ETV Bharat / sports

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸೋತ ಭಾರತ... T20 ಸರಣಿ ಗೆದ್ದ ಇಂಗ್ಲೆಂಡ್​ ಮಹಿಳಾ ಪಡೆ

author img

By

Published : Jul 15, 2021, 3:19 AM IST

ಏಕದಿನ ಟೂರ್ನಿಯಲ್ಲಿ ಸೋಲು ಕಂಡಿದ್ದ ಭಾರತ ಮಹಿಳಾ ತಂಡ ಇದೀಗ ಟಿ-20 ಸರಣಿಯಲ್ಲೂ 2-1 ಅಂತರದಲ್ಲಿ ಸೋಲು ಕಂಡು, ಸರಣಿ ಕೈಚೆಲ್ಲಿದೆ.

England Women won
England Women won

ಇಂಗ್ಲೆಂಡ್​: ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಹರ್ಮನ್​​ ಪ್ರೀತ್​ ಕೌರ್​ ಪಡೆ 8 ವಿಕೆಟ್​ಗಳ ಸೋಲು ಕಂಡಿದ್ದು, ಈ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಸರಣಿ ಕೈಚೆಲ್ಲಿದೆ.

Danielle Wyatt
ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಡೇನಿಯಲ್ ವ್ಯಾಟ್

ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿ ಜಯ ಸಾಧಿಸಿತ್ತು. ಹೀಗಾಗಿ ಕೊನೆಯ ಪಂದ್ಯ ಎರಡು ತಂಡಗಳಿಗೆ ಮಾಡು ಇಲ್ಲವೆ ಮಡಿ ಆಗಿತ್ತು. ಈ ಪಂದ್ಯದಲ್ಲಿ ಆಂಗ್ಲರ ಪಡೆ ಸುಲಭ ಗೆಲುವು ದಾಖಲು ಮಾಡಿ ಸರಣಿ ಕೈವಶ ಮಾಡಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಲು ಮುಂದಾದ ಭಾರತ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಸ್ಫೋಟಕ ಬ್ಯಾಟ್ಸಮನ್​​ ಶೆಫಾಲಿ ವರ್ಮಾ(0)ರನ್​ಗಳಿಕೆ ಮಾಡುವ ಮೊದಲೇ ಪೆವಿಲಿಯನ್​ ಸೇರಿಕೊಂಡರು. ಇದಾದ ಬಳಿಕ ಬಂದ ಡಿಯೊಲ್​ ಕೂಡ(6) ನಿರಾಸೆ ಮೂಡಿಸಿದರು.

England Women team
ಸರಣಿ ಗೆದ್ದ ಇಂಗ್ಲೆಂಡ್​ ಮಹಿಳಾ ತಂಡದ ಸಂಭ್ರಮ

13ರನ್​ಗಳಿಸುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಹಾಗೂ ಕ್ಯಾಪ್ಟನ್​ ಹರ್ಮನ್​ಪ್ರೀತ್​ ಕೌರ್​ ಉತ್ತಮ ಜೊತೆಯಾಟ ನೀಡಿದರು. ಆದರೆ 36ರನ್​ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್​ ಕೌರ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸ್ನೇಹ ರಾಣಾ ಕೂಡ(4) ವಿಕೆಟ್ ಕಳೆದುಕೊಂಡರು. ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸ್ಮೃತಿ ಮಂದಾನಾ(70)ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರೆ, ವಿಕೆಟ್​ ಕೀಪರ್​​​ ರಿಚಾ ಘೋಸ್​(20)ರನ್​ಗಳಿಕೆ ಮಾಡಿದರು. ಕೊನೆಯದಾಗಿ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 153ರನ್​ಗಳಿಕೆ ಮಾಡಿತು.

ಇದನ್ನೂ ಓದಿರಿ 'BJP ಅಧಿಕಾರಕ್ಕೆ ತರುವುದೇ ಗುರಿ': ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಅಣ್ಣಾಮಲೈ ಪ್ರತಿಜ್ಞೆ

154ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡ ಆರಂಭದಲ್ಲೇ ಟಮ್ಮಿ ಬ್ಯೂಮಾಂಟ್​(11) ವಿಕೆಟ್ ಕಳೆದುಕೊಂಡಿತು. ಆದರೆ ಈ ವೇಳೆ ಒಂದಾದ ಡೇನಿಯಲ್ ವ್ಯಾಟ್ ಅಜೇಯ(89), ನಟಾಲಿಯಾ ಸೈವರ್(42) ಮುರಿಯದ ಜೊತೆಯಾಟವಾಡಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು. ಕೊನೆಯದಾಗಿ ತಂಡ 18.4 ಓವರ್​ಗಳಲ್ಲಿ 2ವಿಕೆಟ್​ನಷ್ಟಕ್ಕೆ 154ರನ್​ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು. ಭಾರತದ ಪರ ದೀಪ್ತಿ ಶರ್ಮಾ ಹಾಗೂ ಸ್ನೇಹಾ ರಾಣಾ ಮಾತ್ರ ತಲಾ 1ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆ, ಉಳಿದೆಲ್ಲ ಬೌಲರ್ಸ್​ ದುಬಾರಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.