ಬ್ರಿಸ್ಟೋಲ್(ಇಂಗ್ಲೆಂಡ್): ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳ ಮಧ್ಯೆ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಗಳಿಕೆ ಮಾಡಿರುವ 396 ರನ್ಗಳಿಗೆ ಪ್ರತ್ಯುತ್ತರವಾಗಿ ಭಾರತ 231ರನ್ ಮಾತ್ರ ಗಳಿಸಿದೆ. ಹೀಗಾಗಿ ಫಾಲೋಆನ್ಗೊಳಗಾಗಿರುವ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದು, ಸ್ಮೃತಿ ಮಂಧಾನ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೊಳಗಾಗಿದೆ.
ಇಂಗ್ಲೆಂಡ್ನ ಬ್ರಿಸ್ಟೋಲ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಮಹಿಳಾ ತಂಡ 9ವಿಕೆಟ್ನಷ್ಟಕ್ಕೆ 396ರನ್ಗಳಿಕೆ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಮಿಥಾಲಿ ರಾಜ್ ನೇತೃತ್ವದ ಟೀ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ(78) ಹಾಗೂ ಶೆಫಾಲಿ ವರ್ಮಾ(96)ರನ್ಗಳಿಕೆ ಮಾಡಿದರು. ಆದರೆ, ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬೇರೆ ಯಾವುದೇ ಪ್ಲೇಯರ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
-
ALL OUT ☝️
— ICC (@ICC) June 18, 2021 " class="align-text-top noRightClick twitterSection" data="
India are bowled out for 231 as England enforce the follow-on. #ENGvIND | https://t.co/8ScEaEZNrV pic.twitter.com/wcJpt8OvIe
">ALL OUT ☝️
— ICC (@ICC) June 18, 2021
India are bowled out for 231 as England enforce the follow-on. #ENGvIND | https://t.co/8ScEaEZNrV pic.twitter.com/wcJpt8OvIeALL OUT ☝️
— ICC (@ICC) June 18, 2021
India are bowled out for 231 as England enforce the follow-on. #ENGvIND | https://t.co/8ScEaEZNrV pic.twitter.com/wcJpt8OvIe
ಪೂನಂ ರಾವತ್(2), ಶಿಕಾ ಪಾಂಡೆ(0), ಮಿಥಾಲಿ(2), ಹರ್ಮನ್ಪ್ರೀತ್ ಕೌರ್(4),ದೀಪ್ತಿ ಶರ್ಮಾ ಅಜೇಯ(29), ಬಾಟಿಯಾ(0),ಸ್ನೇಹಾ ರಾಣಾ(2), ವಸ್ತ್ರಕರ್(12) ಹಾಗೂ ಗೋಸ್ವಾಮಿ 1 ರನ್ಗಳಿಕೆ ಮಾಡಿದರು. ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎಕ್ಲೆಸ್ಟೋನ್ 4 ವಿಕೆಟ್, ನೈಟ್ 2ವಿಕೆಟ್ ಪಡೆದುಕೊಂಡರೆ ಬ್ರಟ್,ಕ್ರಾಸ್, ಸ್ರೂಬ್ಸೊಲೆ ತಲಾ 1ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿರಿ: WTC ಫೈನಲ್: ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಹೇಳಿದ್ರು ಈ ಮಾತು!
165ರನ್ಗಳ ಫಾಲೋ ಆನ್ನೊಂದಿಗೆ ಭಾರತ ಮಹಿಳಾ ತಂಡ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಆರಂಭದಲ್ಲೇ ಸ್ಮೃತಿ ಮಂದಾನಾ (8)ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಸದ್ಯ ತಂಡ 136ರನ್ಗಳ ಹಿನ್ನಡೆಯಲ್ಲಿದ್ದು, ಮೈದಾನದಲ್ಲಿ ಶೆಫಾಲಿ ವರ್ಮಾ(20ರನ್) ಇದ್ದಾರೆ. ಎರಡು ದಿನಗಳ ಆಟ ಬಾಕಿ ಇದ್ದು, ಪಂದ್ಯ ಡ್ರಾ ಮಾಡಿಕೊಳ್ಳಬೇಕಾದರೆ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿದೆ.