ETV Bharat / sports

Shubman Gill: ಸತತ ವೈಫಲ್ಯದ ನಂತರ ಫಾರ್ಮ್​ಗೆ ಮರಳಿದ ಒಳಗುಟ್ಟೇನು? ಶುಭ್‌ಮನ್​ ಗಿಲ್ ಹೀಗಂದರು..​​ - ಅರ್ಷದೀಪ್​ ಸಿಂಗ್​

Shubman Gill: ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಟಿ20 ಪಂದ್ಯಗಳಿಂದ ಕೇವಲ 16 ರನ್​ ಗಳಿಸಿದ್ದ ಗಿಲ್,​ ನಾಲ್ಕನೇ ಪಂದ್ಯದಲ್ಲಿ 77 ರನ್​ ಗಳಿಸಿ ಫಾರ್ಮ್​ಗೆ ಮರಳಿದ್ದರು.

Shubman Gill
ಶುಭಮನ್​ ಗಿಲ್​​
author img

By

Published : Aug 13, 2023, 6:12 PM IST

ಫ್ಲೋರಿಡಾ (ಅಮೆರಿಕ): ಶುಭ್‌ಮನ್​ ಗಿಲ್ ಅವರು​ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಹೆಚ್ಚು ಶೈನ್​ ಆಗಿರಲಿಲ್ಲ. ಟೆಸ್ಟ್​ ಸರಣಿಯ ಮೂರೂ ಇನ್ನಿಂಗ್ಸ್​ನಲ್ಲಿ ಮೂರನೇ ಸ್ಥಾನದಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿರಲಿಲ್ಲ. ಏಕದಿನ ಸರಣಿಯಲ್ಲೂ ಕೊನೆಯ ಪಂದ್ಯದಲ್ಲಿ 85 ರನ್‌ಗಳಿಸಿದ್ದು ಬಿಟ್ಟರೆ, ಮಿಕ್ಕೆರಡೂ ಪಂದ್ಯಗಳಲ್ಲಿ ವೈಫಲ್ಯ ಕಂಡರು. ಟಿ20ಯಲ್ಲೂ ಮೂರು ಪಂದ್ಯದಲ್ಲಿ ಎರಡಂಕಿ ತಲುಪಲಿಲ್ಲ. ಆದರೆ ನಾಲ್ಕನೇ ಪಂದ್ಯದಲ್ಲಿ 47 ಎಸೆತಗಳಲ್ಲಿ 77 ರನ್​ ಗಳಿಸಿ ಕಮ್​ಬ್ಯಾಕ್​ ಮಾಡಿದ್ದಾರೆ.

ದೊಡ್ಡ ಮೊತ್ತ ಕಲೆ ಹಾಕಿದ್ದರ ಬಗ್ಗೆ ಗಿಲ್​ ಬಿಸಿಸಿಐ ಟಿವಿಯಲ್ಲಿ ಮಾತನಾಡಿದರು. ಮೊದಲ ಮೂರು ಟಿ20ಗಳಲ್ಲಿ 3, 7 ಮತ್ತು 6 ರಲ್ಲಿ ಔಟಾಗಿದ್ದು, ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದೆ. ಮೊದಲ ಪಂದ್ಯಗಳ ತಪ್ಪು ತಿದ್ದಿಕೊಂಡಿದ್ದೇನೆ ಎಂದು ಅರ್ಷ್‌ದೀಪ್​ ಸಿಂಗ್​ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಪಂದ್ಯದ ನಂತರ ಅರ್ಷ್‌ದೀಪ್​ ಸಿಂಗ್​ ಮತ್ತು ಶುಭಮನ್​ ಗಿಲ್​ 3 ನಿಮಿಷಗಳ ಚಿಟ್​ಚಾಟ್​ ಮಾಡಿದ್ದಾರೆ. ಇಬ್ಬರೂ ತಮ್ಮ ಆಟದ ಬಗ್ಗೆ ಮಾತಾಡಿಕೊಂಡರು. ಅರ್ಷ್‌ದೀಪ್​ ಸಿಂಗ್​ ಕುಟುಂಬದವರು ನಿನ್ನೆ ಪಂದ್ಯ ವೀಕ್ಷಣೆಗೆ ಬಂದಿದ್ದರು. ಹೀಗಾಗಿ ಕುಟುಂಬದವರ ಮುಂದೆ ಉತ್ತಮ ಪ್ರದರ್ಶನ ನೀಡಲೇಬೇಕು ಎಂಬ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ. "ಕುಟುಂಬದವರು ಭೇಟಿ ನೀಡಿ ಅಚ್ಚರಿ ಉಂಟುಮಾಡಿದರು. ಮೊದಲಿಗೆ ಮಾಡಿದ ಬೌನ್ಸ್​ ಕೆಲಸ ಮಾಡಿತು. ತಂಡಕ್ಕೆ ಮೇಯರ್ಸ್​ ಅವರ ಮೊದಲ ವಿಕೆಟ್​ ಸಿಕ್ಕಿತು. ನಂತರ ಅದೇ ಮೂಡ್​​ನಲ್ಲಿ ಮಿಕ್ಕೆರಡು ವಿಕೆಟ್​ ಕಬಳಿಸಿದೆ" ಎಂದರು.

