ಲಂಡನ್: ಕೋವಿಡ್ 19 ಸಬಂಧಿತ ಪ್ರಯಾಣ ನಿರ್ಬಂಧಗಳಿದ್ದರೂ ಸಹಾ ಮುಂಬರುವ ಆ್ಯಶಸ್ ಸರಣಿ ಸರಣಿ ಯೋಜಿಸಿದಂತೆ ನಡೆಯಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಕೋವಿಡ್ 19 ಹರಡುವಿಕೆಯನ್ನು ತಡೆಯಲು ಪ್ರಯಾಣ ನಿರ್ಬಂಧ ಮತ್ತು ಕಠಿಣ ಹಾಗೂ ಸುದೀರ್ಘವಾದ ಕ್ವಾರಂಟೈನ್ ನಿಯಮವನ್ನು ವಿಧಿಸಿದೆ. ಹಾಗಾಗಿ ಬಯೋಬಬಲ್ನಲ್ಲಿ ಕುಟುಂಬದ ಜೊತೆಗೆ ಸೇರಲು ಅವಕಾಶ ನೀಡುವ ಸಾಧ್ಯತೆ ಕಡಿಮೆಯಿದೆ ಎಂದು ಇಂಗ್ಲೆಂಡ್ ಆಟಗಾರರು ಚಿಂತೆಗೀಡಾಗಿದ್ದಾರೆ.
" ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಸರ್ಕಾರ ಹಂತದಲ್ಲಿ ಮಾತುಕತೆ ನಡೆಯುತ್ತಿದೆ. ಆಟಗಾರರು ಮತ್ತು ಇಸಿಬಿಯ ಆಲೋಚನೆಯನ್ನು ಖಚಿತಪಡಿಸಿಕೊಳ್ಳಲು ನಮ್ಮದೇ ರಾಜತಾಂತ್ರಿಕ ವ್ಯವಸ್ಥೆಗಳನ್ನು ಬಳಸುತ್ತೇವೆ " ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಸಿಇಒ ಗುರುವಾರ ತಿಳಿಸಿದ್ದಾರೆ.
" ನಮ್ಮ ಆಟಗಾರರು ಅಸಮಂಜಸವಾಗಿ ಏನನ್ನೂ ಕೇಳುತ್ತಿಲ್ಲ , ಸುದೀರ್ಘ ಪ್ರವಾಸದ ವೇಳೆ ಕುಟುಂಬ ಜೊತೆಗಿರಲು ಬಯಸುವುದು ಒಳ್ಳೆಯ ಆಲೋಚನೆ. ಹಾಗಾಗಿ ಆಸ್ಟ್ರೇಲಿಯಾ ಸರ್ಕಾರಕ್ಕೆ ಕೋವಿಡ್ ನಿಯಮಗಳಲ್ಲಿ ಸ್ವಲ್ಪ ಸೌಮ್ಯತೆ ನೀಡುವಂತೆ ಕೇಳುತ್ತಿರುವ ಅತ್ಯಂತ ಸಮಂಜಸವಾದ ಮನವಿಯಾಗಿದೆ" ಎಂದು ಅವರು ತಿಳಿಸಿದ್ದಾರೆ.
ನಾವು ಈ ಕುರಿತು ಮುಂದಿನ ಕೆಲವು ವಾರಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಜೊತೆಗೆ ಚರ್ಚೆ ನಡೆಸಲಿದ್ದೇವೆ. ಎಲ್ಲ ಯೋಜಿಸದಂತೆ ನಡೆಸಲು ಮಾತುಕತೆಯಿಂದ ಸಫಲವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹ್ಯಾರಿಸನ್ ತಿಳಿಸಿದ್ದಾರೆ.