ದುಬೈ: ಮುಂದಿನ ವರ್ಷದ ಮೊದಲ ತಿಂಗಳಿನಲ್ಲಿ ಯುವ ಪ್ರತಿಭೆಗಳು ವಿಶ್ವಕಪ್ ಹಣಾಹಣಿಯಲ್ಲಿ ಸ್ಪರ್ಧಿಸಲಿವೆ. ಐಸಿಸಿ ಇಂದು 2024ರ 19 ವರ್ಷದೊಳಗಿನವರ ಪುರುಷರ ಕ್ರಿಕೆಟ್ ವಿಶ್ವಕಪ್ನ ಅವಧಿಯ ಬಗ್ಗೆ ಮಾಹಿತಿ ನೀಡಿದೆ. ಪಂದ್ಯಾವಳಿಯು ಶ್ರೀಲಂಕಾದ ಮೈದಾನಗಳಲ್ಲಿ ಜನವರಿ 13ರಿಂದ ಫೆಬ್ರವರಿ 4 ರವರೆಗೆ ನಡೆಯಲಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಜಿಂಬಾಬ್ವೆ ಜನವರಿ 13ರಂದು ಮುಖಾಮುಖಿ ಆಗಲಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ಜೊತೆಗೆ ಆಡಲಿದೆ. ಜನವರಿ 14ರಂದು ಕೊಲಂಬೊದ ಆರ್ ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಭಾರತ 2022ರಲ್ಲಿ ಪ್ರಶಸ್ತಿ ವಿಜೇತ ತಂಡವಾಗಿದೆ. 2020ರಲ್ಲಿ ಬಾಂಗ್ಲಾದೇಶ ಗೆದ್ದಿತ್ತು. ಹೀಗಾಗಿ ಭಾರತ ಬಾಂಗ್ಲಾ ನಡುವಿನ ಪಂದ್ಯ ಹೆಚ್ಚು ಕುತೂಹಲಕಾರಿಯಾಗಿದೆ.
-
Mark your calendars 🗓️
— ICC (@ICC) September 22, 2023 " class="align-text-top noRightClick twitterSection" data="
The schedule for the 2024 ICC U19 Men’s Cricket World Cup is out!#U19CWC | Details 👇https://t.co/nuy6GM0Uwc
">Mark your calendars 🗓️
— ICC (@ICC) September 22, 2023
The schedule for the 2024 ICC U19 Men’s Cricket World Cup is out!#U19CWC | Details 👇https://t.co/nuy6GM0UwcMark your calendars 🗓️
— ICC (@ICC) September 22, 2023
The schedule for the 2024 ICC U19 Men’s Cricket World Cup is out!#U19CWC | Details 👇https://t.co/nuy6GM0Uwc
ಆವೃತ್ತಿಯ ಸ್ವರೂಪ ಬದಲಾವಣೆ: ಈ ಬಾರಿಯ ವಿಶ್ವಕಪ್ನಲ್ಲಿ 16 ತಂಡಗಳು ಭಾಗವಗಹಿಸುತ್ತಿವೆ. ಹೀಗಾಗಿ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪು ನಾಲ್ಕು ತಂಡಗಳನ್ನು ಒಳಗೊಂಡಿರುತ್ತದೆ. ಆದರೆ ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಈಗ ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯುತ್ತವೆ. ಗುಂಪು ಹಂತದ ಪಂದ್ಯಗಳು ಜನವರಿ 13ರಿಂದ 21ರವರೆಗೆ ನಡೆಯಲಿವೆ.
ಎ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್ಎ ಇದೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್, ಸಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ, ಡಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳಿವೆ.
ಐದು ಬಾರಿ 19 ವರ್ಷದೊಳಗಿನವರ ಪುರುಷರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತವು ಸ್ಪರ್ಧೆಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಆಸ್ಟ್ರೇಲಿಯಾ ಮೂರು ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಎರಡು ಬಾರಿ ಜಯಭೇರಿ ಬಾರಿಸಿದೆ. ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಪಿ. ಸಾರಾ ಓವಲ್, ಕೊಲಂಬೊ ಕ್ರಿಕೆಟ್ ಕ್ಲಬ್, ನಾನ್‌ಡಿಸ್ಕ್ರಿಪ್ಟ್ ಕ್ರಿಕೆಟ್ ಕ್ಲಬ್, ಸಿಂಘಲೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಆರ್ ಪ್ರೇಮದಾಸ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದೆ. ಜನವರಿ 30 ಮತ್ತು ಫೆಬ್ರವರಿ 1ರಂದು ಸೆಮಿಫೈನಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಫೆಬ್ರವರಿ 4ರಂದು ಫೈನಲ್ ಪಂದ್ಯ ನಡೆಯಲಿದೆ. 2000ರಲ್ಲಿ ಶ್ರೀಲಂಕಾ 19 ವರ್ಷದೊಳಗಿನವರ ವಿಶ್ವಕಪ್ನ್ನು ಆಯೋಜಿಸಿತ್ತು. ಈಗ 23 ವರ್ಷದ ನಂತರ ಮತ್ತೆ ಟೂರ್ನಿಯನ್ನು ಆಯೋಜಿಸುತ್ತಿದೆ.
ಇದನ್ನೂ ಓದಿ: ICC ODI World Cup 2023: ವಿಶ್ವಕಪ್ ಪಾಕ್ ಟೀಮ್ನಿಂದ ನಸೀಮ್ ಶಾ ಔಟ್, ಹಸನ್ ಅಲಿ ಇನ್