ದುಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(BCCI president Sourav Ganguly ) ಐಸಿಸಿ ಪುರುಷ ಕ್ರಿಕೆಟ್ ಸಮಿತಿಯ(ICC Men's Cricket Committee) ನೂತನ ಆಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ICC ಆಡಳಿತ ಮಂಡಳಿ ಬುಧವಾರ ತಿಳಿಸಿದೆ.
ಭಾರತದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ(Anil Kumble) ಅವರ ಮೂರು ವರ್ಷಗಳ ಮೂರು ಅವಧಿ(9 ವರ್ಷ) ಸಂಪೂರ್ಣಗೊಂಡ ಬೆನ್ನಲ್ಲೇ ಗಂಗೂಲಿ ಅವರ ಸ್ಥಾನಕ್ಕೇರಿದ್ದಾರೆ.
"ಐಸಿಸಿ ಮೆನ್ಸ್ ಕ್ರಿಕೆಟ್ ಕಮಿಟಿಯ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿಯವರನ್ನು ಸ್ವಾಗತಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ವಿಶ್ವದ ಅತ್ಯತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿ ಮತ್ತು ನಂತರ ಒಬ್ಬ ಆಡಳಿತಗಾರನಾಗಿ ಅವರ ಅನುಭವವು ನಮ್ಮ ಕ್ರಿಕೆಟ್ ನಿರ್ಧಾರಗಳನ್ನು ಮುಂದೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ(ICC Chairman Greg Barclay) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಳೆದ 9 ವರ್ಷಗಳ ಅವಧಿಯಲ್ಲಿ ಅನಿಲ್ ಕುಂಬ್ಳೆ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಅವಧಿಯಲ್ಲಿ ಡಿಆರ್ಎಸ್ ನಂತಹ ನಿಯಮಿತ ಮತ್ತು ಸ್ಥಿರವಾದ ಅಪ್ಲಿಕೇಶನ್ ಜಾರಿಗೆ ಬಂದಿದೆ ಮತ್ತು ಶಂಕಿತ ಬೌಲಿಂಗ್ ಕ್ರಮಗಳನ್ನು ಬಗೆಹರಿಸಲು ಅವರ ದೃಢವಾದ ಪ್ರಕ್ರಿಯೆಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಸುಧಾರಿಸಲು ನೆರವಾಗಿದೆ ಎಂದು ಭಾರತೀಯ ಲೆಜೆಂಡರಿ ಕ್ರಿಕೆಟಿಗನ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.
ಐಸಿಸಿ ಮಹಿಳೆಯರ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಸಿಇಒ ಜಾನಿ ಗ್ರೇವ್ ಅವರು ನೇಮಕವಾಗಿದ್ದಾರೆ.
ಇದನ್ನು ಓದಿ:ದ್ರಾವಿಡ್ ಬ್ಯಾಟಿಂಗ್ನಂತಯೇ ಅವರ ಕೋಚಿಂಗ್ ಕೂಡ ಸುರಕ್ಷಿತ ಮತ್ತ ಸದೃಢವಾಗಿರಲಿದೆ : ಗವಾಸ್ಕರ್