿಂಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಮ್ಯಾಕ್ಸ್ವೆಲ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಅಂದಿನಿಂದ 1807 ದಿನಗಳ ನಂತರ ಅಂದರೆ ಐಪಿಎಲ್ನ 40 ಇನ್ನಿಂಗ್ಸ್ಗಳ ಬಳಿಕ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ವಿರಾಟ್ ನೀಡಿದ್ದ ಸಲಹೆ: ಕಿಂಗ್ ಕೊಹ್ಲಿ ಹಿಂದಿಕ್ಕಿ ಐಸಿಸಿ ಏಕದಿನ ಅಗ್ರಸ್ಥಾನಕ್ಕೇರಿದ ಬಾಬರ್!
ಸನ್ರೈಸರ್ಸ್ ವಿರುದ್ಧ ಆರ್ಸಿಬಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ನಿಂತ ಮ್ಯಾಕ್ಸ್ವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯಾ ಆಲ್ರೌಂಡರ್ ಈ ಸಲ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.