ಸಿಂಗ್​ ಇದೇ ವೇಳೆ ಗಿಲ್​ ಬ್ಯಾಟಿಂಗ್​ ಬಗ್ಗೆ ಕೇಳಿದಾಗ, "ಕಳೆದ ಮೂರು ಪಂದ್ಯಗಳಲ್ಲಿ 10 ರನ್​ ಮಾಡಲೂ ಆಗಿರಲಿಲ್ಲ. ಈ ಪಂದ್ಯಕ್ಕೆ ಪಿಚ್​ ಉತ್ತಮವಾಗಿ ಕಾಣುತ್ತಿತ್ತು. ಇದರ ಲಾಭ ಪಡೆದುಕೊಳ್ಳಲು ಚಿಂತಿಸಿದೆ. ಅದರಂತೆ ಉತ್ತಮ ಆರಂಭ ಸಿಕ್ಕಿತು. ಅದೇ ರೀತಿ ಮುಂದುವರೆದು ಪಂದ್ಯವನ್ನು ಮುಗಿಸಲು ಚಿಂತಿಸಿದೆ. ಪಂದ್ಯವನ್ನು ಯಶಸ್ವಿಯೊಂದಿಗೆ ತೆಗೆದುಕೊಂಡು ಹೋದೆ" ಎಂದು ವಿವರಿಸಿದರು.

ಸತತ ವೈಫಲ್ಯ ಕಂಡಾಗ ಅದರಿಂದ ಕಮ್​ಬ್ಯಾಕಾಗುವ ತಂತ್ರಗಳೇನು ಎಂದು ಸಿಂಗ್​ ಕೇಳಿದ ಪ್ರಶ್ನೆಗೆ, "ನಾವು ಈ ಮೊದಲು ಹೇಗೆ ಆಡುತ್ತಿದ್ದೆವು ಮತ್ತು ನಮ್ಮ ಸದ್ಯದ ಫಾರ್ಮ್​ ಬಗ್ಗೆ ಅರಿವಿರಬೇಕು. ಕಳೆದ ಪಂದ್ಯಗಳಲ್ಲಿ ಏನು ತಪ್ಪುಗಳಾಗಿವೆ ಎಂಬುದನ್ನೂ ಅರ್ಥೈಸಿಕೊಳ್ಳಬೇಕು. ಆದರೆ ಮೂರು ಪಂದ್ಯದಲ್ಲಿ ನಾನು ತಪ್ಪು ಮಾಡುತ್ತಿರಲಿಲ್ಲ. ಆದರೆ ದೊಡ್ಡ ಇನ್ನಿಂಗ್ಸ್​ ಕಟ್ಟಲು ಸಾಧ್ಯವಾಗಲಿಲ್ಲ. ಸತತ ವೈಫಲ್ಯ ಎಂದುರಾದಾಗ ನಾವು ಉತ್ತಮ ಪ್ರದರ್ಶನ ನೀಡಿದ ಪಂದ್ಯದ ಆಟದ ಶೈಲಿಯನ್ನು ಅಳವಡಿಸಿಕೊಂಡರೆ ರನ್​ ಗಳಿಸಬಹುದು" ಎಂದು ಸಲಹೆ ಕೊಟ್ಟರು. ಕೊನೆಯ ಪಂದ್ಯದಲ್ಲೂ ಉತ್ತಮ ಫಾರ್ಮ್​ ಮುಂದುವರೆಸಿ ಸರಣಿ ಗೆಲುವಿನೊಂದಿಗೆ ತವರಿಗೆ ಮರಳುತ್ತೇವೆ ಎಂದು ಆಟಗಾರರು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Cricket Records: 'RR' ಜೋಡಿಯ​ ದಾಖಲೆ ಸರಿಗಟ್ಟುವಲ್ಲಿ ಗಿಲ್ 'ಯಶಸ್ವಿ'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.