ETV Bharat / sports

ಲಾಸ್ಟ್​ ಓವರ್​ ಮ್ಯಾಜಿಕ್​.. ಇಂಗ್ಲೆಂಡ್​ ವಿರುದ್ಧ ಕೇವಲ 1 ರನ್ನಿಂದ ಸೋತ ವೆಸ್ಟ್​ ಇಂಡೀಸ್​..

author img

By

Published : Jan 24, 2022, 2:06 PM IST

ಇಂಗ್ಲೆಂಡ್​ನ ಸಕೀಬ್​ ಮೊಹಮೂದ್​ ಎಸೆದ 20ನೇ ಓವರ್​ನಲ್ಲಿ ವೆಸ್ಟ್​ ಇಂಡೀಸ್​ನ ಬೌಲರ್​ ಅಕಿಲ್​ ಹುಸೈನ್​ 2 ವೈಡ್​ ಸಮೇತ 4,4,6,6,6 ಬಾರಿಸಿ 28 ರನ್​ ಪೇರಿಸಿದರು. ಆದರೆ, ಮೊದಲ ಎಸೆತದಲ್ಲಿ ಯಾವುದೇ ರನ್​ ಬಾರದ ಕಾರಣ ವೆಸ್ಟ್​ ಇಂಡೀಸ್​ ಕೇವಲ 1 ರನ್​ ಅಂತರದಿಂದ ಸೋಲುಂಡಿತು..

west-indies
ವೆಸ್ಟ್​ಇಂಡೀಸ್​

ಬ್ರಿಡ್ಜ್​ಟೌನ್​(ವೆಸ್ಟ್​ಇಂಡೀಸ್​) : ಇಲ್ಲಿ ನಡೆದ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವಿನ ಟಿ-20 ಪಂದ್ಯ ರೋಚಕ ಅಂತ್ಯ ಕಂಡಿದೆ. ಇಂಗ್ಲೆಂಡ್​ ನೀಡಿದ್ದ 171 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್​ ಇಂಡೀಸ್​ 170 ರನ್​ ಬಾರಿಸಿ ಕೇವಲ 1 ರನ್ನಿಂದ ವೀರೋಚಿತ ಸೋಲುಂಡಿದೆ.

ವೆಸ್ಟ್​ ಇಂಡೀಸ್​ ಗೆಲುವಿಗೆ ಕೊನೆಯ ಓವರ್​ನಲ್ಲಿ 6 ಎಸೆತದಲ್ಲಿ 30 ರನ್​ ಬೇಕಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ಆಲ್​ರೌಂಡರ್​ ರೊಮಾರಿಯೋ ಶೆಫರ್ಡ್​ ಮತ್ತು ಬಾಲಂಗೋಚಿ ಅಕಿಲ್​ ಹುಸೈನ್​ 9ನೇ ವಿಕೆಟ್​ಗೆ ಮುರಿಯದ 88 ರನ್​ ಪೇರಿಸಿ ಕೆಚ್ಚೆದೆಯ ಆಟವಾಡಿದರೂ ಅದೃಷ್ಟ ವೆಸ್ಟ್​ ಇಂಡೀಸ್​ ಪರವಿರಲಿಲ್ಲ.

ಇಂಗ್ಲೆಂಡ್​ನ ಸಕೀಬ್​ ಮೊಹಮೂದ್​ ಎಸೆದ 20ನೇ ಓವರ್​ನಲ್ಲಿ ವೆಸ್ಟ್​ ಇಂಡೀಸ್​ನ ಬೌಲರ್​ ಅಕಿಲ್​ ಹುಸೈನ್​ 2 ವೈಡ್​ ಸಮೇತ 4,4,6,6,6 ಬಾರಿಸಿ 28 ರನ್​ ಪೇರಿಸಿದರು. ಆದರೆ, ಮೊದಲ ಎಸೆತದಲ್ಲಿ ಯಾವುದೇ ರನ್​ ಬಾರದ ಕಾರಣ ವೆಸ್ಟ್​ ಇಂಡೀಸ್​ ಕೇವಲ 1 ರನ್​ ಅಂತರದಿಂದ ಸೋಲುಂಡಿತು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ್ದ ಪ್ರವಾಸಿ ಇಂಗ್ಲೆಂಡ್​ ತಂಡ, ಆರಂಭಿಕ ಆಟಗಾರರಾದ ಜಾಸನ್​ ರಾಯ್​(45), ಮೊಯಿನ್​ ಅಲಿ(31) ಹೋರಾಟದಿಂದ 20 ಓವರ್​ಗಳಲ್ಲಿ 171 ರನ್​ ಗಳಿಸಿತ್ತು. ಇದರಿಂದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಇಂಗ್ಲೆಂಡ್​ 1-1 ಸರಣಿ ಸಮಬಲ ಸಾಧಿಸಿದೆ. ಮೊದಲ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಜಯ ಸಾಧಿಸಿತ್ತು.

ಇದನ್ನೂ ಓದಿ: ಆಟದ ಮೇಲಿನ ಒತ್ತಡದಿಂದಲೇ ನಾಯಕತ್ವ ಬಿಟ್ಟ ವಿರಾಟ್​ ಕೊಹ್ಲಿ: ಪಾಕಿಸ್ತಾನದ ಶೋಯೆಬ್​ ಅಖ್ತರ್​ ಉವಾಚ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.