ETV Bharat / sports

ಪಾಕ್​ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ: ವೃತ್ತಿ ಜೀವನದ ಅತ್ಯುತ್ತಮ ಸಾಧನೆ ಮಾಡಿದ ಆದಿಲ್​ ರಶೀದ್​ - ಪಾಕಿಸ್ತಾನ ಕ್ರಿಕೆಟ್​

ಓಲ್ಡ್​ ಟ್ರಾಫೋರ್ಡ್​ನಲ್ಲಿ ನಡೆದ 3ನೇ ಟಿ - 20 ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಉತ್ತಮ ಪ್ರದರ್ಶನ ನೀಡಿದ್ದು, ಇಂಗ್ಲೆಂಡ್​ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

England
ಇಂಗ್ಲೆಂಡ್​ಗೆ ಜಯ
author img

By

Published : Jul 21, 2021, 12:50 PM IST

ಮ್ಯಾಂಚೆಸ್ಟರ್: ಓಲ್ಡ್​ ಟ್ರಾಫೋರ್ಡ್​ನಲ್ಲಿ ನಡೆದ 3ನೇ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ ಮೂರು ವಿಕೆಟ್‌ಗಳ ಗೆಲುವು ಸಾಧಿಸಿದೆ. 2-1 ಅಂತರದಲ್ಲಿ ಇಂಗ್ಲೆಂಡ್​ ಜಯ ಸಾಧಿಸಲು ಲೆಗ್ ಸ್ಪಿನ್ನರ್ ಆದಿಲ್ ರಶೀದ್ (35 ರನ್​ಗೆ 4 ವಿಕೆಟ್) ಉತ್ತಮ ಪ್ರದರ್ಶನವೂ ಕಾರಣವಾಗಿದ್ದು, ವೃತ್ತಿ ಜೀವನದ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಟಾಸ್​ ಗೆದ್ದ ಇಂಗ್ಲೆಂಡ್​ ಬೌಲಿಂಗ್​ ಆಯ್ದುಕೊಂಡಿತು. ಇನ್ನು ಪಾಕಿಸ್ತಾನ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 154 ರನ್​ ಗಳಿಸಿತು. ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ತಂಡ 19.4 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 155 ರನ್​ ಬಾರಿಸಿ ಗೆಲುವು ಸಾಧಿಸಿತು. ಇನ್ನು ಇಂಗ್ಲೆಂಡ್​ ತಂಡದ ಲೆಗ್-ಸ್ಪಿನ್ನರ್ ರಶೀದ್ 35 ರನ್​ಗೆ 4 ವಿಕೆಟ್​ಗಳನ್ನು ಪಡೆದುಕೊಂಡು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಇಂಗ್ಲೆಂಡ್ ತಂಡದ ಓಪನರ್ ಜೇಸನ್ ರಾಯ್ 34 ಬಾಲ್​ಗೆ 64 ರನ್ ಗಳಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದರು. ಆದರೆ, ನಾಯಕ ಇಯೊನ್ ಮೋರ್ಗಾನ್ 21 ರನ್ ಗಳಿಸಿ ಪೆವಿಲಿಯನ್​ ಸೇರಿಕೊಂಡರು. ಬಳಿಕ ಡೇವಿಡ್ ಮಲನ್ 33 ಬಾಲ್​ಗೆ 31 ರನ್​ ಗಳಿಸಿದರು.

ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಐದು ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಮೊಹಮ್ಮದ್ ರಿಜ್ವಾನ್ 57 ಬಾಲ್​ಗೆ 76 ರನ್​ ಗಳಿಸಿದರು. ಸಾಕಿಬ್ ಮೆಹಮೂದ್ ಮತ್ತು ಜೋರ್ಡಾನ್ ಅವರು ಜೊತೆಯಾಟದ ಮೂಲಕ 40 ರನ್​ಗಳ ಕೊಡುಗೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.