ಓವಲ್(ಲಂಡನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 157ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ ಇದೀಗ 2-1 ಅಂತರದ ಮುನ್ನಡೆ ಗಳಿಸಿದೆ.
-
India go 2-1 up in the Test series 🎉#WTC23 | #ENGvIND | https://t.co/zRhnFj1Srx pic.twitter.com/IvwZE1THXB
— ICC (@ICC) September 6, 2021 " class="align-text-top noRightClick twitterSection" data="
">India go 2-1 up in the Test series 🎉#WTC23 | #ENGvIND | https://t.co/zRhnFj1Srx pic.twitter.com/IvwZE1THXB
— ICC (@ICC) September 6, 2021India go 2-1 up in the Test series 🎉#WTC23 | #ENGvIND | https://t.co/zRhnFj1Srx pic.twitter.com/IvwZE1THXB
— ICC (@ICC) September 6, 2021
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 191 ರನ್ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಪಂತ್ ಹಾಗೂ ಠಾಕೂರ್ ಅವರ ಅರ್ಧಶತಕದ ನೆರವಿನಿಂದ 466 ರನ್ಗಳಿಕೆ ಮಾಡಿತ್ತು. ಜೊತೆಗೆ ಎದುರಾಳಿ ತಂಡದ ಗೆಲುವಿಗೆ 368 ರನ್ ಟಾರ್ಗೆಟ್ ನೀಡಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ 290 ರನ್ಗಳಿಕೆ ಮಾಡಿ 99 ರನ್ಗಳ ಮುನ್ನಡೆ ಕಾಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 210 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 157 ರನ್ಗಳ ಸೋಲು ಕಂಡಿದೆ.
ಭೋಜನದ ಬಳಿಕ ಪತನಗೊಂಡ ಇಂಗ್ಲೆಂಡ್
ಯಾವುದೇ ವಿಕೆಟ್ ನಷ್ಟವಿಲ್ಲದೇ ನಿನ್ನೆ 77 ರನ್ಗಳಿಕೆ ಮಾಡಿದ್ದ ಇಂಗ್ಲೆಂಡ್ ಇಂದು ತನ್ನ ಬ್ಯಾಟಿಂಗ್ ಮುಂದುವರೆಸಿತು. ಆರಂಭಿಕರಾದ ಬರ್ನ್ಸ್ 50 ರನ್ ಹಾಗೂ ಹಮೀದ್ 63 ರನ್ಗಳ ಮೂಲಕ ತಂಡಕ್ಕೆ 100 ರನ್ಗಳ ಜೊತೆಯಾಟವಾಡಿದರು. ಈ ವೇಳೆ 50 ರನ್ಗಳಿಸಿದ್ದ ಬರ್ನ್ಸ್ ವಿಕೆಟ್ ಪಡೆದುಕೊಳ್ಳುವಲ್ಲಿ ಠಾಕೂರ್ ಯಶಸ್ವಿಯಾಗಿ ಭಾರತಕ್ಕೆ ಮೊದಲ ಮೇಲುಗೈ ತಂದುಕೊಟ್ಟರು. ಇದರ ಬೆನ್ನಲ್ಲೇ ಮಲನ್ (5) ಕೂಡ ರನೌಟ್ ಬಲೆಗೆ ಬಿದ್ದರು.
ಮಿಂಚಿದ ಜಡೇಜಾ, ಶಾರ್ದೂಲ್, ಬುಮ್ರಾ, ಉಮೇಶ್
63 ರನ್ಗಳಿಕೆ ಮಾಡಿ ಉತ್ತಮವಾಗಿ ಬ್ಯಾಟಿಂಗ್ ಮಾಡ್ತಿದ್ದ ಹಮೀದ್ಗೆ ಶಾಕ್ ನೀಡಿದ ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಪೋಪ್(2) ಹಾಗೂ ಬೈರ್ಸ್ಟೋ ವಿಕೆಟ್ ಪಡೆದುಕೊಂಡ ಬುಮ್ರಾ ತಂಡಕ್ಕೆ ಮತ್ತಷ್ಟು ಮುನ್ನಡೆ ತಂದುಕೊಟ್ಟರು. 147 ರನ್ಗಳಿಕೆ ಮಾಡಿದ್ದ ವೇಳೆ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ಗೆ ಮತ್ತೊಮ್ಮೆ ಶಾಕ್ ನೀಡಿದ ಜಡೇಜಾ ಖಾತೆ ತೆರೆಯುವ ಮೊದಲೇ ಉಪನಾಯಕ ಮೊಯಿನ್ ಅಲಿ ಅವರನ್ನು ಪೆವಿಲಿಯನ್ಗೆ ಅಟ್ಟಿದರು.
