ETV Bharat / sports

ಮೊದಲ ಪಂದ್ಯದಲ್ಲೇ ಇಶಾನ್​ "ಶೈನ್"​​ಗೆ ಹಿಟ್​ ಮ್ಯಾನ್​ ರೋಹಿತ್​​ ಕಾರಣರಂತೆ - ಹಿಟ್​ ಮ್ಯಾನ್​ ರೋಹಿತ್​ ಶರ್ಮಾ

ಇಶಾನ್ ಕಿಶನ್, ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಟಿ-20 ಫಾರ್ಮೆಟ್​ನಲ್ಲಿ ತಮ್ಮ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಬ್ಬರದ ಆಟವಾಡಿದ ಕಿಶನ್ ಕೇವಲ 32 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು. ಚೊಚ್ಚಲ ಪಂದ್ಯದಲ್ಲಿಯೆ ಆಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿದ ಇಶಾನ್​​ ಕಿಶನ್​, ಮ್ಯಾನ್​ ಆಫ್​ ದಿ ಮ್ಯಾಚ್​ ಅವಾರ್ಡ್​​​ ಕೂಡ ಪಡೆದುಕೊಂಡರು.

Ishan Kishan
ಇಶಾನ್ ಕಿಶನ್
author img

By

Published : Mar 15, 2021, 10:25 AM IST

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ- 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಇಶಾನ್ ಕಿಶನ್, ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಟಿ-20 ಫಾರ್ಮೆಟ್​ನಲ್ಲಿ ತಮ್ಮ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಬ್ಬರದ ಆಟವಾಡಿದ ಕಿಶನ್ ಕೇವಲ 32 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು.

ಚೊಚ್ಚಲ ಪಂದ್ಯದಲ್ಲಿಯೆ ಆಕರ್ಷಕ ಅರ್ಧ ಶತಕ ಸಿಡಿಸಿ ಮಿಂಚಿದ ಇಶಾನ್​​ ಕಿಶನ್​, ಮ್ಯಾನ್​ ಆಫ್​ ದಿ ಮ್ಯಾಚ್​ ಅವಾರ್ಡ್​​​ ಕೂಡ ಪಡೆದುಕೊಂಡರು. ಪಂದ್ಯದ ನಂತರ ಮಾತನಾಡಿದ ಅವರು ನಾನು ಈ ಪಂದ್ಯದಲ್ಲಿ ಇಷ್ಟು ಸರಾಗವಾಗಿ ಬ್ಯಾಟ್​ ಬೀಸಲು ಹಿಟ್​ ಮ್ಯಾನ್​ ರೋಹಿತ್​ ಶರ್ಮಾ. ನನಗೆ ಪಂದದ ಮೊದಲು ರೋಹಿತ್ ಶರ್ಮಾ ಅವರು ನನ್ನ ಬಳಿ ಬಂದು ಮುಕ್ತವಾಗಿ ಆಡು, ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡ ಎಂದು ಸೂಚಿಸಿದ್ದರು ಎಂದು ಕಿಶನ್​ ಹೇಳಿದ್ದಾರೆ.

"ಕ್ರಿಕೆಟಿಗನಾಗಿ, ನೀವು ಯಶಸ್ವಿಯಾಗಲು ಸಹಾಯ ಮಾಡಲು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಅನೇಕ ಜನರು ಇದ್ದಾರೆ. ರೋಹಿತ್ ಭಾಯ್ ನೀವು ಐಪಿಎಲ್‌ನಲ್ಲಿ ಆಡುವಂತೆ, ಮುಕ್ತವಾಗಿ ಆಡು ಎಂದು ಪಂದ್ಯದ ಮೊದಲು ಹೇಳಿದ್ದರು. ನಾನು ಕ್ರೀಸ್​​ಗೆ ಹೋದಾಗ ಆತಂಕಕ್ಕೊಳಗಾಗಿದ್ದರೆ ಈ ಫಲಿತಾಂಶ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಓದಿ : ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ ಕಿಶನ್​​: ಕೊಹ್ಲಿ ಬಗ್ಗೆ ಹೇಳಿದ್ದೇನು?

"ಅಂಡರ್ -19 ನಲ್ಲಿ ನನ್ನ ಜೊತೆ ಆಡಿದ ಹುಡುಗರು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನ ನೋಡಿದಾಗ ನನಗೆ ಸಂತಸವಾಗುತ್ತದೆ, ಅವರ ಪ್ರದರ್ಶನವನ್ನು ನೋಡಲು ಯಾವಾಗಲೂ ಹೆಮ್ಮೆ ಎನಿಸುತ್ತದೆ. ನಾನು ಅಲ್ಲಿಗೆ ಹೋದಾಗ, ನಾನು ಹೇಗೆ ನನ್ನನ್ನು ಸುಧಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತೇನೆ. ಪ್ರತಿ ಹಾದು ಹೋಗುವ ದಿನದಲ್ಲಿ ನಾನು ಹೇಗೆ ಉತ್ತಮವಾಗಬಹುದು ಎಂಬುದರ ಬಗ್ಗೆ ನಾನು ಯೋಚಿಸುತ್ತೇನೆ. ನಾನು ಯಾವುದೇ ಸಂಖ್ಯೆಯ ಬಗ್ಗೆ ಯೋಚಿಸುವುದಿಲ್ಲ, ತಂಡಕ್ಕೆ ಬೇಕಾದುದನ್ನು ನಾನು ಮಾಡುತ್ತೇನೆ. " ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.