ETV Bharat / sports

ಪಾಕ್​ ಬೌಲರ್​ಗಳು ಭಾರತದಂತಲ್ಲ, ಇಂಗ್ಲೆಂಡ್​ಗೆ ವಾಕ್​ಓವರ್​​ ಸಿಗುವುದಿಲ್ಲ: ಶೋಯಬ್​ ಅಖ್ತರ್ ವ್ಯಂಗ್ಯ - ಟಿ20 ವಿಶ್ವಕಪ್‌ ಫೈನಲ್‌

ಪಾಕಿಸ್ತಾನದ ಬೌಲರ್‌ಗಳು ಭಾರತದಂತಲ್ಲ ಎಂಬುದು ಇಂಗ್ಲೆಂಡ್‌ಗೆ ತಿಳಿದಿದೆ. ಆಂಗ್ಲರು ಪಾಕ್​ ಎದುರು ಟಿ20 ವಿಶ್ವಕಪ್‌ ಫೈನಲ್‌ ಗೆಲುವಿಗೆ ಕಷ್ಟಪಡಬೇಕಾಗುತ್ತದೆ. ಇಂಗ್ಲೆಂಡ್​​ ವಾಕ್‌ಓವರ್ ಪಡೆಯಲು ಸಾಧ್ಯವಿಲ್ಲ ಎಂದು ಪಾಕ್​ ಮಾಜಿ ವೇಗದ ಬೌಲರ್​ ಶೋಯಬ್​ ಅಖ್ತರ್​ ಕಿಚಾಯಿಸಿದ್ದಾರೆ.

England know Pakistan bowlers are not like: Shoaib Akhtar
ಶೋಯಬ್​ ಅಖ್ತರ್ ವ್ಯಂಗ್ಯ
author img

By

Published : Nov 13, 2022, 10:10 AM IST

ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿಂದು ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಲಿವೆ. ಪಂದ್ಯದ ಬಗ್ಗೆ ಮಾತನಾಡಿರುವ ಪಾಕ್​ನ ಮಾಜಿ ವೇಗಿ ಶೋಯಬ್​ ಅಖ್ತರ್​, ತಮ್ಮ ಬೌಲರ್​ಗಳನ್ನು ಹೊಗಳುತ್ತ ಭಾರತ ತಂಡದ ಬೌಲರ್​ಗಳ ಸಾಮರ್ಥ್ಯದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.

ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅದ್ಭುತ ಆಲ್‌ರೌಂಡ್ ಪ್ರದರ್ಶನ ತೋರಿದ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಭಾರತದ ಬೌಲರ್​ಗಳು ವಿಕೆಟ್​ ಕೀಳಲು ಹೆಣಗಾಡಿದ್ದರು. ಆರಂಭಿಕ ಜೋಡಿ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಸ್ಫೋಟಕ ಬ್ಯಾಟಿಂಗ್​ ಮೂಲಕ ಭಾರತೀಯರ ಬೆವರಿಳಿಸಿ ತಂಡವನ್ನು ಫೈನಲ್​​ಗೆ ಕೊಂಡೊಯ್ದಿದ್ದರು.

ಪೈನಲ್​ಗೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಎಚ್ಚರಿಕೆ ನೀಡಿರುವ ಮಾಜಿ ವೇಗಿ ಶೋಯಬ್ ಅಖ್ತರ್, 'ಫೈನಲ್​ನಲ್ಲಿ ಬಾಬರ್ ಅಜಮ್ ನೇತೃತ್ವದ ತಂಡವನ್ನು ಎದುರಿಸುವುದು ಇಂಗ್ಲೆಂಡ್‌ಗೆ ಅಷ್ಟು ಸುಲಭವಲ್ಲ. ಇಂಗ್ಲೆಂಡ್ ತಂಡವು ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಆದರೆ ಪಾಕಿಸ್ತಾನದ ಬೌಲರ್‌ಗಳು ಭಾರತದಂತಲ್ಲ ಎಂಬುದು ಇಂಗ್ಲೆಂಡ್‌ಗೆ ತಿಳಿದಿದೆ. ಆಂಗ್ಲರು ಪಾಕ್​ ಎದುರು ಗೆಲುವಿಗೆ ಕಷ್ಟಪಡಬೇಕಾಗುತ್ತದೆ. ಪಾಕ್​ ಜೊತೆ ಇಂಗ್ಲೆಂಡ್​​ ವಾಕ್‌ಓವರ್ ಪಡೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್​: ಇಂದು ಯಾರಿಗೆ ಒಲಿಯಲಿದೆ ಚುಟುಕು ಕ್ರಿಕೆಟ್​ ಚಾಂಪಿಯನ್​ ಪಟ್ಟ?

ಪಾಕ್​ ಆರಂಭಿಕರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಅಖ್ತರ್​, 'ತಂಡವು ಬಾಬರ್ ಮತ್ತು ರಿಜ್ವಾನ್ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಇವರಿಬ್ಬರ​ ಸ್ಟ್ರೈಕ್ ರೇಟ್ ಏರಿಕೆ ಆಗಿರುವುದು ತಂಡಕ್ಕೆ ಪ್ರಮುಖ ಉತ್ತೇಜನವಾಗಿದೆ. ಮೆಲ್ಬೋರ್ನ್‌ನಲ್ಲಿನ ವಿಕೆಟ್ ಇಬ್ಬರಿಗೂ ಸ್ಟ್ರೈಕ್ ರೇಟ್ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ' ಎಂದಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಮುಂದಿನ ವಾರ ಟೀಂ ಇಂಡಿಯಾ ಕೂಡ ಹೊರಬರಲಿದೆ: ಶೋಯಬ್ ಅಖ್ತರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.