ಲಂಡನ್ : ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸಮನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.
ಎದುರಾಳಿ ತಂಡದ ಬೌಲರ್ಗಳನ್ನು ಬಹಳ ತಾಳ್ಮೆಯಿಂದ ಎದುರಿಸಿದ ಹಿಟ್ ಮ್ಯಾನ್ (101 ರನ್, 212 ಎಸೆತ, 12 ಬೌಂಡರಿ, 1 ಸಿಕ್ಸ್) ಬಿರುಸಿನ ಬ್ಯಾಟ್ ಬೀಸಿ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾಗಿದ್ದಾರೆ. 48 ರನ್ (93 ಎಸೆತ, 7 ಬೌಂಡರಿ) ಸಿಡಿಸಿರುವ ಚೇತೇಶ್ವರ್ ಪೂಜಾರ್ ಹಿಟ್ ಮ್ಯಾನ್ಗೆ ಆಸರೆಯಾಗಿದ್ದಾರೆ.
-
Shaandar Zabardast Zindabad.
— Virender Sehwag (@virendersehwag) September 4, 2021 " class="align-text-top noRightClick twitterSection" data="
When the going gets tough the tough get going. Outstanding first overseas Test hundred from #RohitSharma .
Class ! pic.twitter.com/aw3NYCuO5y
">Shaandar Zabardast Zindabad.
— Virender Sehwag (@virendersehwag) September 4, 2021
When the going gets tough the tough get going. Outstanding first overseas Test hundred from #RohitSharma .
Class ! pic.twitter.com/aw3NYCuO5yShaandar Zabardast Zindabad.
— Virender Sehwag (@virendersehwag) September 4, 2021
When the going gets tough the tough get going. Outstanding first overseas Test hundred from #RohitSharma .
Class ! pic.twitter.com/aw3NYCuO5y
ಇನ್ನು 46 ರನ್ (101 ಬಾಲ್, 6 ಸಿಕ್ಸ್, 1 ಬೌಂಡರಿ) ಗಳಿಸಿದ ಕೆ ಎಲ್ ರಾಹುಲ್ ಎದುರಾಳಿ ತಂಡದ ಬೌಲರ್ ಜೇಮ್ಸ್ ಆಂಡರ್ಸನ್ ಅವರಿಗೆ ವಿಕೆಟ್ ಒಪ್ಪಿಸಿ ಬಹಳ ನಿರಾಶೆಯಿಂದಲೇ ಪೆವಿಲಿಯನತ್ತ ತೆರಳಿದರು. ಸದ್ಯ ಒಂದು ವಿಕೆಟ್ ಪತನದಿಂದ ಟೀಂ ಇಂಡಿಯಾ 100 ರನ್ಗಳ ಮುನ್ನಡೆ ಸಾಧಿಸಿದೆ. ವಿದೇಶಿ ನೆಲದಲ್ಲಿ ರೋಹಿತ್ ಅವರ ಮೊದಲ ಶತಕ ಮತ್ತು ಟೆಸ್ಟ್ ವೃತ್ತಿಜೀವನದಲ್ಲಿ 8ನೇ ಶತಕ ಇದಾಗಿದ್ದು, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.