ಹೈದರಾಬಾದ್: ದೇಶದಲ್ಲಿ ಇವತ್ತೂ ಕೂಡಾ 4 ಸಾವಿರಕ್ಕೂ ಹೆಚ್ಚು ಜನರು ಮಾರಕ ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಪ್ರತಿದಿನ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಕೊರೊನಾದಿಂದ ಜನರು ಹತ್ತು ಹಲವು ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಕ್ರಿಕೆಟ್ ಆಟಗಾರರು ತಮ್ಮದೇ ರೀತಿಯಲ್ಲಿ ಸಹಾಯಕ್ಕೆ ಧಾವಿಸಿದ್ದಾರೆ.
24 ಗಂಟೆಯಲ್ಲಿ 3.6 ಕೋಟಿ ರೂ: ಕೊಹ್ಲಿ-ಅನುಷ್ಕಾ ದಂಪತಿಯ ಅಭಿಯಾನ
-
3.6 crores in less than 24 hours! Overwhelmed with the response. Let’s keep fighting to meet our target and help the country. Thank you.🙏#InThisTogether #ActNow #OxygenForEveryone #TogetherWeCan #SocialForGood@ketto @actgrants pic.twitter.com/ZCyAlrgOXj
— Virat Kohli (@imVkohli) May 8, 2021 " class="align-text-top noRightClick twitterSection" data="
">3.6 crores in less than 24 hours! Overwhelmed with the response. Let’s keep fighting to meet our target and help the country. Thank you.🙏#InThisTogether #ActNow #OxygenForEveryone #TogetherWeCan #SocialForGood@ketto @actgrants pic.twitter.com/ZCyAlrgOXj
— Virat Kohli (@imVkohli) May 8, 20213.6 crores in less than 24 hours! Overwhelmed with the response. Let’s keep fighting to meet our target and help the country. Thank you.🙏#InThisTogether #ActNow #OxygenForEveryone #TogetherWeCan #SocialForGood@ketto @actgrants pic.twitter.com/ZCyAlrgOXj
— Virat Kohli (@imVkohli) May 8, 2021
ಸುಮಾರು 7 ಕೋಟಿ ರೂ. ಹಣ ಸಂಗ್ರಹಿಸುವ ಗುರಿ ಹೊಂದಿರುವ ದಂಪತಿ ತಾವು ಆರಂಭಿಸಿರುವ ವಿಶೇಷ ಅಭಿಯಾನದ ಮೂಲಕ ಈಗಾಗಲೇ 2 ಕೋಟಿ ರೂ.ನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
1 ಕೋಟಿ ರೂ ನೀಡಿದ ಸಚಿನ್ ತೆಂಡೂಲ್ಕರ್
- — Sachin Tendulkar (@sachin_rt) April 29, 2021 " class="align-text-top noRightClick twitterSection" data="
— Sachin Tendulkar (@sachin_rt) April 29, 2021
">— Sachin Tendulkar (@sachin_rt) April 29, 2021
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿರುವ ಕ್ರಿಕೆಟ್ ಲೋಕದ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್, ಮಿಷನ್ ಆಕ್ಸಿಜನ್ಗೆ 1 ಕೋಟಿ ರೂ. ನೀಡಿದ್ದಾರೆ. 250ಕ್ಕೂ ಯುವ ಉದ್ಯಮಿಗಳ ಗುಂಪು ಆಕ್ಸಿಜನ್ ಸಾಂದ್ರಕ ಆಮದು ಮಾಡಿಕೊಳ್ಳಲು ಹಾಗೂ ದೇಶಾದ್ಯಂತ ಇರುವ ಆಸ್ಪತ್ರೆಗಳಿಗೆ ದಾನ ಮಾಡುವ ಉದ್ದೇಶದಿಂದ ಮಿಷನ್ ಆಕ್ಸಿಜನ್ ಪ್ರಾರಂಭಿಸಿದ್ದಾರೆ.
ಸಹಾಯ ಹಸ್ತ ಚಾಚಿದ ರಿಷಭ್ ಪಂತ್
- — Rishabh Pant (@RishabhPant17) May 8, 2021 " class="align-text-top noRightClick twitterSection" data="
— Rishabh Pant (@RishabhPant17) May 8, 2021
">— Rishabh Pant (@RishabhPant17) May 8, 2021
23 ವರ್ಷದ ಉದಯೋನ್ಮುಖ ಕ್ರಿಕೆಟಿಗ ರಿಷಭ್ ಪಂತ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮಾನಿಟರಿ ಡೊನೇಷನ್ ಮೂಲಕ ದೇಶದ ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್ ಸಹಿತ ಬೆಡ್ ಮತ್ತು ಕೋವಿಡ್ ರಿಲೀಫ್ ಕಿಟ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಸಲು ಹೆಮ್ಕುಂಟ್ ಫೌಂಡೇಶನ್ ಜೊತೆಗೆ ಅವರು ಕೈಜೋಡಿಸಿದ್ದಾರೆ.
200 ಆಕ್ಸಿಜನ್ ಕಾನ್ಸೆಂಟ್ರೇಟರ್ ನೀಡಲು ಮುಂದಾದ ಪಾಂಡ್ಯ ಬ್ರದರ್ಸ್
- — hardik pandya (@hardikpandya7) May 2, 2021 " class="align-text-top noRightClick twitterSection" data="
— hardik pandya (@hardikpandya7) May 2, 2021
">— hardik pandya (@hardikpandya7) May 2, 2021
ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬದ ಪರವಾಗಿ 200 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. "ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶ ಅನುಭವಿಸುತ್ತಿರುವ ಕಷ್ಟವನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕಾರ್ಮಿಕರಿಗೆ ಕೃತಜ್ಞತೆಗಳು" ಎಂದು ಅವರು ಹೇಳುತ್ತಾರೆ.
