ETV Bharat / sports

ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ಟೀಂ ಇಂಡಿಯಾದ ಬ್ಯಾಟಿಂಗ್​ ಶೈಲಿ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ - experts slam indias timid power play

ಟಿ20 ವಿಶ್ವಕಪ್‌ನ ಎರಡನೇ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋಲಿನ ಕುರಿತಾಗಿ ಟೀಂ ಇಂಡಿಯಾದ ಬ್ಯಾಟಿಂಗ್​ ಶೈಲಿ ಬಗ್ಗೆ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ.

experts-slam-indias-timid-power-play-approach-after-embarrassing-semifinal-defeat
ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ಟೀಂ ಇಂಡಿಯಾದ ಬ್ಯಾಟಿಂಗ್​ ಶೈಲಿ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ
author img

By

Published : Nov 10, 2022, 10:06 PM IST

ಅಡಿಲೇಡ್ (ಆಸ್ಟ್ರೇಲಿಯಾ): ಇಂಗ್ಲೆಂಡ್​ ವಿರುದ್ಧದ ಎರಡನೇ ಸೆಮಿ ಫೈನಲ್​ನಲ್ಲಿ ಇಂಡಿಯಾ ಟೀಂ ಸೋತು ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಭಾರತದ ಆಟಗಾರರ 'ಭೀತಿ'ಯ ಬ್ಯಾಟಿಂಗ್ ವಿಧಾನವನ್ನು ಮಾಜಿ ಕ್ರಿಕೆಟಿಗರಾದ ಶೇನ್ ವ್ಯಾಟ್ಸನ್ ಮತ್ತು ನಾಸರ್ ಹುಸೇನ್ ಟೀಕಿಸಿದ್ದಾರೆ.

ಅಡಿಲೇಡ್​ನಲ್ಲಿ ನಡೆದ ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅವರ ಭರ್ಜರಿ ಅರ್ಧ ಶತಕ ನೆರವಿನಿಂದ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿದೆ.

ಭಾರತವು ಪವರ್‌ಪ್ಲೇನಲ್ಲಿ ಕೇವಲ 38 ರನ್‌ಗಳನ್ನಷ್ಟೇ ಗಳಿಸಿ ಹಳೆ ಶೈಲಿಯಲ್ಲಿ ಬ್ಯಾಟಿಂಗ್​ ಮಾಡಿತು. ಆದರೆ, ಇಂಗ್ಲೆಂಡ್‌ ತಂಡ ಈ ಶೈಲಿಗೆ ವಿರುದ್ಧವಾಗಿ ಟಿ20 ಮಾದರಿಯಲ್ಲೇ ಆರು ಓವರ್‌ಗಳಲ್ಲಿ 63 ರನ್‌ಗಳನ್ನು ಸಿಡಿಸಿತ್ತು. ಹೀಗಾಗಿ ಟೀಂ ಇಂಡಿಯಾ ಬ್ಯಾಟಿಂಗ್​ ಶೈಲಿ ಬಗ್ಗೆಯೇ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ.

ಇದನ್ನೂ ಓದಿ: ಟಿ20 ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ವಿರಾಟ್.. 4 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಕಿಂಗ್​ ಕೊಹ್ಲಿ

ಭಾರತದ ಬ್ಯಾಟಿಂಗ್ ತುಂಬಾ ಭೀತಿಯಿಂದ ಕೂಡಿತ್ತು. ದುರದೃಷ್ಟವಶಾತ್, ರೋಹಿತ್ ಮತ್ತು ಕೆಎಲ್ ಮೊದಲ ಆರು ಓವರ್‌ಗಳಲ್ಲಿ ತಮ್ಮ ಆಟವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವರಿಗೆ ಫೈರ್‌ಪವರ್ ಸಿಕ್ಕಿತ್ತು. ಆದರೆ, ಅವರು ಟಿ 20 ಕ್ರಿಕೆಟ್‌ ಮಾದರಿಯ ಆಟವನ್ನು ತೆಗೆದುಕೊಳ್ಳಬೇಕಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ವ್ಯಾಟ್ಸನ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯರಿಂದ ಪಂದ್ಯವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೆ, ಭಾರತವು 6-8 ಓವರ್‌ಗಳ ಮೊದಲೇ ಈ ಬ್ಯಾಟಿಂಗ್​ ಮಾಡಬೇಕಿತ್ತು ಎಂದು ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸರ್ ಹುಸೇನ್, ತಂಡವನ್ನು ಗೆಲ್ಲಿಸಿದ ಬಟ್ಲರ್ ಆಟ ಶೈಲಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಭಾರತದ ಮಾಜಿ ಆಯ್ಕೆಗಾರ ಸರನ್‌ದೀಪ್ ಸಿಂಗ್ ಕೂಡ ಇಂಡಿಯಾದ ಬ್ಯಾಟಿಂಗ್​ ವೈಫಲ್ಯವನ್ನು ಟೀಕಿಸಿದ್ದಾರೆ. ಕೆಎಲ್​ ರಾಹುಲ್ ಮತ್ತು ರೋಹಿತ್ ದೊಡ್ಡ ಪಂದ್ಯಗಳಲ್ಲಿ ಫಾರ್ಮ್ ಅನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಮೇಲೆ ಒತ್ತಡ ಹೇರಿದರು. ಇಡೀ ಟೂರ್ನಿಯಲ್ಲಿ ವಿಶೇಷವಾಗಿ ಇಂದು ಯುಜ್ವೇಂದ್ರ ಚಹಾಲ್ ಅವರನ್ನು ಆಡಿಸದಿರುವುದು ತಂಡದ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: T20 World Cup: ಟೀಂ ಇಂಡಿಯಾದ ಫೈನಲ್​ ಕನಸು ಭಗ್ನ... ಇಂಗ್ಲೆಂಡ್​ಗೆ 10 ವಿಕೆಟ್​ಗಳ ಭರ್ಜರಿ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.