ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಮುಂದುವರೆಸಿದೆ.
-
Tea in Chennai ☕
— ICC (@ICC) February 7, 2021 " class="align-text-top noRightClick twitterSection" data="
England claimed the big wickets of Kohli and Rahane, but Pant and Pujara have helped India recover and go into the break at 154/4.#INDvENG | https://t.co/gnj5x4GOos pic.twitter.com/zOgR1SEYSL
">Tea in Chennai ☕
— ICC (@ICC) February 7, 2021
England claimed the big wickets of Kohli and Rahane, but Pant and Pujara have helped India recover and go into the break at 154/4.#INDvENG | https://t.co/gnj5x4GOos pic.twitter.com/zOgR1SEYSLTea in Chennai ☕
— ICC (@ICC) February 7, 2021
England claimed the big wickets of Kohli and Rahane, but Pant and Pujara have helped India recover and go into the break at 154/4.#INDvENG | https://t.co/gnj5x4GOos pic.twitter.com/zOgR1SEYSL
ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೆ ಆಘಾತ ಅನುಭವಿಸಿತು. ಹಿಟ್ಮ್ಯಾನ್ ರೋಹಿತ್ ಶರ್ಮಾ ಕೇವಲ 6 ರನ್ಗಳಿಸಿ ಜೋರ್ಫಾ ಆರ್ಚರ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡುವ ಮೂಲಕ ಪವಿಲಿಯನ್ ಹಾದಿ ಹಿಡಿದರು. ಇನ್ನು ಶುಭಮನ್ ಗಿಲ್ 29 ರನ್ ಗಳಿಸಿದಾಗ ಜೋರ್ಫಾ ಆರ್ಚರ್ ಬೌಲಿಂಗ್ನಲ್ಲಿ ಆಂಡರ್ಸನ್ ಹಿಡಿದ ಅದ್ಭುತ ಕ್ಯಾಚ್ಗೆ ಬಳಿಯಾದರು. ಇದರಿಂದ ಟೀಮ್ ಇಂಡಿಯಾ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಂತರ ಜೋಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪೂಜಾರರಿಂದಲೂ ಉತ್ತಮ ಜೊತೆಯಾಟ ಬರಲಿಲ್ಲ. ಕೇವಲ 11 ರನ್ಗಳಿಸಿ ವಿರಾಟ್ ಕೊಹ್ಲಿ ಡೊಮ್ ಬೆಸ್ ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್ಗೆ ಬಂದ ಉಪ ನಾಯಕ ಅಜಿಂಕ್ಯ ರಹಾನೆ ಆಟ ಕೂಡ ಹೆಚ್ಚು ಹೊತ್ತು ನಡೆಯಲಿಲ್ಲ. 1 ರನ್ಗಳಿಸಿ ಡೊಮ್ ಬೆಸ್ ಗೆ ವಿಕೆಟ್ ಒಪ್ಪಿಸಿ ಪವಿಲಿಯನ್ ಹಾದಿ ಹಿಡಿದರು.
ಪ್ರಸ್ತುತ ಟೀ ಇಂಡಿಯಾ 154 ರನ್ ಗಳಿಸಿದೆ. ಚೇತೇಶ್ವರ ಪೂಜಾರ 53 *, ರಿಷಭ್ ಪಂತ್ 54 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಇನ್ನೂ ಇಂಗ್ಲೆಂಡ್ ಪರ ಆರ್ಚರ್ 2 ಹಾಗೂ ಡೊಮ್ ಬೆಸ್ 2 ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು.
ಓದಿ : ಭಾರತ vs ಇಂಗ್ಲೆಂಡ್ : ಲಂಚ್ ವೇಳೆಗೆ ಲಯ ಕಳೆದುಕೊಂಡ ಟೀಮ್ ಇಂಡಿಯಾ
ಭಾರತದ ಎದುರಿನ ಮೊದಲ ಟೆಸ್ಟ್ನ ಮೂರನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್ ಸರ್ವಪತನ ಕಂಡಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (218) ಅಮೋಘ ದ್ವಿಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಎರಡನೇ ದಿನದಾಟದ ಅಂತ್ಯದಲ್ಲಿ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿದ್ದ ಆಂಗ್ಲ ಪಡೆ, ಮೂರನೇ ದಿನದಾಟ ಆರಂಭವಾದ ಕೆಲಹೊತ್ತಿನಲ್ಲೇ 23 ರನ್ ಗಳಿಸುವುದರೊಳಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ 190.1 ಓವರ್‌ಗಳಲ್ಲಿ 578 ರನ್‌ಗಳಿಗೆ ಆಲೌಟ್ ಆಯಿತು.