ಲಂಡನ್ : ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬೆನ್ ಫೋಕ್ಸ್ ಡ್ರೆಸ್ಸಿಂಗ್ ರೂಮಿನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದು, ಮುಂಬರುವ ನ್ಯೂಜಿಲ್ಯಾಂಡ್ ಸರಣಿ ಮತ್ತು ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ.
ಮಿಡಲ್ಎಸೆಕ್ಸ್ ವಿರುದ್ಧದ ಕೌಂಟಿ ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗ ಜಾರಿ ಬಿದ್ದಿದ್ದು, ಇದರಿಂದ ಗಂಭೀರ ಮಂಡಿರಜ್ಜು ಗಾಯಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಚೇತರಿಸಿಕೊಳ್ಳಲು ಅವರಿಗೆ 3 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದು ಬಂದಿದೆ.
-
Get well soon, Foakesy 🙏
— England Cricket (@englandcricket) May 26, 2021 " class="align-text-top noRightClick twitterSection" data="
Welcome Haseeb and Bilbo 👏
">Get well soon, Foakesy 🙏
— England Cricket (@englandcricket) May 26, 2021
Welcome Haseeb and Bilbo 👏Get well soon, Foakesy 🙏
— England Cricket (@englandcricket) May 26, 2021
Welcome Haseeb and Bilbo 👏
ಜೂನ್ 2 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿ ಅವರ ಸ್ಥಾನಕ್ಕೆ ಟೆಸ್ಟ್ ಕ್ರಿಕೆಟ್ ಆಡದ ಸ್ಯಾಮ್ ಬಿಲ್ಲಿಂಗ್ಸ್ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಹಸೀಮ್ ಹಮೀದ್ ಕೂಡ ತಂಡಕ್ಕೆ ಸೇರಿದ್ದಾರೆ.
ಐಪಿಎಲ್ನಲ್ಲಿದ್ದ ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್, ಮೊಯೀನ್ ಅಲಿ, ಸ್ಯಾಮ್ ಕರ್ರನ್ ಮತ್ತು ಕ್ರಿಸ್ ವೋಕ್ಸ್ಗೆ ವಿಶ್ರಾಂತಿ ನೀಡಿದ್ದರಿಂದ ಬೆನ್ ಕಿವೀಸ್ ವಿರುದ್ಧ ಪ್ರಮುಖ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ದುರಾದೃಷ್ಟವಶಾತ್ ಗಾಯದ ಕಾರಣ ತವರಿನ 2 ಪ್ರಮುಖ ಸರಣಿಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಇದನ್ನು ಓದಿ: ನಿರ್ಭೀತಿಯಿಂದ ಆಟವಾಡಲು ಕೊಹ್ಲಿ ನಮ್ಮನ್ನು ಸದಾ ಪ್ರೋತ್ಸಾಹಿಸುತ್ತಾರೆ : ಶುಬ್ಮನ್ ಗಿಲ್