ಕೆನ್ನಿಂಗ್ಟನ್ ಓವಲ್(ಲಂಡನ್): ಓವಲ್‌ನಲ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.
ಲೀಡ್ಸ್‌ನಲ್ಲಿ ನಡೆದಿದ್ದ 3ನೇ ಪಂದ್ಯದಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಹಾಗೂ ಉಮೇಶ್ ಯಾದವ್‌ಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಮಹಮ್ಮದ್ ಶಮಿ ಹಾಗು ಇಶಾಂತ್ ಶರ್ಮಾರನ್ನು ಪಂದ್ಯದಿಂದ ಕೈಬಿಡಲಾಗಿದೆ.
ಲೀಡ್ಸ್‌ನಲ್ಲಿ ಅನುಭವಿಸಿದ್ದ ಮುಖಭಂಗಕ್ಕೆ ತಿರುಗೇಟು ನೀಡುವ ತವಕದಲ್ಲಿ ಕೊಹ್ಲಿ ಪಡೆ ಇದೆ. ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ತಂಡಗಳು ಇಂತಿವೆ:
ಭಾರತ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲಾನ್, ಜೋ ರೂಟ್(ನಾಯಕ), ಓಲಿ ಪೋಪ್, ಜಾನಿ ಬೇರ್‌ಸ್ಟೋವ್ (ವಿಕೆಟ್ ಕೀಪರ್), ಮೋಯಿಲ್ ಅಲಿ, ಕ್ರೀಸ್ ವೋಕ್ಸ್, ಕ್ರೇಗ್ ಓವರ್ಟನ್, ಓಲಿ ರಾಬಿನ್ಸನ್ ಹಾಗು ಜೇಮ್ಸ್ ಆ್ಯಂಡರ್‌ಸನ್.
ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಟೀಂ ಇಂಡಿಯಾ:
-
The Indian Cricket Team is sporting black armbands today to honour the demise of Shri Vasudev Paranjape.#TeamIndia pic.twitter.com/9pEd2ZB8ol
— BCCI (@BCCI) September 2, 2021 " class="align-text-top noRightClick twitterSection" data="
">The Indian Cricket Team is sporting black armbands today to honour the demise of Shri Vasudev Paranjape.#TeamIndia pic.twitter.com/9pEd2ZB8ol
— BCCI (@BCCI) September 2, 2021The Indian Cricket Team is sporting black armbands today to honour the demise of Shri Vasudev Paranjape.#TeamIndia pic.twitter.com/9pEd2ZB8ol
— BCCI (@BCCI) September 2, 2021
ಇತ್ತೀಚೆಗೆ ನಿಧನರಾದ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಕೋಚ್ ಆಗಿದ್ದ ವಾಸು ಪರಂಜಪೆ ಅವರ ಸ್ಮರಣಾರ್ಥ ಭಾರತೀಯ ತಂಡದ ಆಟಗಾರರು ಇಂದು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.