ETV Bharat / sports

ಇಂಡೋ - ಆಂಗ್ಲರ ಮೊದಲ ಏಕದಿನ: ಟಾಸ್​ ಗೆದ್ದು ಬೌಲಿಂಗ್ ಆಯ್ದ ರೋಹಿತ್​; ವಿರಾಟ್​​ ಅಲಭ್ಯ

ಟಿ-20 ಸರಣಿ ಕೈವಶ ಮಾಡಿಕೊಂಡಿರುವ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಇಂದಿನಿಂದ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಉಭಯ ತಂಡಗಳ ನಡುವೆ ದಿ ಓವೆಲ್​​ನಲ್ಲಿ ಮೊದಲ ಪಂದ್ಯ ಆರಂಭಗೊಂಡಿದೆ.

England vs India 1st ODI
England vs India 1st ODI
author img

By

Published : Jul 12, 2022, 5:15 PM IST

Updated : Jul 12, 2022, 5:20 PM IST

ದಿ ಓವೆಲ್​(ಲಂಡನ್​): ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಂಡಿದೆ. ಇಂಗ್ಲೆಂಡ್​ನ ದಿ ಓವೆಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದಿರುವ ರೋಹಿತ್​ ಶರ್ಮಾ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೂರನೇ ಟಿ20 ಪಂದ್ಯದ ವೇಳೆ ಗಾಯಗೊಂಡಿರುವ ವಿರಾಟ್​ ಕೊಹ್ಲಿ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನದಲ್ಲಿ ಶ್ರೇಯಸ್​ ಅಯ್ಯರ್​​ ಅವಕಾಶ ಪಡೆದುಕೊಂಡಿದ್ದಾರೆ.

ಟೀಂ ಇಂಡಿಯಾ: ರೋಹಿತ್ ಶರ್ಮಾ(ಕ್ಯಾಪ್ಟನ್​),ಶಿಖರ್​ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್​, ರಿಷಭ್ ಪಂತ್​(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್​ ಶಮಿ, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್​, ಪ್ರಸಿದ್ಧ್ ಕೃಷ್ಣ

ಇಂಗ್ಲೆಂಡ್​ ತಂಡ: ಜೆಸನ್ ರಾಯ್​, ಜಾನಿ ಬೈರ್​ಸ್ಟೋ, ಜೋ ರೂಟ್, ಬೆನ್​ ಸ್ಟೋಕ್ಸ್​, ಜೋಸ್ ಬಟ್ಲರ್​(ವಿ.ಕೀ, ಕ್ಯಾಪ್ಟನ್), ಲಿವಿಗ್​​ಸ್ಟೋನ್​, ಮೊಯಿನ್​ ಅಲಿ,ಓವರ್​​ಟೊನ್​, ಡೆವಿಡ್ ವಿಲ್ಲಿ, ಕೆರ್ಸೆ, ಟೊಪ್ಲೆ

ಯುವ ಹಾಗೂ ಅನುಭವಿ ಆಟಗಾರರಿಂದ ರೋಹಿತ್ ಬಳಗ ಕೂಡಿದ್ದು, ಟಿ-20 ವಿಶ್ವಕಪ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಡೆಯಲಿರುವ ಮತ್ತೊಂದು ಅಗ್ನಿಪರೀಕ್ಷೆ ಇದಾಗಿದೆ. ಹೀಗಾಗಿ, ಪ್ರತಿವೊಂದು ಪಂದ್ಯ ನಮಗೆ ಮಹತ್ವ ಪಡೆದುಕೊಂಡಿವೆ ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.

ಬಟ್ಲರ್​ಗೆ ಮೊದಲ ಅಗ್ನಿಪರೀಕ್ಷೆ: ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ನಾಯಕತ್ವ ತೊರೆದ ಬಳಿಕ ಕ್ಯಾಪ್ಟನ್ ಆಗಿರುವ ಜಾಸ್ ಬಟ್ಲರ್​ಗೆ ಇಂದು ಮೊದಲ ಏಕದಿನ ಸರಣಿಯಾಗಿದೆ. ಹೀಗಾಗಿ, ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಆಂಗ್ಲರ ತಂಡದಲ್ಲಿ ಬೆನ್​ ಸ್ಟೋಕ್ಸ್​, ಜೋ ರೂಟ್​, ಬೈರ್​ಸ್ಟೋರಂತಹ ಬಲಿಷ್ಠ ಆಟಗಾರರಿದ್ದಾರೆ.

ಭಾರತ-ಇಂಗ್ಲೆಂಡ್​ ಮುಖಾಮುಖಿ: ಉಭಯ ತಂಡಗಳು ಇಲ್ಲಿಯವರೆಗೆ ಒಟ್ಟು 103 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 55 ಪಂದ್ಯ ಹಾಗೂ ಇಂಗ್ಲೆಂಡ್​ 43 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಉಳಿದಂತೆ ಎರಡು ಪಂದ್ಯಗಳು ಟೈ ಆಗಿದ್ದು, ಮೂರು ಮ್ಯಾಚ್​ಗಳಿಂದ ಫಲಿತಾಂಶ ಬಂದಿಲ್ಲ.

ಇದನ್ನೂ ಓದಿರಿ: 'IPLನಲ್ಲಿ ಮಾತ್ರ ನೀವು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ': ಭಾರತದ ಪರ ಆಡುವಾಗ ಏಕೆ? :ಸುನಿಲ್ ಗವಾಸ್ಕರ್​

Last Updated : Jul 12, 2022, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.