ಕೃನಾಲ್, ನಾನು ಮತ್ತು ನಮ್ಮ ತಾಯಿ ಒಟ್ಟಾರೆ ನಮ್ಮ ಕುಟುಂಬ ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧಿಸಿದ್ದು, 200 ಆಕ್ಸಿಜನ್ ಕಾನ್ಸೆಂಟ್ರೇಟರ್ (ಆಮ್ಲಜನಕ ಸಾಂದ್ರಕ)ಗಳನ್ನು ಅಗತ್ಯವಿರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ದಾನ ಮಾಡಲು ತೀರ್ಮಾನಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಉಚಿತ ಊಟ ನೀಡಲು ಮುಂದಾದ ಪಠಾಣ್ ಬ್ರದರ್ಸ್
ದಕ್ಷಿಣ ದೆಹಲಿಯ ಭಾಗದಲ್ಲಿ ತೊಂದರೆಯಲ್ಲಿರುವ ಜನರಿಗೆ ಉಚಿತವಾಗಿ ಊಟ ನೀಡುವುದಾಗಿ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಹೇಳಿದ್ದಾರೆ.
-
While the nation is in the midst of second wave of COVID-19, it becomes our responsibility to come together and assist the people in need. Taking inspiration from the same, Cricket Academy of Pathans (CAP) is going to provide free meals to COVID-19 affected people in South Delhi. pic.twitter.com/8Binh0HH2h
— Irfan Pathan (@IrfanPathan) May 5, 2021 " class="align-text-top noRightClick twitterSection" data="
">While the nation is in the midst of second wave of COVID-19, it becomes our responsibility to come together and assist the people in need. Taking inspiration from the same, Cricket Academy of Pathans (CAP) is going to provide free meals to COVID-19 affected people in South Delhi. pic.twitter.com/8Binh0HH2h
— Irfan Pathan (@IrfanPathan) May 5, 2021While the nation is in the midst of second wave of COVID-19, it becomes our responsibility to come together and assist the people in need. Taking inspiration from the same, Cricket Academy of Pathans (CAP) is going to provide free meals to COVID-19 affected people in South Delhi. pic.twitter.com/8Binh0HH2h
— Irfan Pathan (@IrfanPathan) May 5, 2021
30 ಆಮ್ಲಜನಕ ಸಾಂದ್ರಕ ನೀಡಿದ ರಹಾನೆ
ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಮಹಾರಾಷ್ಟ್ರ ರಾಜ್ಯದ ಹೆಚ್ಚು ಸೋಂಕಿತರಿರುವ ಪ್ರದೇಶಗಳ ಉಪಯೋಗಕ್ಕಾಗಿ 30 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ.
-
In continuation to my humble attempt to help citizens fight our battle against COVID, I will be funding the purchase of a Haemonetics Apheresis Machine to Divine Charitable Blood Bank, Delhi for their New Plasma Bank at (1/2)
— Shikhar Dhawan (@SDhawan25) May 3, 2021 " class="align-text-top noRightClick twitterSection" data="
">In continuation to my humble attempt to help citizens fight our battle against COVID, I will be funding the purchase of a Haemonetics Apheresis Machine to Divine Charitable Blood Bank, Delhi for their New Plasma Bank at (1/2)
— Shikhar Dhawan (@SDhawan25) May 3, 2021In continuation to my humble attempt to help citizens fight our battle against COVID, I will be funding the purchase of a Haemonetics Apheresis Machine to Divine Charitable Blood Bank, Delhi for their New Plasma Bank at (1/2)
— Shikhar Dhawan (@SDhawan25) May 3, 2021
20 ಲಕ್ಷ ರೂ ದೇಣಿಗೆ ನೀಡಿದ ಶಿಖರ್ ಧವನ್
ಕಳೆದ ಅನೇಕ ವರ್ಷಗಳಿಂದ ನಾನು ನಿಮ್ಮ ಪ್ರೀತಿ, ಬೆಂಬಲ ಪಡೆದುಕೊಂಡಿದ್ದೇನೆ. ಅದಕ್ಕಾಗಿ ನಾನು ಋಣಿಯಾಗಿದ್ದೇನೆ. ಇದೀಗ ನನ್ನ ದೇಶಕ್ಕಾಗಿ ಏನಾದರೂ ನೀಡುವ ಸಮಯ ಬಂದಿದೆ. ಕೋವಿಡ್ ಹೋರಾಟಕ್ಕಾಗಿ 20 ಲಕ್ಷ ರೂ. ಹಾಗೂ ಐಪಿಎಲ್ನಲ್ಲಿ ವೈಯಕ್ತಿಕವಾಗಿ ಗೆಲ್ಲುವ ಪ್ರಶಸ್ತಿಯ ಹಣವನ್ನು ಮಿಷನ್ ಆಕ್ಸಿಜನ್ಗಾಗಿ ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
200 ಆಮ್ಲಜನಕ ಸಾಂದ್ರಕ ನೀಡಿದ ಗೌತಮ್ ಗಂಭೀರ್
ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ದೆಹಲಿ ರಾಜ್ಯಕ್ಕೆ 200 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ. ಇದಕ್ಕೂ ಮುನ್ನ ಗಂಭೀರ್ ತಮ್ಮ ಕ್ಷೇತ್ರದ ಜನತೆಗೆ ಫ್ಯಾಬಿಫ್ಲೂ ಟ್ಯಾಬ್ಲೆಟ್‌ಗಳನ್ನು ಉಚಿತವಾಗಿ ನೀಡಿದ್ದರು.