ಓವಲ್(ಲಂಡನ್): ಆತಿಥೇಯ ಇಂಗ್ಲೆಂಡ್-ಭಾರತ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿದ್ದು, ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೇರವಿನಿಂದ ಮೂರನೇ ದಿನದಾಟದ ಅಂತ್ಯಕ್ಕೆ 270ರನ್ಗಳಿಕೆ ಮಾಡಿದೆ.
-
Stumps at The Oval 🏏
— ICC (@ICC) September 4, 2021 " class="align-text-top noRightClick twitterSection" data="
A riveting day of play comes to an end.
Which side holds the edge?#WTC23 | #ENGvIND | https://t.co/zRhnFiKhzZ pic.twitter.com/SNKC2ab4zK
">Stumps at The Oval 🏏
— ICC (@ICC) September 4, 2021
A riveting day of play comes to an end.
Which side holds the edge?#WTC23 | #ENGvIND | https://t.co/zRhnFiKhzZ pic.twitter.com/SNKC2ab4zKStumps at The Oval 🏏
— ICC (@ICC) September 4, 2021
A riveting day of play comes to an end.
Which side holds the edge?#WTC23 | #ENGvIND | https://t.co/zRhnFiKhzZ pic.twitter.com/SNKC2ab4zK
ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ನಷ್ಟವಿಲ್ಲದೇ 43ರನ್ಗಳಿಕೆ ಮಾಡಿದ್ದ ಟೀಂ ಇಂಡಿಯಾ ಇಂದು ಬ್ಯಾಟಿಂಗ್ ಮುಂದುವರೆಸಿತು. ಅರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ಮುಂದುವರೆಸಿದರು. ಈ ಜೋಡಿ 83ರನ್ಗಳ ಮುರಿಯದ ಜೊತೆಯಾಟವಾಡಿತು. 46ರನ್ಗಳಿಕೆ ಮಾಡಿದ್ದ ವೇಳೆ ಆ್ಯಂಡರ್ಸನ್ ಓವರ್ನಲ್ಲಿ ರಾಹುಲ್ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ರೋಹಿತ್ ಶರ್ಮಾ ಜೊತೆಗೂಡಿದ ಚೇತೇಶ್ವರ್ ಪೂಜಾರಾ ಉತ್ತಮ ಆಟವಾಡಿದರು. ಈ ಜೋಡಿ 153ರನ್ಗಳ ಉತ್ತಮ ಜೊತೆಯಾಟವಾಡಿ, ಆಂಗ್ಲರ ಬೌಲರ್ಗಳನ್ನ ದಂಡಿಸಿದರು.
ಇದನ್ನೂ ಓದಿರಿ: ತಡೋಬಾ ಸಫಾರಿಗಾಗಿ ವಿದರ್ಭಕ್ಕೆ ಆಗಮಿಸಿದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್
ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ರೋಹಿತ್ ಶರ್ಮಾ ಮಿಂಚಿದ್ದಾರೆ. ಇದರ ಜೊತೆಗೆ ವಿದೇಶಿ ನೆಲದಲ್ಲಿ ಮೊದಲ ಸೆಂಚುರಿ ಸಿಡಿಸಿರುವ ದಾಖಲೆಗೆ ಪಾತ್ರರಾಗಿದ್ದಾರೆ. 8 ವರ್ಷಗಳ ಟೆಸ್ಟ್ ಕೆರಿಯರ್ನಲ್ಲಿ ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ಸಿಡಿಸಿರುವ ಮೊದಲ ಶತಕ ಇದಾಗಿದೆ. 2013ರಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ 8 ಶತಕ ಹಾಗೂ 1ದ್ವಿಶತಕ ಹಾಗೂ 14 ಅರ್ಧಶತಕ ಸಿಡಿಸಿದ್ದಾರೆ.
ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ ಪೂಜಾರಾ-ರೋಹಿತ್
ಶತಕ ಹಾಗೂ ಅರ್ಧಶತಕ ಸಿಡಿಸಿ ಉತ್ತಮವಾಗಿ ಆಟವಾಡುತ್ತಿದ್ದ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರಾ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. 127ರನ್ಗಳಿಸಿದ್ದ ವೇಳೆ ರಾಬಿನ್ಸನ್ ಎಸೆದ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಇದೇ ಓವರ್ನಲ್ಲಿ 61ರನ್ಗಳಿಸಿದ್ದ ಪೂಜಾರಾ ಕೂಡ ಮೊಯಿನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇದಾದ ಬಳಿಕ ಒಂದಾಗಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಜೇಯ(22ರನ್) ಹಾಗೂ ರವೀಂದ್ರ ಜಡೇಜಾ ಅಜೇಯ(9)ರನ್ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಸದ್ಯ ಟೀಂ ಇಂಡಿಯಾ 171ರನ್ಗಳ ಮುನ್ನಡೆ ಸಾಧಿಸಿದ್ದು, ಎರಡು ದಿನಗಳ ಆಟ ಬಾಕಿ ಉಳಿದಿದೆ.
ಇಂಗ್ಲೆಂಡ್ ಪರ ಎರಡನೇ ಇನ್ನಿಂಗ್ಸ್ನಲ್ಲಿ ಆ್ಯಂಡರ್ಸನ್ 1 ವಿಕೆಟ್ ಪಡೆದರೆ, ರಾಬಿನ್ಸನ್ 2 ವಿಕೆಟ್ ಕಿತ್ತಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕೇವಲ 191ರನ್ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ತಂಡ 290ರನ್ಗಳಿಕೆ ಮಾಡಿದೆ.