ETV Bharat / sports

ಕಿವೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಐಪಿಎಲ್​​ನಲ್ಲಿದ್ದ ಇಂಗ್ಲಿಷ್​​ ಕ್ರಿಕೆಟಿಗರಿಗೆ ಅವಕಾಶವಿಲ್ಲ - ಇಂಗ್ಲೆಂಡ್ ಐಪಿಎಲ್ ಆಟಗಾರರು

ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಜೂನ್​ 2 ರಿಂದ ಲಾರ್ಡ್ಸ್​ನಲ್ಲಿ ಟೆಸ್ಟ್​ ಸರಣಿ ಆರಂಭವಾಗಲಿದೆ. ಬ್ರಿಟಿಷ್​ ಮಾಧ್ಯಮವೊಂದರ ಪ್ರಕಾರ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಭಾಗವಹಿಸಿದ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.

ಐಪಿಎಲ್ ಇಂಗ್ಲೀಷ್ ಆಟಗಾರರು
ಐಪಿಎಲ್ ಇಂಗ್ಲೀಷ್ ಆಟಗಾರರು
author img

By

Published : May 15, 2021, 7:40 PM IST

ಲಂಡನ್​: 2021ರ ಐಪಿಎಲ್​ನಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್​ನ ಆಟಗಾರರಿಗೆ ಮುಂಬರುವ ನ್ಯೂಜಿಲ್ಯಾಂಡ್​ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಜೂನ್​ 2 ರಿಂದ ಲಾರ್ಡ್ಸ್​ನಲ್ಲಿ ಟೆಸ್ಟ್​ ಸರಣಿ ಆರಂಭವಾಗಲಿದೆ. ಬ್ರಿಟೀಷ್​ ಮಾಧ್ಯಮವೊಂದರ ಪ್ರಕಾರ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಭಾಗವಹಿಸಿದ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.

ಐಪಿಎಲ್​ನಲ್ಲಿ ಭಾಗವಹಿಸಿದ್ದ ಟೆಸ್ಟ್​ ತಂಡದ ಖಾಯಂ ಆಟಗಾರರಾದ ಕ್ರಿಸ್​ ವೋಕ್ಸ್​, ಸ್ಯಾಮ್ ಕರ್ರನ್, ಮೊಯೀನ್ ಅಲಿ, ಜೋಶ್ ಬಟ್ಲರ್​, ಜಾನಿ ಬೈರ್​​ಸ್ಟೋವ್​ ಈ ಸರಣಿಯನ್ನು ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಐಪಿಎಲ್ ರದ್ದಾದ ನಂತರ ಮೇ 5ರಂದು ಇಂಗ್ಲೆಂಡ್​ಗೆ ತೆರಳಿದ್ದಾರೆ. ಅಲ್ಲಿ ಅವರು 10 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಹಾಗಾಗಿ ಅವರನ್ನು ಟೆಸ್ಟ್​ ಸರಣಿಯಲ್ಲಿ ಆಡಿಸುವ ಆತುರ ಮ್ಯಾನೇಜ್​ಮೆಂಟ್​ಗಿಲ್ಲ. ಮುಂಬರುವ ಆ್ಯಶಸ್​​​ ಸರಣಿಯು ದೃಷ್ಟಿಯಿಂದ ದೊಡ್ಡ ಬಳಗದ ಅಗತ್ಯತೆಯಿದೆ. ಹಾಗಾಗಿ ನಾವು ಈ ಸರಣಿಯಲ್ಲಿ ಕೆಲವು ಹೊಸ ಮುಖಗಳನ್ನು ಆಯ್ಕೆ ಮಾಡಲು ಬಯಸಿದ್ದೇವೆ ಎಂದು ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್​ ಆಶ್ಲೇ ಗಿಲ್ಸ್​ ಹೇಳಿದ್ದಾರೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್ ಆಡುವುದನ್ನು ನಿಲ್ಲಿಸಲು ಸ್ಟಾರ್ ಇಂಡಿಯನ್ ಬೌಲರ್ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.