ಅಹಮದಾಬಾದ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನ ನಾಲ್ಕನೇ ಟೆಸ್ಟ್ನಿಂದ ಏಕೆ ಕೈ ಬಿಡಲಾಯಿತು ಎಂಬುದನ್ನ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.
ಬಲ ಮೊಣಕೈಗೆ ಗಾಯದಿಂದಾಗಿ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಆರ್ಚರ್ ಅವರನ್ನ ಪ್ಲೇಯಿಂಗ್ ಇಲೆವೆನ್ ನಿಂದ ಕೈ ಬಿಡಲಾಯಿತು ಎಂದು ಇಸಿಬಿ ಸ್ಪಷ್ಟನೆ ನೀಡಿದೆ.
"ಜೋಫ್ರಾ ಆರ್ಚರ್ ಅವರ ಬಲ ಮೊಣಕೈ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಇಸಿಬಿ ವೈದ್ಯಕೀಯ ತಂಡವು ಈ ಬಗ್ಗೆ ಸರಿಯಾದ ಸ್ಪಷ್ಟನೆ ನೀಡುತ್ತಿದೆ" ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
-
All set for our final Test of the winter 🏴🏏 pic.twitter.com/vNUzih3wSC
— England Cricket (@englandcricket) March 3, 2021 " class="align-text-top noRightClick twitterSection" data="
">All set for our final Test of the winter 🏴🏏 pic.twitter.com/vNUzih3wSC
— England Cricket (@englandcricket) March 3, 2021All set for our final Test of the winter 🏴🏏 pic.twitter.com/vNUzih3wSC
— England Cricket (@englandcricket) March 3, 2021
ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೊಟ್ಟೆಯ ನೋವು ಕಾಣಿಸಿಕೊಂಡಿತ್ತು. ಆದರೆ, ಅವರನ್ನು ತಂಡದಿಂದ ಕೈ ಬಿಟ್ಟರೆ ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಅವರನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಸೇರಿಸಲಾಯಿತು ಎಂದು ಇಸಿಬಿ ತಿಳಿಸಿದೆ.
ಓದಿ : ಅವರು ಪ್ರಚಾರ ಪಡೆಯಲು ಭಾರತದ ಪಿಚ್ ಬಗ್ಗೆ ಟೀಕಿಸುತ್ತಾರೆ: ಸುನಿಲ್ ಗವಾಸ್ಕರ್
ಅಹಮದಾಬಾದ್‌ನಲ್ಲಿ ಬದಲಾಗುತ್ತಿರುವ ಹವಾಮಾನವು ಇಂಗ್ಲೆಂಡ್ ತಂಡದ ಶಿಬಿರದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಇಲ್ಲಿ ತಾಪಮಾನ ಏಕಾಏಕಿ ಏರಿಕೆಯಿಂದ ಸಹಾಯಕ ಕೋಚ್ ಪಾಲ್ ಕಾಲಿಂಗ್‌ವುಡ್ ಸೇರಿದಂತೆ ಕೆಲವು ಸದಸ್ಯರ ಮೇಲೆ ಪರಿಣಾಮ ಬೀರಿದ್ದು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
" ನಾವು ಮೇಲ್ವಿಚಾರಣೆ ಮಾಡುತ್ತಲೇ ಇರುತ್ತೇವೆ. ನಿಜ ಹೇಳಬೇಕೆಂದರೆ, ಈ ಹಂತದಲ್ಲಿ ಯಾರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ನನಗೆ ನಿಖರವಾಗಿ ತಿಳಿದಿಲ್ಲ. ಆದರೆ ಎಲ್ಲರಿಗೂ ಉತ್ತಮ ಅವಕಾಶವನ್ನು ನೀಡುವುದು ನಿಜಕ್ಕೂ ಮುಖ್ಯವಾಗಿದೆ "ಎಂದು ರೂಟ್ ಬ್ರಿಟಿಷ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭಾರತದ ನಾಯಕ ವಿರಾಟ್ ಕೊಹ್ಲಿ, ಭಾರತದ ಯಾವುದೇ ಆಟಗಾರರು ಯಾವುದೇ ಕಾಯಿಲೆಗೆ ತುತ್ತಾಗಿಲ್ಲ ಎಂದು ದೃಢಪಡಿಸಿದ್ದಾರೆ.