ಪುಣೆ : ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 7 ರನ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ಭಾರತ ತಂಡ 3 ಪಂದ್ಯಗಳ ಸರಣಿಯನ್ನ 2-1ರಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಆಂಗ್ಲರ ವಿರುದ್ಧ ಟೆಸ್ಟ್, ಟಿ20 ಮತ್ತು ಏಕದಿನ ಹೀಗೆ ಮೂರು ಸರಣಿಗಳನ್ನು ಕೊಹ್ಲಿ ಬಳಗ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮೂರನೇ ಪಂದ್ಯದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರನ್ ಭಾರತ ಬೌಲರ್ಗಳ ಬೆವರಿಳಿಸಿದ್ದರು. ಈ ಪಂದ್ಯದಲ್ಲಿ ಕರ್ರನ್ 83 ಎಸೆತಗಳಲ್ಲಿ 9 ಬೌಂಡರಿ 3 ಭರ್ಜರಿ ಸಿಕ್ಸರ್ ನೇರವಿನಿಂದ 95 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇವರ ಅದ್ಭುತ ಬ್ಯಾಟಿಂಗ್ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂಡಾ ಲಭಿಸಿತ್ತು.
ಈ ಪಂದ್ಯದ ನಂತರ ಮಾತನಾಡಿರುವ ಸ್ಯಾಮ್ ಕರ್ರನ್ "ವಿರಾಟ್ ಕೊಹ್ಲಿ ಪಡೆ ವಿರುದ್ಧ ನಾನು ಈ ಸರಣಿಯಲ್ಲಿ ಆಡಿದ್ದು, ಕಲಿಕೆಯ ದೊಡ್ಡ ಭಾಗವಾಗಿದೆ ಎಂದು ಹೇಳಿದ್ದಾರೆ.
ಓದಿ : ಆಂಗ್ಲರ ವಿರುದ್ಧ 7 ರನ್ಗಳ ರೋಚಕ ಜಯ ಸಾಧಿಸಿದ ಭಾರತ.. 2-1ರಲ್ಲಿ ಏಕದಿನ ಸರಣಿ ವಶ!
"ನಾವು ಈ ಪಂದ್ಯವನ್ನು ಗೆಲ್ಲಲಿಲ್ಲ, ಆದರೆ ನಾನು ಆಡಿದ ರೀತಿಗೆ ನನಗೆ ಸಂತೋಷವಾಗಿದೆ. ನಾನು ಗೆಲ್ಲುವುದನ್ನು ಇಷ್ಟಪಡುತ್ತೇನೆ, ಆದರೆ ಇದು ಒಂದು ಉತ್ತಮ ಅನುಭವ. ನಾನು ಇಂಗ್ಲೆಂಡ್‌ಗಾಗಿ ಇದನ್ನು ತುಂಬಾ ಆಳಕ್ಕೆ ಕೊಂಡೊಯ್ದೆ, ಆದರೆ ಕೊನೆಯಲ್ಲಿ ನಾವು ಸೋತೆವು. ನಟರಾಜನ್ ಕೊನೆಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರು ನಿಜವಾಗಿಯೂ ಉತ್ತಮ ಬೌಲರ್, ಅದು ಏಕೆ ಎಂಬುದು ಈಗ ಗೊತ್ತಾಗಿದೆ" ಎಂದು ಕರ್ರನ್ ತಿಳಿಸಿದರು.
"ಒಂದು ಕಡೆ ಭುವಿ (ಭುವನೇಶ್ವರ್ ಕುಮಾರ್) ಅದ್ಭುತ ಬೌಲರ್ ಎಂದು ನಾನು ಅರಿತುಕೊಂಡೆ. ಹಾಗಾಗಿ ನಾನು ಅವರನ್ನ ಟಾರ್ಗೆಟ್ ಮಾಡಿ ಆಡಲು ಆಗಲಿಲ್ಲ. ಭಾರತ ಅದ್ಭುತ ಬ್ಯಾಟಿಂಗ್ ಬಲವಿರುವ ತಂಡವಾಗಿದೆ. ಹಾಗೆಯೇ ಇಲ್ಲಿನ ಪಿಚ್ ಕೂಡಾ ಉತ್ತಮವಾಗಿತ್ತು. ನಾನು ಐಪಿಎಲ್ಗಾಗಿ ಎದುರು ನೋಡುತ್ತಿದ್ದೇನೆ "ಎಂದು ಅವರು ಹೇಳಿದರು.