ವಿಫಲರಾದ ಕ್ಯಾಪ್ಟನ್ ರೂಟ್
ಈ ವೇಳೆ ಒಂದಾದ ಕ್ಯಾಪ್ಟನ್ ರೂಟ್ ಹಾಗೂ ಅನುಭವಿ ವೋಕ್ಸ್ ತಂಡಕ್ಕೆ ಚೇತರಿಕೆ ನೀಡುವ ಕೆಲಸ ಮಾಡಲು ಮುಂದಾದರು. ಆದರೆ ಟೀಂ ಇಂಡಿಯಾ ಬೌಲಿಂಗ್ ಮುಂದೆ ಇವರ ಆಟ ನಡೆಯಲಿಲ್ಲ. 18 ರನ್ಗಳಿಸಿದ್ದ ವೋಕ್ಸ್ ವಿಕೆಟ್ ಪಡೆದುಕೊಳ್ಳುವಲ್ಲಿ ಉಮೇಶ್ ಯಾದವ್ ಯಶಸ್ವಿಯಾದರೆ, 36 ರನ್ಗಳಿಸಿದ್ದ ಕ್ಯಾಪ್ಟನ್ ರೂಟ್ ವಿಕೆಟ್ ಪಡೆಯುವಲ್ಲಿ ಠಾಕೂರ್ ಯಶಸ್ವಿಯಾದರು. ಈ ಮೂಲಕ ತಂಡ 193 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಇದಾದ ಬಳಿಕ ಓವರ್ಟನ್ 10 ರನ್ ಹಾಗೂ ಆ್ಯಂಡರ್ಸನ್ 2ರನ್ ಗಳಿಸಿದ್ದಾಗ ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಉಮೇಶ್ ಯಾದವ್ ಯಶಸ್ವಿಯಾಗಿದ್ದರಿಂದ ತಂಡ ಗೆಲುವು ದಾಖಲು ಮಾಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಉಮೇಶ್ 3 ವಿಕೆಟ್, ಬುಮ್ರಾ, ಜಡೇಜಾ ತಲಾ 2 ವಿಕೆಟ್ ಪಡೆದುಕೊಂಡರೆ, ಠಾಕೂರ್ ಹಾಗೂ ಸಿರಾಜ್ 1 ವಿಕೆಟ್ ಪಡೆದುಕೊಂಡಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ಶಾರ್ದೂಲ್, ಜಡೇಜಾ ಹಾಗೂ ಬುಮ್ರಾ 2 ವಿಕೆಟ್ ಹಾಗೂ ಯಾದವ್ 3 ವಿಕೆಟ್ ಪಡೆದುಕೊಂಡಿದ್ದಾರೆ.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2 ಪಂದ್ಯ ಗೆದ್ದಿದ್ದು, ಇಂಗ್ಲೆಂಡ್ 1ರಲ್ಲಿ ಜಯ ಸಾಧಿಸಿದೆ. ಹೀಗಾಗಿ ಕೊಹ್ಲಿ ಪಡೆ 2-1 ಅಂತರದ ಮುನ್ನಡೆ ಪಡೆದಿದೆ. ಫೈನಲ್ ಪಂದ್ಯ ಇದೇ ತಿಂಗಳ 10ರಿಂದ ಮ್ಯಾಂಚೆಸ್ಟರ್ನಲ್ಲಿ ಆರಂಭಗೊಳ್ಳಲಿದೆ.
-
THIS. IS. IT! 👏 👏
— BCCI (@BCCI) September 6, 2021 " class="align-text-top noRightClick twitterSection" data="
Take a bow, #TeamIndia! 🙌 🙌
What a fantastic come-from-behind victory this is at The Oval! 👌 👌
We head to Manchester with a 2-1 lead! 👍 👍 #ENGvIND
Scorecard 👉 https://t.co/OOZebP60Bk pic.twitter.com/zhGtErWhbs
">THIS. IS. IT! 👏 👏
— BCCI (@BCCI) September 6, 2021
Take a bow, #TeamIndia! 🙌 🙌
What a fantastic come-from-behind victory this is at The Oval! 👌 👌
We head to Manchester with a 2-1 lead! 👍 👍 #ENGvIND
Scorecard 👉 https://t.co/OOZebP60Bk pic.twitter.com/zhGtErWhbsTHIS. IS. IT! 👏 👏
— BCCI (@BCCI) September 6, 2021
Take a bow, #TeamIndia! 🙌 🙌
What a fantastic come-from-behind victory this is at The Oval! 👌 👌
We head to Manchester with a 2-1 lead! 👍 👍 #ENGvIND
Scorecard 👉 https://t.co/OOZebP60Bk pic.twitter.com/zhGtErWhbs
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 191/10
ಭಾರತ ಎರಡನೇ ಇನ್ನಿಂಗ್ಸ್ 466/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 290/10
ಎರಡನೇ ಇನ್ನಿಂಗ್ಸ್ 210/10
ಭಾರತಕ್ಕೆ 157 ರನ್ಗಳ ಗೆಲುವು, ಸರಣಿಯಲ್ಲಿ 2-1 ಅಂತರದ ಮುನ್ನಡೆ