ನವದೆಹಲಿ: 1971ರಲ್ಲಿ ಒವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಸರಣಿ ಗೆದ್ದು ಇಂದಿಗೆ 50 ವರ್ಷವಾಗುತ್ತಿದೆ. ಮೊದಲ ಬಾರಿಗೆ ಆಂಗ್ಲನ್ನರ ನೆಲದಲ್ಲೇ ಇಂಗ್ಲೆಂಡ್ ತಂಡವನ್ನು ಭಾರತ ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಸಿಸಿಐ, ಇದೊಂದು ವಿಶೇಷವಾದ ಸರಣಿ ಗೆಲುವು. ಈ ಗೆಲುವಿನ ಮೂಲಕ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರುವಾಗಿತ್ತು ಎಂದು ಹೇಳಿದೆ.
-
A special series win 👏
— BCCI (@BCCI) August 24, 2021 " class="align-text-top noRightClick twitterSection" data="
A new chapter in Indian cricket history 🙌
As we celebrate 5⃣0⃣ years of #TeamIndia's historic 1971 Test series win in England, Head Coach @RaviShastriOfc reminisces his memories of that epic series. 🔝 👍
Full video 🎥 👇https://t.co/64rke20QF6 pic.twitter.com/PJghyG9mTQ
">A special series win 👏
— BCCI (@BCCI) August 24, 2021
A new chapter in Indian cricket history 🙌
As we celebrate 5⃣0⃣ years of #TeamIndia's historic 1971 Test series win in England, Head Coach @RaviShastriOfc reminisces his memories of that epic series. 🔝 👍
Full video 🎥 👇https://t.co/64rke20QF6 pic.twitter.com/PJghyG9mTQA special series win 👏
— BCCI (@BCCI) August 24, 2021
A new chapter in Indian cricket history 🙌
As we celebrate 5⃣0⃣ years of #TeamIndia's historic 1971 Test series win in England, Head Coach @RaviShastriOfc reminisces his memories of that epic series. 🔝 👍
Full video 🎥 👇https://t.co/64rke20QF6 pic.twitter.com/PJghyG9mTQ
ಒವಲ್ ಟೆಸ್ಟ್ ಸರಣಿ ಗೆದ್ದು 2021ರ ಆಗಸ್ಟ್ 24ಕ್ಕೆ 50 ವರ್ಷ ತುಂಬುತ್ತಿದೆ. 1971ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಮಹತ್ವದ ಸರಣಿ ಗೆಲುವಿನ ನಂತರ ಅಜಿತ್ ವಾಡೇಕರ್ ನೇತೃತ್ವದ ತಂಡ ಇಂಗ್ಲೆಂಡ್ ನೆಲದಲ್ಲಿ ಆಂಗ್ಲನ್ನರನ್ನು ಸೋಲಿಸಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು.
ಇದನ್ನೂ ಓದಿ: ಲಾರ್ಡ್ಸ್ನಲ್ಲಿ ಸಿರಾಜ್ರಿಂದ ಸರ್ವಶ್ರೇಷ್ಠ ಪ್ರದರ್ಶನ.. ಕಪಿಲ್ ದೇವ್ ದಾಖಲೆ ಪುಡಿ ಪುಡಿ..
'ನಾನು ಆಗ ಒಂಬತ್ತು ವರ್ಷ ವಯಸ್ಸಿನವನಾಗಿದ್ದೆ. ಆ ಟೆಸ್ಟ್ ಪಂದ್ಯದಲ್ಲಿನ ಪ್ರತಿ ಚೆಂಡಿನ ಬಗ್ಗೆ ರೇಡಿಯೋದಲ್ಲಿ ಕೇಳುತ್ತಿದ್ದುದು ನನಗಿನ್ನೂ ನೆನಪಿದೆ. ಫಾರುಖ್ ಇಂಜಿನಿಯರ್ ಎರಡೂ ಇನ್ನಿಂಗ್ಸ್ ಮೂಲಕ ರನ್ ಗಳಿಸಿದ್ದರು. ವಿಶಿ, ಅಜಿತ್ ವಾಡೇಕರ್ ಪಂದ್ಯದಲ್ಲಿ ಕೆಲವು ರನ್‌ಗಳನ್ನು ಪಡೆದಿದ್ದರು' ಎಂದು ಬಿಸಿಸಿಐ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಲಾರ್ಡ್ಸ್ ಸೋಲಿನಿಂದ ಕಂಗೆಟ್ಟ ಇಂಗ್ಲೆಂಡ್ ತಂಡಕ್ಕೆ ಮರಳಲಿದ್ದಾರಾ ಸ್ಟೋಕ್ಸ್?